ಲೋಕಸಭೆ ಚುನಾವಣೆ | ರಾಹುಲ್ ಗಾಂಧಿ ಆಪ್ತರಿಗೆ ಬಲೆ ಬೀಸುವ ಸಮಿತಿಯಲ್ಲಿ ಬಿ.ಎಲ್. ಸಂತೋಷ್ ಮತ್ತು ಎಸ್‌.ಎಂ. ಕೃಷ್ಣ!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಸಿದ್ದತೆ ಮಾಡುತ್ತಿದ್ದು, ವಿಶೇಷವಾಗಿ ಕಾಂಗ್ರೆಸ್‌ನಿಂದ ಹಲವಾರು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಜ್ಜಾಗಿದೆ ಎಂದು ವರದಿಯಾಗಿದೆ. ಬಿಜೆಪಿ ನಾಯಕತ್ವವು ಈ ಉದ್ದೇಶಕ್ಕಾಗಿ ಈಗಾಗಲೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಅದರಲ್ಲಿ ಕೇಂದ್ರ ಸಚಿವ ಭೂಪಿಂದರ್ ಸಿಂಗ್ ಯಾದವ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸಲಾಗಿದೆ ಎನ್ನಲಾಗಿದೆ. ಈ ಸಮಿತಿ ಪಕ್ಷಕ್ಕೆ ಸೇರುವ ಇತರ ಪಕ್ಷಗಳ ನಾಯಕರನ್ನು ಪರೀಕ್ಷಿಸಿ ನಿರ್ಧರಿಸಲಿದೆ ಎಂದು ವರದಿಯಾಗಿದೆ. ರಾಹುಲ್ ಗಾಂಧಿ

ಹೊಸ ನಾಯಕರ ಸೇರ್ಪಡೆಗಳ ಹಿಂದೆ ಪಕ್ಷದ ಬಲವರ್ಧನೆ ಉದ್ದೇಶ ಪ್ರಮುಖವಾಗಿದ್ದರೂ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವುದು ಬಿಜೆಪಿ ಉದ್ದಶವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ. “ಬಿಜೆಪಿಯು ಚುನಾವಣೆಗಳಲ್ಲಿ ಮತ್ತು ಸೈದ್ಧಾಂತಿಕವಾಗಿ ದುರ್ಬಲವಾಗಿರುವ ಪ್ರದೇಶಗಳಲ್ಲಿ ಪಕ್ಷವನ್ನು ಬಲಪಡಿಸಲು ಹೊಸದಾಗಿ ಪಕ್ಷಕ್ಕೆ ಸೇರುವವರನ್ನು ಸ್ವಾಗತಿಸುತ್ತಿದೆ. ಚುನಾವಣೆಯ ಪೂರ್ವದಲ್ಲಿ, ಇಂತಹ ಸೇರ್ಪಡೆ ಕಾರ್ಯಕ್ರಮಗಳು ಇಡೀ ಚುನಾವಣಾ ವಾತಾವರಣದಲ್ಲಿ ಇರಲಿದೆ. ಆದರೆ ಈ ಬಾರಿ ಪ್ರಮುಖ ಗುರಿ ಕಾಂಗ್ರೆಸ್ ಆಗಿದ್ದು, ಪಕ್ಷದ ಪ್ರಮುಖ ಪ್ರಭಾವಿ ನಾಯಕರ ನಿರ್ಗಮನದಿಂದ ನಿರ್ದಿಷ್ಟ ಪ್ರದೇಶದಲ್ಲಿ ಆ ಪಕ್ಷವನ್ನು ದುರ್ಬಲಗೊಳಿಸುತ್ತದೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ. ರಾಹುಲ್ ಗಾಂಧಿ

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಪೊಲೀಸ್ ಕಮಾಂಡೋ ಮತ್ತು ಮಹಿಳೆ ಸಾವು, ಹಲವರಿಗೆ ಗಾಯ

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೀತಿಗಳ ಪ್ರಮುಖ ಟೀಕಾಕಾರರಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸುವುದು ಮತ್ತು ಪಕ್ಷದಲ್ಲಿ ಅವರ ವರ್ಚಸ್ಸನ್ನು ದುರ್ಬಲಗೊಳಿಸುವುದು ಬಿಜೆಪಿಯ ತಂತ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಈಗಾಗಲೇ ರಾಹುಲ್ ಅವರ ತಂಡದಿಂದ ಹಲವಾರು ಯುವ ನಾಯಕರನ್ನು ಸೇರಿಸಿಕೊಂಡಿದ್ದು, ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಿದೆ.

ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ್ ಮತ್ತು ಬಿಜೆಪಿಯಲ್ಲಿ ಸ್ಥಾನಕ್ಕಾಗಿ ಕಾಯುತ್ತಿರುವ ಮಾಜಿ ಕೇಂದ್ರ ಸಚಿವ ಆರ್ ಪಿ ಎನ್ ಸಿಂಗ್ ಅವರು ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಾಗಿದ್ದಾರೆ.

ಸಚಿನ್ ಪೈಲಟ್ ಮತ್ತು ಮಿಲಿಂದ್ ದಿಯೋರಾ ಅವರನ್ನೂ ಸೆಳೆಯಲು ಬಿಜೆಪಿಯಿಂದ ಕೆಲವು ಪ್ರಯತ್ನಗಳು ನಡೆದಿತ್ತು. ಅದಾಗ್ಯೂ ದಿಯೋರಾ ಅವರು ಅಂತಿಮವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಕಳೆದ ಭಾನುವಾರ ಸೇರ್ಪಡೆಗೊಂಡಿದ್ದರು. ಆದರೆ ಕಾಂಗ್ರೆಸ್ ನಾಯಕತ್ವವು ಸಚಿನ್ ಪೈಲಟ್ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆ | ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!

“ಕಾಂಗ್ರೆಸ್‌ನಿಂದ ಈಗ ಯಾರು ಹೊರಬಂದರೂ ರಾಹುಲ್ ಗಾಂಧಿ ಅವರನ್ನು ಕಳಪೆ ನಾಯಕನಾಗಿ ಬಿಂಬಿಸಿದಂತಾಗುತ್ತದೆ… ಇದು ಅವರ ವೈಫಲ್ಯಗಳ ಮೇಲೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ಈಗಾಗಲೆ ಬಿಜೆಪಿ ಸೇರಿದ ಪ್ರಮುಖ ವ್ಯಕ್ತಿಗಳನ್ನು ಪಕ್ಷವೂ ಇದಕ್ಕಾಗಿ ನಿಯೋಜಿಸಿದೆ. ಇದರಲ್ಲಿ ಹಲವಾರು ಪ್ರಸ್ತುತ ಸಿಎಂಗಳಾದ ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ), ಎನ್ ಬಿರೇನ್ ಸಿಂಗ್ (ಮಣಿಪುರ) ಮತ್ತು ಪೆಮಾ ಖಂಡು (ಅರುಣಾಚಲ ಪ್ರದೇಶ) ಮತ್ತು ಮಾಜಿ ಸಿಎಂಗಳಾದ ನಾರಾಯಣ ರಾಣೆ ಸೇರಿದಂತೆ (ಮಹಾರಾಷ್ಟ್ರ), ಕ್ಯಾಪ್ಟನ್ ಅಮರಿಂದರ್ ಸಿಂಗ್ (ಪಂಜಾಬ್), ವಿಜಯ್ ಬಹುಗುಣ (ಉತ್ತರಾಖಂಡ), ಎಸ್ ಎಂ ಕೃಷ್ಣ (ಕರ್ನಾಟಕ) ಮತ್ತು ದಿಗಂಬರ್ ಕಾಮತ್ (ಗೋವಾ) ಇದ್ದಾರೆ.

ಅಲ್ಲದೆ, ಬಿಜೆಪಿಯು ತನ್ನ ಬೆಂಬಲದ ನೆಲೆಯನ್ನು ವಿಸ್ತರಿಸಲು ಕೇರಳದಲ್ಲಿ ಕ್ರಿಶ್ಚಿಯನ್ನರನ್ನು ಓಲೈಸಲು ಪ್ರಯತ್ನಿಸುತ್ತಿದೆ, ಇದೇ ವೇಳೆ ಪಕ್ಷವು ಅಲ್ಲಿನ ನಾಯಕರಾದ ಕೆ.ಜೆ. ಅಲ್ಫೋನ್ಸ್, ಟಾಮ್ ವಡಕ್ಕನ್ ಮತ್ತು ಅನಿಲ್ ಆಂಟೋನಿ ಸೇರಿದಂತೆ ಸಮುದಾಯದ ಕೆಲವು ಪ್ರಮುಖ ಮುಖಗಳನ್ನು ಇದಕ್ಕಾಗಿ ಸೇರಿಸಿಕೊಂಡಿದೆ. ಹರಿಯಾಣ, ಮಹಾರಾಷ್ಟ್ರ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಪಾಳಯದಲ್ಲಿರುವ ಹಲವಾರು ಸಂಭಾವ್ಯ ನಾಯಕರೊಂದಿಗೆ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೆಲವರು ಈ ತಿಂಗಳಲ್ಲೇ ಬಿಜೆಪಿ ಸೇರಲಿದ್ದಾರೆ ಮತ್ತು ಇನ್ನು ಕೆಲವರು ಚುನಾವಣೆ ಸಮೀಪಿಸಲಿರುವಾಗ ಪಕ್ಷ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

“ಪ್ರಸ್ತುತ, ಯಾವುದೇ ವಿರೋಧ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ಅವರು ಸೇರುವುದರೊಂದಿಗೆ ಕೆಲವು ಅನುಯಾಯಿಗಳನ್ನು ಕರೆತರಬೇಕು. ಅಲ್ಲವೆಂದರೆ, ಪಕ್ಷದಿಂದ ತಮ್ಮ ನಿರ್ಗಮನವು ಆ ಪಕ್ಷವನ್ನು ದುರ್ಬಲಗೊಳಿಸುವಂತಿರಬೇಕು ಎನ್ನುವುದಷ್ಟೆ ಪ್ರಮುಖ ವಿಚಾರ” ಎಂದು ಅವರು ಹೇಳಿದ್ದಾರೆ.

ವಿಡಿಯೊ ನೋಡಿ: ಜಾತಿವಾದಿ ವ್ಯವಸ್ಥೆಯ ಸಂಚಿನಿಂದ ಹತ್ಯೆಯಾದ ರೋಹಿತ್ ವೇಮುಲ Janashakthi Media

Donate Janashakthi Media

Leave a Reply

Your email address will not be published. Required fields are marked *