ಬಿಸಿಯೂಟ ನೌಕರರ ಬಜೆಟ್‌ ಅಧಿವೇಶನ ಚಲೋ

ಬೆಂಗಳೂರು : ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮತ್ತು ಪೆನ್ಸನ್ ಜಾರಿಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಇಂದು ಅಕ್ಷರ ದಾಸೋಹ ನೌಕರರ ರಾಜ್ಯ ಮಟ್ಟದ ಹೋರಾಟ ನಡೆಯುತ್ತಿದೆ. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ಟೇಷನ್ ನಿಂದ ಫ್ರಿಂಡಂ ಪಾರ್ಕ್ ವರೆಗು ಪ್ರತಿಭಟನಾ ರ್ಯಾಲಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಪ್ರತಿಭಟನೆನ್ನುದ್ದೇಶಿಸಿ ಅಕ್ಷರ ದಾಸೋಹ ನೌಕರರ ಸಂಘದ ರಾಷ್ಟ್ರಾಧ್ಯಕ್ಷರಾದ ಎಸ್ ವರಲಕ್ಷ್ಮಿ ಮಾತನಾಡುತ್ತಾ ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ 1,17,999  ನೌಕರರು ಕಳೆದ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನೌಕರರು ಅತಿ ಬಡಮಹಿಳೆಯರು, ವಿಚ್ಛೇದಿತರು, ವಿಧವೆಯರು ಇದ್ದಾರೆ. ಇವುರುಗಳು ಉದ್ಯೋಗವನ್ನೇ ನಂಬಿ ತಮ್ಮ ಜೀವನ ನಡೆಸುತ್ತಿದ್ದಾರೆ. ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಸಂಪೂರ್ಣ ಶಾಲೆಗಳನ್ನು ಮುಚ್ಚಲಾಗಿದೆ. ಹಾಗಾಗಿ ಶಾಲಾ ಫಲಾನುಭವಿಗಳಿಗೆ ಮನೆಮನೆಗ  ಆಹಾರ ದಾನ್ಯಗಳನ್ನು ತಲುಪಿಸಿದ್ದಾರೆ. ಈಗ ಶಾಲೆಗಳು ಆರಂಭಗೊಂಡಿ ಕಾರಣ ಮಕ್ಕಳಿಗೆ ಬಿಸಿನೀರು ವ್ಯವಸ್ಥೆ, ಶಾಲೆಗಳ ಆವರಣ, ಕೊಠಡಿ ಸ್ವಚ್ಛತೆ ಹಾಗೂ ಇನ್ನಿತರ ಕೆಲವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ, ಅಲ್ಲದೆ ಡಿಸೆಂಬರ್, ಜನವರಿ ತಿಂಗಳ ವೇತನ ಕೂಡ ನೀಡಿಲ್ಲ.  ಆದರೆ ಶಾಲಾ ಶಿಕ್ಷಕರಿಗೆ ಸರಿಯಾಗಿ ತಿಂಗಳಿಗೆ ಸಂಬಂಳ ಬರುತ್ತಿದೆ. ಬಿಸಿಯೂಟ ನೌಕರರಿಗೆ ಬರುತ್ತಿಲ್ಲ. ಈಗಿರುವಾಗ ಅವರು ಜೀವನ ಹೇಗೆ ನಡೆಸಬೇಕು. ಅವರ ಜೀವನ ಕಷ್ಟದಾಯಕವಾಗಿದೆ. ಹಾಗಾಗಿ ಸರ್ಕಾರ ಈ ಕೂಡಲೇ ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು ಮತ್ತು ಪೆನ್ಸನ್ ಜಾರಿ ಮಾಡಬೇಕೆಂದು. ಅವರ ಪ್ರಮುಖ 11 ಬೇಡಿಕೆಗಳನ್ನು ಈಡೇರಿಸಬೇಕೆಂದು ಎಸ್ ವರಲಕ್ಷ್ಮಿ ಸರ್ಕಾರಕ್ಕೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾ ಲಕ್ಷ್ಮಿದೇವಿ, ರಾಜ್ಯಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಮುಖಂಡರಾದ ಕೆ.ಎನ್‌ ಉಮೇಶ್‌, ಯಮುನಾ ಗಾಂವ್ಕರ್‌ ಸೇರಿದಂತೆ ವಿವಿಧ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಧರಣಿ ಸ್ಥಳಕ್ಕೆ ಸುರೇಶ್‌ ಕುಮಾರ್‌ ಭೇಟಿ : ಶಿಕ್ಷಣ ಸಚಿವ ಎಸ್.‌ ಸುರೇಶ್‌ ಕುಮಾರ್‌ ಧರಣಿ ಸ್ಥಳಕ್ಕೆ ಭೇಟಿಯನ್ನು ನೀಡಿ ಮನವಿಯನ್ನು ಸ್ವೀಕರಿಸಿದರು, ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಅಧಿಕಾರಿಗಳ ಜೊತೆ ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಪ್ರತಿಭಟನೆಯ ಫೋಟೊಗಳು

Donate Janashakthi Media

Leave a Reply

Your email address will not be published. Required fields are marked *