ಸುಳ್ಳಿನಿಂದ ಭಾರತದ ರಕ್ಷಣೆ ಅಸಾಧ್ಯ: ಪ್ರಧಾನಿ ಮೋದಿಗೆ ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಿರುವ ತನ್ನ “ಸ್ಟ್ಯಾಂಡರ್ಡ್ ಮ್ಯಾಪ್” ನ 2023 ಆವೃತ್ತಿಯನ್ನು ಚೀನಾ ಸೋಮವಾರ ಬಿಡುಗಡೆ ಮಾಡಿದ್ದು, ವಿವಾದ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, “ಭಾರತ ಮಾತೆಯ ಸಮಗ್ರತೆ ಕಾಪಾಡಲು ಸಾಧ್ಯವಿಲ್ಲದಿದ್ದರೆ ಕನಿಷ್ಠ ಪಕ್ಷ ನೀವು ಪಕ್ಕಕ್ಕೆ ಸರಿದು ನಿಲ್ಲಿ, ಸುಳ್ಳಿನಿಂದ ಹಿಂದೂಸ್ಥಾನವನ್ನು ರಕ್ಷಿಸಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿಗೆ ಹೇಳಿದ್ದಾರೆ. 

ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್‌ನ 2023 ರ ಆವೃತ್ತಿಯನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಸೋಮವಾರ ಚೀನಾದ ಸರ್ಕಾರಿ ಮಾಧ್ಯಮವಾದ ಗ್ಲೋಬಲ್ ಟೈಮ್ಸ್ ಟ್ವಿಟರ್‌(ಎಕ್ಸ್‌) ನಲ್ಲಿ ಹೇಳಿದೆ. “ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಹೋಸ್ಟ್ ಮಾಡಿದ ವೆಬ್‌ಸೈಟ್‌ನಲ್ಲಿ ಸ್ಟ್ಯಾಂಡರ್ಡ್ ಮ್ಯಾಪ್ ಸೇವೆಯನ್ನು ಪ್ರಾರಂಭಿಸಲಾಗಿದೆ” ಎಂದು ಅದು ತಿಳಿಸಿದೆ. ಸುಬ್ರಮಣಿಯನ್ ಸ್ವಾಮಿ

ಇದನ್ನೂ ಓದಿ: ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ: ಅಜಿತ್‌ ಪವಾರ್

“ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ರಾಷ್ಟ್ರೀಯ ಗಡಿಗಳ ರೇಖಾಚಿತ್ರ ವಿಧಾನವನ್ನು ಆಧರಿಸಿ ಈ ನಕ್ಷೆಯನ್ನು ಸಂಕಲಿಸಲಾಗಿದೆ” ಎಂದು ಗ್ಲೋಬಲ್ ಟೈಮ್ಸ್‌ ಹೇಳಿದೆ. ಗ್ಲೋಬಲ್ ಟೈಮ್ಸ್ ಪ್ರದರ್ಶಿಸಿದ ನಕ್ಷೆಯು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶ ಮತ್ತು 1962 ರ ಯುದ್ಧದಲ್ಲಿ ಆಕ್ರಮಿಸಿಕೊಂಡ ಅಕ್ಸಾಯ್ ಚಿನ್ ಅನ್ನು ಚೀನಾದ ಭಾಗವಾಗಿ ತೋರಿಸಿದೆ. ಸುಬ್ರಮಣಿಯನ್ ಸ್ವಾಮಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಸುಳ್ಳಿನಿಂದ ಹಿಂದೂಸ್ಥಾನವನ್ನು ರಕ್ಷಿಸಲು ಮತ್ತು ಭಾರತವು ಇನ್ನೊಬ್ಬ ನೆಹರೂ ಅವರನ್ನು ಪಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನೀವು ಒಪ್ಪಿಕೊಳ್ಳಲು ಸಾಧ್ಯವಾಗದ ಅನಿವಾರ್ಯತೆಯಿಂದಾಗಿ ಭಾರತ ಮಾತೆಯ ಸಮಗ್ರತೆಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ನೀವು ಪಕ್ಕಕ್ಕೆ ಸರಿದು ಮಾರ್ಗದರ್ಶನ ಮಂಡಲಕ್ಕೆ ನಿವೃತ್ತರಾಗಬಹುದು ಎಂದು ಮೋದಿಗೆ ಹೇಳಿ” ಎಂದು ಅವರು ತಿಳಿಸಿದ್ದಾರೆ.

“ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅವಿಭಾಜ್ಯ ಅಂಗವಾಗಿ ಉಳಿಯುತ್ತದೆ” ಎಂದು ಭಾರತವು ಚೀನಾಕ್ಕೆ ಪದೇ ಪದೇ ಹೇಳುತ್ತಿದೆ. ನಕ್ಷೆಯು ಚೀನಾದ ಭೂಪ್ರದೇಶವಾಗಿ ತೈವಾನ್ ದ್ವೀಪ ಮತ್ತು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗವನ್ನು ಒಳಗೊಂಡಿದೆ, ಇವೆರಡೂ ಪ್ರದೇಶಗಳು ತನ್ನವೆಂದು ಚೀನಾ ಹಕ್ಕು ಸಾಧಿಸಿದೆ.

ಚೀನಾ ತೈವಾನ್ ಅನ್ನು ತನ್ನ ಮೇನ್‌ಲ್ಯಾಂಡ್‌ ಭಾಗವೆಂದು ಹೇಳಿಕೊಳ್ಳುತ್ತದೆ ಹಾಗೂ ತೈವಾನ್ ಅನ್ನು ಚೀನಾದ ಮೇನ್‌ಲ್ಯಾಂಡ್‌ ಜೊತೆಗೆ ಏಕೀಕರಣ ಮಾಡುವುದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರತಿಜ್ಞೆಯಾಗಿದೆ. ಅದಾಗ್ಯೂ ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಬ್ರೂನಿ ಮತ್ತು ತೈವಾನ್ ದಕ್ಷಿಣ ಚೀನಾ ಸಮುದ್ರದ ಪ್ರದೇಶಗಳು ತಮ್ಮದು ಎಂದು ಪ್ರತಿಪಾದಿಸುತ್ತಿವೆ.

ವಿಡಿಯೊ ನೋಡಿ: ಚಲೋ ಬೆಳ್ತಂಗಡಿ : ದೇವರ ಹೆಸರಿನಲ್ಲಿ ಎಲ್ಲ ಅನಾಚಾರಗಳನ್ನು ಮುಚ್ಚಿಹಾಕಲಾಗುತ್ತಿದೆ – ಮೀನಾಕ್ಷಿ ಬಾಳಿ 

Donate Janashakthi Media

Leave a Reply

Your email address will not be published. Required fields are marked *