ಬೆಂಗಳೂರು: ನಿರೀಕ್ಷಿಸಿದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಇನ್ನೂ ಲಭ್ಯವಾಗಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ಮೋದಿ ಎಂದುಕೊಂಡಿದ್ದ ಜನರ ನಿರೀಕ್ಷೆ ನಿಜವಾಗುತ್ತಿದೆ. ಆದರೆ ನಿರೀಕ್ಷಿಸಿದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಮುನ್ನಡೆ ಇನ್ನೂ ಲಭ್ಯವಾಗಿಲ್ಲ.
300 ರಿಂದ 350 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು, ಆದರೆ ಸಂಖ್ಯೆಯಲ್ಲಿ ಕೊಂಚ ಹಿನ್ನಡೆಯಾಗಬಹುದು, ಆದರೆ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವ ಮಾತಿಗೆ ಜನ ಮನ್ನಣೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬಹುಮತದತ್ತ ಎನ್‌ಡಿಎ ದಾಪುಗಾಲು, 270+ ಕ್ಷೇತ್ರಗಳಲ್ಲಿ ಮುನ್ನಡೆ, 200+ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
ಈಗಾಗಲೇ ಯಾವುದನ್ನೂ ನಿರ್ಧಾರಿತವಾಗಿ ಹೇಳಲಾಗಲ್ಲ, ಒಂದು ಗಂಟೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ ಅವರು, 2014 ಮತ್ತು 2019 ರ ಚುನಾವಣೆ ಸಂದರ್ಭದಲ್ಲೂ ಬೆಳಗಿನ 11 ಗಂಟೆ ಹೊತ್ತಿಗೆ ಇದೇ ರೀತಿಯ ವಾತಾವರಣವಿತ್ತು, ಆದರೆ ಮಧ್ಯಾಹ್ನವಾಗುತ್ತಿದಂತೆಯೇ ಎನ್‌ಡಿ ಎ ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದು ಬೀಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ ಎಂಬ ವಿಶ್ವಾಸವಂತೂ ಇದೆ ಎಂದು ತಿಳಿಸಿದರು.
ಇದನ್ನೂ ನೋಡಿ: ಲೋಕಮತ 2024| ಉತ್ತರದಲ್ಲಿ, ದಕ್ಷಿಣದಲ್ಲಿ ತೀವ್ರ ಪೈಪೋಟಿ, ಬಿಜೆಪಿಗೆ ಹಿನ್ನಡೆ Janashakthi Media