ಬಿಜೆಪಿ-ಜೆಡಿಎಸ್‌ ಎರಡು ಪಕ್ಷಗಳು ದುರ್ಬಲವಾಗಿದ್ದು ಮೈತ್ರಿ ಅನಿವಾರ್ಯ:ಜಗದೀಶ್ ಶೆಟ್ಟರ್‌

ಹುಬ್ಬಳ್ಳಿ: ಅಸಹಾಯಕರು ಒಂದಾಗುವುದು ಸಾಮಾನ್ಯ. ಅದೇ ರೀತಿ, ಬಿಜೆಪಿ-ಜೆಡಿಎಸ್‌ ಎರಡು ಪಕ್ಷಗಳು ದುರ್ಬಲವಾಗಿದ್ದು ಮೈತ್ರಿ ಅನಿವಾರ್ಯವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ಸಿಎಂ ಸಿದ್ದರಾಮಯ್ಯ

ಮೈತ್ರಿ ವಿಚಾರ ಅವರಿಗೆ ಬಿಟ್ಟದ್ದು. ಎರಡು ಪಕ್ಷಗಳ ನಡುವೆ ಪೈಪೋಟಿ ಇತ್ತು. ಈಗ ಸ್ವಯಂ ಅನುಕೂಲಕ್ಕೆ ಮೈತ್ರಿ ಮಾಡಿಕೊಳ್ಳುತ್ತಿವೆ. ಆ ಪಕ್ಷಗಳ ಮೇಲೆ ಜನರಿಗೆ ವಿಶ್ವಾಸ ಮತ್ತು ನಂಬಿಕೆ ಹೋಗಿದೆ ಎಂದು ಅವರು ಶುಕ್ರವಾರ ಸೆ-08 ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಬಲಗೊಂಡಿದೆ.ಅದಕ್ಕಾಗಿ ಹಲವು ನಾಯಕರು ಬರಲು ಸಿದ್ಧರಾಗಿದ್ದಾರೆ. ಯಾರೆಲ್ಲ ಸೇರ್ಪಡೆ ಆಗುವರು ಎಂಬವುದನ್ನು ಈಗಲೇ ಹೇಳಲು ಆಗುವುದಿಲ್ಲ. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇತರ ರಾಜ್ಯಗಳಲ್ಲೂ ಕಾಂಗ್ರೆಸ್‌ ಬಲಗೊಳ್ಳುತ್ತಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *