28 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿ ವಿರುದ್ಧ ಕಿಡಿಕಾರಿದ ಭಾರತ ಜ್ಞಾನ ವಿಜ್ಞಾನ ಸಮಿತಿ

28 ಜೀವಗಳನ್ನು ಬಲಿ ಪಡೆದ ಕಾಶ್ಮೀರದ, ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಜಮ್ಮು ಮತ್ತು ಕಾಶ್ಮೀರದ ಇಡೀ ಪ್ರದೇಶ ಹಾಗೂ ಜಗತ್ತನ್ನು ಬೆಚ್ಚಿಬೀಳಿಸಿದ ತೀವ್ರ ದುರದೃಷ್ಟಕರ ಮತ್ತು ದುರಂತ ಘಟನೆಯಾಗಿದೆ. ಮತ್ತು ಈ ಭಯೋತ್ಪಾದಕ ದಾಳಿಯು ಮನುಷ್ಯತ್ವ ಇಲ್ಲದವರ ಮತೀಯ ಅಂಧಕಾರದ ಹೃದಯಹೀನ ಮನಸ್ಥಿಯು ಧೋತಕವಾಗಿದೆ ಎಂದು  ಭಾರತ ಜ್ಞಾನ ವಿಜ್ಞಾನ ಸಮಿತಿ ಕಿಡಿಕಾರಿದೆ.

ಇದನ್ನು ಓದಿ :ಪಹಲ್ಗಾಂ ಉಗ್ರರ ದಾಳಿ ಖಂಡಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ

ಈ ಅಮಾನವೀಯ ನರಹಂತಕ ಘಟನೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಆ ಪಾಪಿಗಳ‌ ಕೃತ್ಯಕ್ಕೆ ಬಲಿಯಾದ ಎಲ್ಲ ಕುಟುಂಬಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ ಮತ್ತದನ್ನು ಸಮರ್ಥಿಸಲೂ ಸಾಧ್ಯವಿಲ್ಲ . ಈ ದಾಳಿ ಭಾರತದ ಸಾರ್ವಭೌಮತ್ವದ ಮೇಲಿನ ದಾಳಿ, ಧರ್ಮ ಸಾಮರಸ್ಯದ ಮೇಲಿನ ದಾಳಿ ಹಾಗೂ ಮಾನವೀಯತೆಯ ಮೇಲಿನ ದಾಳಿಯಾಗಿದ್ದು, ಇಂತಹ ಕುಕೃತ್ಯಗಳನ್ನು ಮಾಡಿ ಭಾರತದೇಶದ ಸಾಮರಸ್ಯ ಹಾಗೂ ಅದರ ಸಾಮರ್ಥ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದನ್ನು ಓದಿ :ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆ: 2 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಈ ದಾಳಿಯಿಂದ ಕಾಶ್ಮೀರದ ಜನತೆ , ಅಲ್ಲಿನ ಆರ್ಥಿಕತೆ ಹಾಗೂ ದುಡಿಯುವ ವರ್ಗದ ಬದುಕಿನ ಮೇಲೆ ತೀವ್ರವಾದ ಸಂಕಷ್ಟ ತಂದೊಡ್ಡಿದೆ. ಈ ಸಂದರ್ಭದಲ್ಲಿ ಬಿಜಿವಿಎಸ್ ರಾಷ್ಟಸಮಿತಿ ಮತ್ತು ರಾಜ್ಯ ಹಾಗೂ ಹಾಸನ ಜಿಲ್ಲಾಸಮಿತಿ ಭಾರತ ಸರ್ಕಾರದ ಜೊತೆಯಾಗಿ ಗಟ್ಟಿಯಾಗಿ ನಿಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *