ಕಳೆದ 10 ವರ್ಷಗಳಲ್ಲಿ ಬಿಜೆಪಿ ಜಾತ್ಯತೀತವೂ ಆಗಿಲ್ಲ, ನಾಗರಿಕ ಎಂದು ಅನಿಸಿಕೊಳ್ಳಲೂ ಇಲ್ಲ; ಕಪಿಲ್ ಸಿಬಲ್

ನವದೆಹಲಿ: ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಜಾತ್ಯತೀತ ನಾಗರಿಕ ಸಂಹಿತೆ”ಗಾಗಿ  ಬಲವಾಗಿ ಪ್ರತಿಪಾದಿಸಿದ್ದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದೆ. ಬಿಜೆಪಿ 

ಕಳೆದ 10 ವರ್ಷಗಳಲ್ಲಿ ಬಿಜೆಪಿ ಜಾತ್ಯತೀತವೂ ಆಗಿಲ್ಲ, ನಾಗರಿಕ ಎಂದು ಅನಿಸಿಕೊಳ್ಳಲೂ ಇಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಅವರು, ಜಾತ್ಯತೀತ ಮತ್ತು ನಾಗರಿಕ ಸಮಾಜವನ್ನು ಹೊಂದಿರುವ ದೇಶವಾಗುವುದು ಈ ಸಮಯದ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನು ಓದಿ: 2027ರ ವೇಳೆಗೆ ಭಾರತ 3ನೇ ಆರ್ಥಿಕ ದೇಶವಾಗಲಿದೆ: ಐಎಂಎಫ್ ನ ಗೀತಾ ಗೋಪಿನಾಥ್

ಕೆಂಪು ಕೋಟೆಯ ಆವರಣದಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಅವರು “ಜಾತ್ಯತೀತ ನಾಗರಿಕ ಸಂಹಿತೆ” ದೇಶದ ಅಗತ್ಯವಾಗಿದೆ ಎಂದು ಹೇಳಿದ್ದರು. ಈಗಿರುವ ಕಾನೂನುಗಳನ್ನು “ಕೋಮು ನಾಗರಿಕ ಸಂಹಿತೆ” ಎಂದು ವಿವರಿಸಿದ್ದ ಮೋದಿಯವರು ಅವು ತಾರತಮ್ಯವಾಗಿದೆ ಎಂದು ಹೇಳಿದ್ದರು.

ಮೋದಿಯವರ ಹೇಳಿಕೆಗಳನ್ನು ಉಲ್ಲೇಖಿಸಿ ಕಪಿಲ್ ಸಿಬಲ್, ಎಕ್ಸ್ ಪೋರ್ಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇಂದಿಗೆ ಖಂಡಿತವಾಗಿಯೂ ಬೇಕು, ಜಾತ್ಯತೀತ ನಾಗರಿಕ ಸಂಹಿತೆ ನಮಗೆ ಅತ್ಯಗತ್ಯವಾಗಿದೆ. ಕೋಮು ನಾಗರಿಕ ಸಂಹಿತೆಯ ಅಡಿಯಲ್ಲಿ 75 ವರ್ಷಗಳನ್ನು ನಾವು ಕಳೆದಿದ್ದೇವೆ ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಬಿಜೆಪಿ ‘ಜಾತ್ಯತೀತ’ ಅಥವಾ ‘ನಾಗರಿಕ’ ಆಗಿಯೇ ಇಲ್ಲ ಎಂದು ಕೂಡ ಟೀಕಿಸಿದ್ದಾರೆ.

ಇದನ್ನು ನೋಡಿ : ರೀ ಕ್ಲೈಮ್ ಅವರ್ ನೈಟ್ಸ್…..ಬೇಕಿದೆ ಮಹಿಳೆಯರಿಗೆ ನಿಜ ಸ್ವಾತಂತ್ರ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *