ಉದ್ಯೋಗವನ್ನಂತು ಸೃಷ್ಟಿಸಿಲ್ಲ ಸ್ವಯಂ ಬದುಕು ಕಟ್ಟಿಕೊಳ್ಳಲು ಬಿಜೆಪಿ ಬಿಡುತ್ತಿಲ್ಲ – ಸಂತೋಷ್ ಬಜಾಲ್

ಮಂಗಳೂರು: ಭಾರತದ ಪ್ರಜಾಪ್ರಭುತ್ವ ಸರಕಾರಗಳಿಗೆ ಪ್ರಜೆಗಳ ಬದುಕಿನ ಅರಿವೇ ಇಲ್ಲ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ. ಸ್ವಯಂ 

ಮಿನಿವಿಧಾನ ಸೌಧದ ಮುಂಭಾಗ ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಖಾಲೀ ಇರುವ ಸರಕಾರಿ ಹುದ್ದೆಗಳನ್ನು ಭರ್ತಿಗೊಳಿಸಲು ಹಾಗೂ ಕೇಂದ್ರದ ಯುವಜನ ವಿರೋಧಿ ಬಜೆಟನ್ನು ಖಂಡಿಸಿ ನಡೆದ ಪ್ರತಿಭಟನೆ ಭಾವಹಿಸಿ ಮಾನಾಡಿದರು.

ಭಾರತದ ಮಾನವ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕಿದ್ದ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಎಡವಿದೆ. ಉದ್ಯೋಗದ ಭರವಸೆಯೊಂದಿಗೆ ಆಡಳಿತರೂಢವಾದ ಮೋದಿ ಸರಕಾರ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಕೂಡ ಕಸಿದುಕೊಂಡು ಬೀದಿಗೆ ತರುವ ಯೋಜನೆಯನ್ನು ರೂಪಿಸಿದೆ ಎಂದರು. ಸ್ವಯಂ 

ಇನ್ನು ಕೇಂದ್ರದ ಈ ಧೋರಣೆಯಿಂದ ಕಂಗೆಟ್ಟ ಬಡಜನರು ಬದುಕಿಗಾಗಿ ಸಣ್ಣ ವ್ಯಾಪಾರದಲ್ಲಿ ತೊಡಗಿದರೆ ನಗರ ಸೌಂದರ್ಯ, ಸ್ಮಾರ್ಟ್ ಸಿಟಿಗಳ ನೆಪದಲ್ಲಿ ಅವರ ಬದುಕಿನ ಮೇಲೆ ಬುಲ್ಡೋಜರ್ ಹರಿಸುತ್ತಿದೆ. ಈ ಸರಕಾರ ಉದ್ಯೋಗವನ್ನುಂತು ಸೃಷ್ಟಿಸಿಲ್ಲ ಕನಿಷ್ಟ ಸ್ವಯಂ ಬದುಕು ಕಟ್ಟಿಕೊಳ್ಳಲು ಬಿಡುತ್ತಿಲ್ಲ ಎಂದು ಅರೊಪಿಸಿದರು. ಸ್ವಯಂ 

ಇದನ್ನೂ ಓದಿ: ಧಾರಕಾರ ಮಳೆಯಿಂದಾಗಿ ಎಸ್ಕಾಂಗಳಿಗೆ ಒಟ್ಟಾರೆ 96.66 ಕೋಟಿ ರೂ. ನಷ್ಟ; ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್

ಮೋದಿ ಸರ್ಕಾರದ ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆಯು ಭರವಸೆಯಾಗಿ ಉಳಿಯಿತಲ್ಲದೆ ಜಿಎಸ್‌ಟಿ ಮತ್ತು ನೋಟ್ ಬ್ಯಾನ್ಗಳಿಂದ ಅದೆಷ್ಟೋ ಉದ್ಯೋಗಗಳು ಕಡಿತವಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿತು. ಇತ್ತೀಚೆಗೆ ನಡೆದ ಬಜೆಟ್ ನಲ್ಲಿ ಐನೂರು ಪ್ರತಿಷ್ಠಿತ ಕಂಪನಿಗಳಲ್ಲಿ ಇಂಟರ್ಶಿಪ್ ನ ಅಡಿಯಲ್ಲಿ ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ ಎಂಬುದು ಉದ್ಯೋಗಕ್ಕೆ ಸಮವಾಗದು. ‌

ಇನ್ನು ಐಟಿ ಕ್ಷೇತ್ರಗಳಲ್ಲಿ ಹೆಚ್ಚಿಸಿದ ದುಡಿಮೆಯ ಅವಧಿಯೂ ಕೂಡ ಭವಿಷ್ಯದಲ್ಲಿ ನಿರುದ್ಯೋಗ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಯಾವೊಂದು ಯೋಜನೆಯೂ ಆಳುವ ಸರಕಾರದ ಮುಂದಿಲ್ಲ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೈಗಾರಿಕೆಗಳು ಸ್ಥಳೀಯರಿಗೆ, ತುಳುನಾಡಿನ ಯುವಜನರಿಗೆ ಉದ್ಯೋಗ ನೀಡಲು ಹಿಂದಡಿಯಿಡುತ್ತಿದೆ. ರಾಜ್ಯ ಸರಕಾರ ಖಾಸಗೀ ಕ್ಷೇತ್ರದಲ್ಲೂ ಸ್ಥಳೀಯರಿಗೆ ಮೀಸಲಾತಿ ಒದಗಿಸಲು ಮಾಡಿದ ಕ್ಯಾಬಿನೇಟ್ ತೀರ್ಮಾನವನ್ನು ಕೂಡ ಧಣಿಕರು ವಿರೋಧಿಸಿದ್ದಲ್ಲದೆ ರದ್ದುಗೊಳಿಸಲು ಒತ್ತಡವಿತ್ತರು.

ಈ ಬಗ್ಗೆ ರಾಜ್ಯದ ಸಿದ್ದರಾಮಯ್ಯ ಸರಕಾರ ಶ್ರೀಮಂತ ಕಾರ್ಪೊರೇಟ್ ಕಂಪೆನಿಗಳ ಪರವಾದ ಹಿತಾಸಕ್ತಿಯನ್ನು ಹೊಂದಿದೆಯೇ ವಿನಃ ಜನತೆಯ ಹಿತವನ್ನಲ್ಲ ಎಂದು ಎತ್ತಿ ತೋರಿಸಿದೆ. ಕನಿಷ್ಟ ತಮ್ಮ ಶ್ರಮದಲ್ಲೇ ಬದುಕು ಕಟ್ಟಿಕೊಂಡ ಬೀದಿಬದಿ ವ್ಯಾಪಾರಿಗಳನ್ನೂ ಬದುಕಲು ಬಿಡದೆ ಅವರ ಗೂಡಂಗಡಿಗಳಿಗೆ, ಸಣ್ಣ ಪುಟ್ಟ ವ್ಯಾಪಾರಗಳಿಗೆ ಜೆಸಿಬಿ ಹರಿಸಿದ ಘಟನೆಯ ಬಗ್ಗೆ ಇಲ್ಲಿನ ಶಾಸಕ ವೇದವ್ಯಾಸ ಕಾಮತರು ಬಾಯೇ ಬಿಡುತ್ತಿಲ್ಲ ಎಂದು ಕಟುವಾಗಿ ಟೀಕಿಸಿದರು.

ಇವರ ನೇತೃತ್ವದಲ್ಲಿ ಮಾತ್ರ ರಸ್ತೆ ಮದ್ಯೆ ಸ್ಟ್ರೀಟ್ ಫುಡ್ ಫೆಸ್ಟಿವಲ್ ನಡೆಸಬಹುದು, ಟಿಡಿಆರ್ ಹಗರಣದ ಮೂಲಕ ಪಾಲಿಕೆಗೆ ನಷ್ಟ ಮಾಡಬಹುದು, ಜೂಜುಕೇಂದ್ರಗಳು ರಾಜಾರೋಷವಾಗಿ ನಡೆಯಬಹುದು, ಅಕ್ರಮ ಮರಳುಗಾರಿಕೆಯಲ್ಲಿ ಪ್ರಾಕೃತಿಕ ಸಂಪತ್ತನ್ನು ಲೂಟಿ ಹೊಡೆಯಬಹುದು ಆದರೆ ಬಡವರು ಮಾತ್ರ ಬೀದಿಬದಿ ವ್ಯಾಪಾರ ನಡೆಸಿ ತಮ್ಮ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಬಾರದೆಂಬುದು ಎಷ್ಟು ನ್ಯಾಯ ಎಂದು ಬಿಜೆಪಿ ಶಾಸಕರು ಮತ್ತು ಸಂಸದರು ಉತ್ತರಿಸಬೇಕು ಎಂದರು.

ಡಿವೈಎಫ್ಐ ಮಂಗಳೂರು ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಡಿವೈಎಫ್ಐ ನ ಜಿಲ್ಲಾ ಮುಖಂಡರಾದ ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ, ತಯ್ಯೂಬ್ ಬೆಂಗರೆ, ಸುನೀಲ್ ತೇವುಲ, ಅಶ್ರಫ್ ಹರೇಕಳ, ಶ್ರೀನಾಥ್ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ನಿರಂಜನರ ಕಥಾ ಪ್ರಪಂಚ – ಡಾ. ಬಿ.ಆರ್. ಮಂಜುನಾಥ್ Janashakthi Media

Donate Janashakthi Media

Leave a Reply

Your email address will not be published. Required fields are marked *