ಪಂಜಾಬ್: ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್

ಚಂಡೀಗಡ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಆಮ್‌ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಆಗಿ ಭಗವಂತ್ ಮಾನ್ ಆಯ್ಕೆ ಆಗಿದ್ದಾರೆ. ಇಂದು(ಮಾ.12) ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕನ್ನು ಮಂಡಿಸಿದರು.

ಪ್ರಮಾಣ ವಚನ ಶಹೀದ್‌ ಭಗತ್‌ಸಿಂಗ್‌ ಪೂರ್ವಜರ ಗ್ರಾಮದಲ್ಲಿ

ಮಾರ್ಚ್ 16ರಂದು, ನವನ್‌ ಶಹರ್ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ ನಲ್ಲಿ ಮಧ್ಯಾಹ್ನ 12.30 ಗಂಟೆಗೆ ಭಗವಂತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮವನ್ನು ಕಟ್ಕರ್ ಕಲನ್ ಗೆ ಬಂದು ಪ್ರಮಾಣವಚನ ಬೋಧಿಸುವಂತೆ ಕೇಳಿಕೊಂಡರು.

ರಾಜ್ಯಪಾಲರಿಗೆ ಬೆಂಬಲಿಗ ಶಾಸಕರ ಪಟ್ಟಿಯನ್ನು ನೀಡಿದ ಭಗವಂತ್ ಮಾನ್‌ ಇದು ಭಗತ್ ಸಿಂಗ್ ಅವರಿಗೆ ಗೌರವಾರ್ಪಣೆಯ ಕಾರ್ಯಕ್ರಮವೂ ಆಗಲಿದೆ. ಸಂಪೂರ್ಣ ಭಿನ್ನ ಆಡಳಿತವನ್ನು ಎಎಪಿ ನೀಡಲಿದೆ ಎಂದು ರಾಜಭವನದಿಂದ ಹೊರಬಂದ ಬಳಿಕ ಪತ್ರಕರ್ತರಿಗೆ ಹೇಳಿದರು. ಎಷ್ಟು ಜನ ಮಂತ್ರಿಗಳು, ಯಾರ‍್ಯಾರು ಎನ್ನುವುದು ಇನ್ನೂ ಚರ್ಚೆ ನಡೆದಿದೆ. ನಮ್ಮ ಪಕ್ಷದ ಹಿರಿಯ ನಾಯಕರ ಸಲಹೆಯನ್ನೂ ಪಡೆಯಲಾಗುವುದು ಎಂದು ಹೇಳಿದರು.

ಭಗವತ್‌ ಮಾನ್‌ ಎಎಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಕೂಡಲೇ ಚಂಡೀಗಢದ ತಮ್ಮ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ಸಭೆಯನ್ನು ನಡೆಸಿದ್ದರು.

ಮಾಜಿ ಸಚಿವರ ಭದ್ರತೆ ಹಿಂದಕ್ಕೆ

ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನವೇ ಭಗವಂತ್ ಮಾನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲಾ ಮಾಜಿ ಸಚಿವರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆಯಲು ಭಗವಂತ್ ಮಾನ್ ನಿರ್ಧರಿಸಿದ್ದಾರೆ. ಭಗವಂತ್ ಮಾನ್ ಸುಮಾರು 122 ನಾಯಕರ ಭದ್ರತೆಯನ್ನು ಹಿಂಪಡೆದಿದ್ದಾರೆ.

ಅಹಂಕಾರಿಗಳಾಗಬೇಡಿ, ಜನರಿಗಾಗಿ ಕೆಲಸ ಮಾಡಿ

ಚುನಾಯಿತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಭಗವಂತ್ ಮಾನ್, “ಪಕ್ಷಕ್ಕೆ ಮತ ಹಾಕದ” ಜನರಲ್ಲಿ ದುರಹಂಕಾರ ತೋರಿಸಬೇಡಿ. ಎಲ್ಲ ಜನರಿಗಾಗಿ ಕೆಲಸ ಮಾಡುವಂತೆ ಎಲ್ಲರಲ್ಲೂ ಮನವಿ ಮಾಡಿಕೊಂಡರು. ಅಹಂಕಾರಿಯಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕಿದವರಿಗೂ ಮತ್ತು ಹಾಕದವರಿಗೂ ವ್ಯತ್ಯಾಸ ತೋರಿಸಬೇಡಿ. ನೀವು ಪಂಜಾಬಿಗರ ಶಾಸಕರು, ಅವರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದ ಎಲ್ಲ ಜನರಿಗಾಗಿ ಕೆಲಸ ಮಾಡಿ ಎಂದು ಮಾನ್ ಮನವಿ ಮಾಡಿಕೊಂಡರು.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳಲ್ಲಿ ಆಮ್‌ ಆದ್ಮಿ ಪಕ್ಷ(ಎಎಪಿ) ಗೆಲುವು ಸಾಧಿಸಿದೆ.  ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮೂರು ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿಯು ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 1 ಹಾಗೂ ಸ್ವತಂತ್ರ್ಯ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *