ತುಮಕೂರು : ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ. ಕನ್ಯಾಕುಮಾರಿಯಿಂದ ಶುರುವಾಗಿರುವ ಯಾತ್ರೆ ತಮಿಳುನಾಡು-ಕೇರಳ ನಂತರ ಕರ್ನಾಟಕಕ್ಕೆ ಆಗಮಿಸಿದೆ.
ಕಳೆದ 7 ದಿನಗಳಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ನಾಯಕರು ಭಾಗವಹಿಸುತ್ತಿದ್ದಾರೆ, ಯಾತ್ರೆಯ ಮಧ್ಯೆ ನಾಯಕರು ತಮ್ಮ ಕ್ಷೇತ್ರದ ಜನರ ಜೊತೆ ನಡೆದು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡುತ್ತಿರುವದು ವಿಶೇಷವಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಹೊಸಕೋಟೆಯ ಕಾಂಗ್ರೆಸ್ ನಾಯಕರಾದ ಶರತ್ ಬಚ್ಚೇಗೌಡ, ತಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಹೆಜ್ಜೆ ಹಾಕುವ ಮೂಲಕ ಯಾತ್ರೆಗೆ ಮೆರೆಗು ತಂದಿದ್ದಾರೆ. ಜನರ ಜೊತೆ ಬೆರೆಯುತ್ತಾ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿದ್ದವು.
ಯಾತ್ರೆಯಲ್ಲಿ ಶರತ್ ಬಚ್ಚೇಗೌಡರು ಹಾಗೂ ಡಿ.ಕೆ.ಸುರೇಶ್ ಅವರ ಜೊತೆ ಬೈಕ್ ಹತ್ತಿ ಒಂದು ರೌಂಡ್ ಸುತ್ತಾಡಿ ಜನರನ್ನು ತಮ್ಮ ಕಡೆಗೆ ನೋಡುವ ಹಾಗೆ ಮಾಡಿದ್ದು ಇಂದಿನ ಇನ್ನೊಂದು ವಿಶೇಷ.
ಭಾರತ ಜೋಡೋ ಯಾತ್ರೆಯಲ್ಲಿ ಎರಡು ಬಾರಿ ರಾಹುಲ್ ಗಾಂಧಿಯವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಶರತ್ ಬಚ್ಚೇಗೌಡ ಯಾತ್ರೆಯ ಕೇಂದ್ರ ಬಿಂದುವಾಗಿ ಜನರ ಹಾಗೂ ಕಾಂಗ್ರೆಸ್ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಅವರ ಅಭಿಮಾನಿಗಳು ಯಾತ್ರೆಯ ಮಧ್ಯದಲ್ಲಿ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.