ಕಳ್ಳಭಟ್ಟಿ ದುರಂತ: ಆರೋಪಿ ಬಿಜೆಪಿ ಶಾಸಕ ವಜಾ

ಅಲಿಗಡ: ಮೇ 27ರಂದು ಉತ್ತರಪ್ರದೇಶ ರಾಜ್ಯದ ಅಲಿಗಡ ಜಿಲ್ಲೆಯಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ 35 ಜನರು ಸಾವಿಗೀಡಾಗಿರುವ ಘಟನೆಗೆ ಸಂಭಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಶಾಸಕ ರಿಷಿ ಶರ್ಮಾ ಅವರನ್ನು ಬಿಜೆಪಿ ಪಕ್ಷವು ಅವರನ್ನು ವಜಾ ಮಾಡಿದೆ.

‘ರಿಷಿ ಶರ್ಮಾ ಅವರ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಿಷಿಪಾಲ್ ಪಾಲ್‌ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಕಳ್ಳಭಟ್ಟಿ ದುರಂತ: 22ಕ್ಕೆ ಏರಿದ ಸಾವಿನ ಸಂಖ್ಯೆ- 28 ಜನರ ಸ್ಥಿತಿ ಗಂಭೀರ

‘ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಿಷಿ ಶರ್ಮಾ ಸೇರಿದಂತೆ ಐವರನ್ನು ಬಂಧಿಸಿದ್ದರು. ಶಾಸಕ ರಿಷಿ ಶರ್ಮಾ ಅವರನ್ನು ಪೊಲೀಸರು ನೆನ್ನೆ ಬಂಧಿಸಿದ್ದರು. ಮುಖ್ಯ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

‘ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಮದ್ಯ ಮಾಫಿಯಾದ ಪೂರ್ಣ ಜಾಲವನ್ನು ಬಹಿರಂಗಪಡಿಸುವ ನಿರೀಕ್ಷೆ ಇದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಸಾಧುಗಳ ನಡುವೆ ಅಡಗಿದ್ದ ರಿಷಿ ಶರ್ಮಾ!

ಕಳ್ಳಭಟ್ಟಿ ದುರಂತದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿ ರಿಷಿ ಶರ್ಮಾ ನಾಪತ್ತೆಯಾಗಿದ್ದರು. ಆದರೆ, ಆಪ್ತರೊಬ್ಬರ ವಿಡಿಯೊದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶರ್ಮಾ ಅವರನ್ನು ಪತ್ತೆ ಹಚ್ಚುವಲ್ಲಿ ಉತ್ತರ ಪ್ರದೇಶ ಪೊಲೀಸರು ಸಫಲರಾಗಿದ್ದಾರೆ. ಹಾಪುರದ ಸಮೀಪದ ಘರ್‌ಮುಕ್ತೇಶ್ವರ್ ಆಶ್ರಮದ ಸಾಧುಗಳ ಗುಂಪಿನ ನಡುವೆ ಅಡಗಿದ್ದ ರಿಷಿ ಶರ್ಮಾ ಅಲ್ಲಿಂದಲೂ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಖಚಿತ ಮಾಹಿತಿಯ ಮೇರೆಗೆ ಅಲಿಗಡ–ಬುಲಂದ್‌ಶಹರ್ ಗಡಿ ಪ್ರದೇಶದಲ್ಲಿ ಶರ್ಮಾ ಅವರನ್ನು ಬಂಧಿಸಿದರು.

ಹಿಮಾಚಲ ಪ್ರದೇಶದ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶರ್ಮಾ ಅವರ ಸಹಚರರು ಇದ್ದ ಸ್ಥಳಗಳಲ್ಲಿ 9 ದಿನಗಳ ಕಾಲ ಶೋಧ ಕಾರ್ಯ ಕೈಗೊಳ್ಳಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *