ನವದೆಹಲಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ಪ್ರತಿದಿನ 350 ಮಂದಿ ಭಾರತದ ನಾಗರೀಕತ್ವ ತೊರೆದು ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ- ಆರ್‌ಎಸ್‌ಎಸ್ ಸರ್ಕಾರ ಇದಕ್ಕೆ ನೇರ ಹೊಣೆಗಾರ ಎಂದು ದೂಷಿಸಿರುವ ಮಲ್ಲಿಕಾರ್ಜು ಖರ್ಗೆ, ಬೃಹತ್ ಸಂಖ್ಯೆಯಲ್ಲಿ ಭಾರತೀಯರು ತಮ್ಮ ಪೌರತ್ವ ತೊರೆದು ಹೋಗುತ್ತಿರುವುದಕ್ಕೆ ನಾಲ್ಕು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ನಿರುದ್ಯೋಗ ಹೆಚ್ಚಳ, ವ್ಯಾಪಾರ ಮಾಡಲು ಕ್ಲಿಷ್ಟಕರ ವಾತಾವರಣ, ವಿಫಲ ಆರ್ಥಿಕತೆ, ಸಾಮಾಜಿಕ ತಾರತಮ್ಯದಿಂದ ಬೇಸರಗೊಂಡ ಲಕ್ಷಾಂತರ ಮಂದಿ ದೇಶ ಬಿಟ್ಟು ಹೋಗುತ್ತಿದ್ದಾರೆ.
ಇದನ್ನು ಓದಿ: ಬಿಜೆಪಿ ದುರಾಡಳಿತಕ್ಕೆ ಸಿಕ್ಕಿ ದೇಶದ ಜನ ನರಳಾಡುತ್ತಿದ್ದಾರೆ – ಸಿದ್ಧರಾಮಯ್ಯ ಆರೋಪ
ಭಾರತದಿಂದ ವಿದೇಶಕ್ಕೆ ತೆರಳಿ, ಅಲ್ಲಿಯೇ ನೆಲೆಯೂರುವ ಜತೆಯಲ್ಲಿ ಭಾರತದ ಪೌರತ್ವ ನಂಟನ್ನು ಕಡಿದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 8.81 ಲಕ್ಷ ಮಂದಿ ಭಾರತದ ನಾಗರೀಕತ್ವ ತೊರೆದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ 2017ರಿಂದ ಸೆಪ್ಟಂಬರ್ 2021ರವರೆಗೆ 8,81,254 ಮಂದಿ ಭಾರತೀಯರು ತಮ್ಮ ಪೌರತ್ವ ತ್ಯಜಿಸಿ ವಿದೇಶಿ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಹೇಳಿದೆ.
ಜನ ವಿಭಜನೆಗೊಳ್ಳಲು ಬಿಜೆಪಿ ಸರ್ಕಾರ ಆರ್‍ಎಸ್‍ಎಸ್ ಜೊತೆಗೂಡಿ ವ್ಯವಸ್ಥಿತವಾಗಿ ಕಾರ್ಯಾಚರಣೆಗೆ ಇಳಿದಿಎ. ಅದಕ್ಕಾಗಿ ಲಕ್ಷಾಂತರ ಮಂದಿ ಭಾರತದ ನಾಗರೀಕತ್ವ ತೊರೆದು ಹೋಗುವಂತಾಗಿದೆ ಎಂದು ಅವರ ಆಕ್ಷೇಪಿಸಿದ್ದಾರೆ.