ಮಜುಲಿ: ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮಾರ್ಗ ಬದಲಿಸಿದ ಕಾರಣ ನೀಡಿ ಯಾತ್ರೆಯ ಸಂಘಟಕ ಕೆ.ಬಿ. ಬಿಜು ವಿರುದ್ಧ ಅಸ್ಸಾಂನ ಜೋರ್ಹತ್ ಪಟ್ಟಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ನಡೆದ ಮೆರವಣಿಗೆಯು ಕೆಬಿ ರಸ್ತೆಯ ಕಡೆಗೆ ಸಾಗುವ ಬೇರೆಡೆಗೆ ತಿರುಗಿ ಪಟ್ಟಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು ಎಂದು ಅವರು ಹೇಳಿದ್ದಾರೆ.
“ಜನರ ಅನಿರೀಕ್ಷಿತ ಆಗಮನದಿಂದ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು. ಜೋರ್ಹತ್ ಸದರ್ ಪೊಲೀಸ್ ಠಾಣೆಯು ಯಾತ್ರೆಯ ಮೇಲೆ ಮತ್ತು ಅದರ ಪ್ರಮುಖ ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ಪೊಲೀಸ್ ದೂರನ್ನು ಸ್ವೀಕರಿಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ. ಯಾತ್ರೆಯು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದು, ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಿಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೋಡೋ
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ ಸಮಿತಿ ವಿಸರ್ಜಿಸಿ | ಮಾಜಿ ರಾಷ್ಟ್ರಪತಿ ಕೋವಿಂದ್‌ಗೆ ಖರ್ಗೆ ಪತ್ರ
ಯಾತ್ರೆಯ ವಿರುದ್ಧ ದಾಖಲಾದ ಎಫ್‌ಐಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಸ್ಸಾಂ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ, “ಈ ಎಫ್‌ಐಆರ್ ಯಾತ್ರೆಯ ದಾರಿಯಲ್ಲಿ ಅನಗತ್ಯ ಅಡೆತಡೆಗಳನ್ನು ನಿರ್ಮಿಸುವ ಕುತಂತ್ರವಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಯಾತ್ರೆಯನ್ನು ಹಾಳುಮಾಡಲು ಬಯಸುತ್ತಿದ್ದಾರೆ. ಏಕೆಂದರೆ ಅಸ್ಸಾಂನಲ್ಲಿ ಯಾತ್ರೆಯ ಮೊದಲ ದಿನವೆ ಯಶಸ್ವಿಯಾಗಿದೆ, ಹಾಗಾಗಿ ಅವರು ಹೆದರಿದ್ದಾರೆ” ಎಂದು ಹೇಳಿದ್ದಾರೆ.
“ಪಿಡಬ್ಲ್ಯೂಡಿ ಪಾಯಿಂಟ್‌ನ ಟ್ರಾಫಿಕ್ ಡೈವರ್ಶನ್ ಅನ್ನು ಯಾವುದೇ ಪೊಲೀಸರು ನಿರ್ವಹಿಸಲಿಲ್ಲ. ಮೆರವಣಿಗೆಯಲ್ಲಿ ದೊಡ್ಡ ಜನಸಮೂಹ ಸೇರಿತ್ತು, ಆದರೆ ಯಾತ್ರೆಗೆ ಗೊತ್ತುಪಡಿಸಿದ ಮಾರ್ಗವು ತುಂಬಾ ಚಿಕ್ಕದಾಗಿತ್ತು. ಆದ್ದರಿಂದ ನಾವು ಕೆಲವು ಮೀಟರ್‌ಗಳವರೆಗೆ ಶಾರ್ಟ್ ರೂಟ್ ಅನ್ನು ಹಿಡಿದೆವು” ಎಂದು ಹೇಳಿದ್ದಾರೆ., ”ಸೈಕಿಯಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮಸೀದಿ ಕೆಡವಿ ನಿರ್ಮಿಸಿದ ಮಂದಿರ ಒಪ್ಪುವುದಿಲ್ಲ – ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್
ಅಸ್ಸಾಂನಲ್ಲಿ ಯಾತ್ರೆಯ ಮೆರವಣಿಗೆಯು ಜನವರಿ 25 ರವರೆಗೆ ಇರುತ್ತದೆ. ಇದು ರಾಜ್ಯದ 17 ಜಿಲ್ಲೆಗಳ ಮೂಲಕ 833 ಕಿ.ಮೀ. ಹಾದುಹೋಗುತ್ತದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು 67 ದಿನಗಳಲ್ಲಿ 6,713 ಕಿಮೀ ಪ್ರಯಾಣಿಸಲು ನಿರ್ಧರಿಸಲಾಗಿದ್ದು, ದೇಶದ 15 ರಾಜ್ಯಗಳ 110 ಜಿಲ್ಲೆಗಳಿಗೆ ಇದು ಭೇಟಿ ನೀಡಲಿದೆ.
ಯಾತ್ರೆಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಸ್ತೆಗಳಲ್ಲಿ ನಡೆಯಲು ಎಷ್ಟು ಅನುಮತಿಗಳು ಬೇಕಿದೆ? ಇದು ಪ್ರಜಾಪ್ರಭುತ್ವ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳಿವೆ, ಯಾರೂ ರಸ್ತೆಗಳನ್ನು ತಮ್ಮ ಖಾಸಗಿ ಆಸ್ತಿಯಾಗಿ ಬಳಸುವಂತಿಲ್ಲ” ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಕೆಮಿಕಲ್ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು