ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ : ಸಿಎಂ ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರು: ಕರ್ನಾಟಕದಿಂದಲೇ  ಬಿಜೆಪಿಯ ಅವನತಿ ಪ್ರಾರಂಭವಾಗುತ್ತದೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಪಷ್ಟವಾದ ಬಹುಮತ ದೊರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ವಿಧಾನಸೌಧದಲ್ಲಿ ಜುಲೈ-17 ಸೋಮವಾರ ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಲಾಗಿದೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೋದಿಯವರು 28 ಕಡೆ ಪ್ರವಾಸ ಕೈಗೊಂಡಿದ್ದು, ಅವರು ಬಂದ ಕಡೆಗಳೆಲ್ಲಾ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಸಮರ್ಥವಾಗಿ ಎದುರಿಸಲೇ ಇಲ್ಲ. ಕಾಂಗ್ರೆಸ್ಗೆ ಬಹುಮತ ಬಂದಿದೆ. ಈ ಬಾರಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಸೋಲು ಅನುಭವಿಸಲಿಲ್ವಾ?. ಯುಪಿಎ ಮಿತ್ರಪಕ್ಷಗಳು ಗೆಲ್ಲಲಿವೆ’ ಎಂದರು.

ಇದನ್ನೂ ಓದಿ:ವಿಪಕ್ಷಗಳ ಒಕ್ಕೂಟದ ಮಹಾಮೈತ್ರಿ ಸಭೆ ಆರಂಭ : ಆರು ಅಂಶಗಳ ಬಗ್ಗೆ ಚರ್ಚೆ ಸಾಧ್ಯತೆ!

ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟುಗೂಡಿ ಚುನಾವಣೆ ನಡೆಸಬೇಕೆಂಬ ಅಜೆಂಡಾ ಹೊಂದಿದ್ದು, ಹಾಗಾಗಿ ಚರ್ಚೆ ನಡೆಯುತ್ತಿದೆ ಎಂದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸಲಿದೆ. ಬಿಜೆಪಿ ಮಿತ್ರ ಪಕ್ಷಗಳು ಸೋಲನುಭವಿಸಲಿದ್ದು, ವಿಪಕ್ಷಗಳ ಒಕ್ಕೂಟ ಗೆಲುವು ಸಾಧಿಸಲಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯಾಗಿದ್ದು, ಸುಮಾರು 24 ಪಕ್ಷದ ನಾಯಕರು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ವಿಪಕ್ಷಗಳ ನಾಯಕರು ಇಂದು ಮತ್ತು ನಾಳೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ” ಎಂದು ಸಿಎಂ ವಿವರಿಸಿದರು.

ದೇಶದ ಆರ್ಥಿಕತೆ ಹಾಳು ಮಾಡಿದವರೇ ಬಿಜೆಪಿ ಎಂದು ಸಿಎಂ ಗರಂ ಆಗಿ ಮಾತನಾಡಿದ ಅವರು ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುತ್ತಿರುವುದೇ ಬಿಜೆಪಿಯ ಕೊಡುಗೆ ದೇಶವನ್ನು ಲೂಟಿ ಮಾಡಿದಂತಹ ಪಕ್ಷಗಳು ಇಂದು ಒಂದಾಗುತ್ತಿವೆ ಎಂಬ ಬಿಜೆಪಿ ಪಕ್ಷದ ಹೇಳಿಕೆಗೆ ಉತ್ತರ ನೀಡಿದ ಅವರು, ”ಈ ದೇಶದ ಆರ್ಥಿಕತೆಯನ್ನು ಹಾಳು ಮಾಡಿದವರೇ ಬಿಜೆಪಿಯವರು. ಪ್ರಧಾನಿ ನರೇಂದ್ರ ಮೋದಿಯವರು ಬಂದ ನಂತರ ಬೆಲೆ ಏರಿಕೆ, ಬಡವರು, ರೈತರು, ದಲಿತರು ಇಂದು ಬದುಕಲು ಅಸಾಧ್ಯವಾದ ಪರಿಸ್ಥಿತಿ ಬಂದಿದೆ. ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುವಂತಾಗಿದೆ. ಇದು ಬಿಜೆಪಿಯ ಕೊಡುಗೆ” ಎಂದು ಕಟುವಾಗಿ ಮಾತನಾಡಿದರು.

ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ ಎಂದ ಸಿಎಂ ಜೆಡಿಎಸ್‌ ಸಿದ್ಧಾಂತವಿಲ್ಲದ ಪಕ್ಷಗಳು ಒಂದೆಡೆ ಸೇರುತ್ತಿರುವುದರಿಂದ, ನಾವು ಎನ್‌ಡಿಎ ಕಡೆ ಹೋದರೆ ತಪ್ಪಲ್ಲ, ಪಕ್ಷ ಉಳಿಸಿಕೊಳ್ಳುವುದು ಮುಖ್ಯ ಎಂದು ಜೆಡಿಎಸ್‌  ಕುಮಾರಸ್ವಾಮಿ ಅವರು ಹೇಳುತ್ತಿರುವ ಬಗ್ಗೆ ಉತ್ತರಿಸಿದ ಸಿಎಂ, ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯತೀತ ಸಿದ್ಧಾಂತ ಏನಾಯಿತು. ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತ ಬಲಿ ಕೊಡುತ್ತಿದ್ದಾರೆ ಎಂದರ್ಥ’ ಎಂದು ಗರಂ ಆಗಿ ಮಾತನಾಡಿದರು.

ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿಯೂ 21 ಪಕ್ಷಗಳ ಮುಖಂಡರು ಬಂದರೂ ಪ್ರಯೋಜನವಾಗಲಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರೆನ್ನೆಲ್ಲಾ ಕರೆದಿದ್ದು ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಆ ಸಂಬಂಧವನ್ನು ಮುಂದುವರೆಸಲಿಲ್ಲ ಎಂದು ಹೇಳಿದರು. ನಿತೀಶ್ ಕುಮಾರ್ ಸಿದ್ಧಾಂತ ವಿಚಾರಕ್ಕೆ ಅವರ ವಿಚಾರ ಬೇಡ ಎಂದ ಸಿಎಂ, ಸಿದ್ಧಾಂತದ ಬಗ್ಗೆ ಅವರಿಗೆ ಈಗ ಅರಿವಾಯ್ತಾ? ಈ ಬಾರಿ ಮೋದಿಗೆ ಬಹುಮತ ಸಿಗುವುದಿಲ್ಲ. ಅವರು ಸೋಲುತ್ತಾರೆ. ಕರ್ನಾಟಕದಿಂದಲೇ ಬಿಜೆಪಿ ಪಕ್ಷದ ಅವನತಿ ಆರಂಭವಾಗಿದೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *