ಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ನೀಡಿ – ರಾಜ್ಯ ಸರ್ಕಾರಕ್ಕೆ ‘ಸಮುದಾಯ ಕರ್ನಾಟಕ’ ಒತ್ತಾಯ

ಉಡುಪಿ: ಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ಕೊಡಲು ರಾಜ್ಯ ಸರಕಾರಕ್ಕೆ ‘ಸಮುದಾಯ ಕರ್ನಾಟಕ’ ಭಾನುವಾರ ಒತ್ತಾಯಿಸಿದೆ. ಜಿಲ್ಲೆಯ ಕುಂದಾಪುರದಲ್ಲಿ ನಡೆದ ಎಂಟನೇ ರಾಜ್ಯ ಸಮ್ಮೇಳನದಲ್ಲಿ ಸಮುದಾಯ ಕರ್ನಾಟಕ ಮುಖ್ಯವಾಗಿ ನಾಲ್ಕು ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.

ಬೆಂಗಳೂರು ಅಂತರ್ರಾಷ್ಟ್ರೀಯ ಚಿತ್ರೋತ್ಸವ 2006 ರಲ್ಲಿ ಆರಂಭವಾಗಿದ್ದು, 2023ರ 14 ನೇ ಚಿತ್ರೋತ್ಸವ ಮಾರ್ಚ್ 23-3೦ ಅವಧಿಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ, “ಬೆಂಗಳೂರು ಚಿತ್ರೋತ್ಸವ FIAPF ಯ ಮನ್ನಣೆ ಗಳಿಸಿದ್ದು ಇನ್ನು ಮುಂದೆ ನಿಗದಿತ ದಿನಾಂಕಗಳಲ್ಲಿ ನಡೆಯುತ್ತದೆ. ಅಂತರಾಷ್ಟ್ರೀಯ ಚಿತ್ರೋತ್ಸವಗಳ ಕ್ಯಾಲೆಂಡರ್ ನ ಭಾಗವಾಗಿರುತ್ತದೆ” ಎಂದು ಹೇಳಲಾಯಿತು.

ಇದನ್ನೂ ಓದಿ: ಸಮುದಾಯ ರಾಜ್ಯ ಸಮ್ಮೇಳನ | ಸಂವಿಧಾನವೇ ನಮಗೆ ರಾಷ್ಟ್ರೀಯತೆ – ಪುರುಷೋತ್ತಮ ಬಿಳಿಮಲೆ

ಜೊತೆಗೆ ಕನ್ನಡದ ಮೊದಲ ಟಾಕಿ ಚಿತ್ರ ಬಿಡುಗಡೆಯಾದ ಮಾರ್ಚ್ 3 ರಂದು ಇನ್ನು ಚಿತ್ರೋತ್ಸವ ನಡೆಯುತ್ತದೆ ಎಂದು ಆಗಿನ ಮುಖ್ಯಮಂತ್ರಿಗಳೇ ಹೇಳಿದ್ದರು. “ಆದರೆ, ಸೂಕ್ತ ಕ್ರಮಗಳಿಲ್ಲದೆ, ಇವ್ಯಾವುವೂ ಜಾರಿಯಾಗದೆ ಮತ್ತೆ ಬೆಂಗಳೂರು ಚಿತ್ರೋತ್ಸವ 2024 ಅದೇ ಸ್ಥಿತಿಯಲ್ಲಿರುವಂತೆ ಕಾಣುತ್ತದೆ. ಕನಿಷ್ಠ ಯಾವುದೇ ದಿನಾಂಕ ಮತ್ತು ವಿವರಗಳು ಘೋಷಣೆಯಾಗಿಲ್ಲ. ಹಿಂದಿನ‌ ವರ್ಷಗಳಂತೆ ಕೊನೆಯ ವಾರಗಳಲ್ಲಿ ಗಡಿಬಿಡಿಯಲ್ಲಿ ನಡೆಯುವಂತೆ ಕಾಣುತ್ತಿದೆ” ಎಂದು ಚಿತ್ರೋತ್ಸವದ ಸ್ಥಿತಿಯ ಬಗ್ಗೆ ಸಮುದಾಯ ಕರ್ನಾಟಕ  ಕಳವಳ ವ್ಯಕ್ತಪಡಿಸಿದೆ.

ಒಟ್ಟು ನಾಲ್ಕು ಸಲಹೆಗಳನ್ನು ಸರ್ಕಾರಕ್ಕೆ ಸಮುದಾಯ ಕರ್ನಾಟಕ ನೀಡಿದ್ದು, ಅವುಗಳು ಕೆಳಗಿನಂತಿವೆ.

  1. ಮುಂಬಯಿ, ಕೊಲ್ಕತ್ತ, ಗೋವಾ, ಕೇರಳ, ಚೆನ್ನೈ ಗಳಲ್ಲಿ ಇರುವಂತೆ ಚಿತ್ರೋತ್ಸವ ನಡೆಸಲು ಒಂದು ಶಾಶ್ವತ ‘ನಿರ್ದೇಶನಾಲಯ’ ಸ್ಥಾಪಿಸಬೇಕು” ಎಂದು ಹೇಳಿದೆ.
  2. ಈ ಶಾಶ್ವತ ‘ನಿರ್ದೇಶನಾಲಯ’ದಲ್ಲಿ ಸೃಜನಶೀಲ ಚಲನಚಿತ್ರ ಕಲಾವಿದರು, ವಿಮರ್ಶಕರು, ಸಕ್ರಿಯ ಫಿಲಂ ಸೊಸೈಟಿಗಳ ಪ್ರತಿನಿಧಿಗಳು, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು, ಕನ್ನಡ-ಸಂಸ್ಕೃತಿ ಇಲಾಖೆ ನಿರ್ದೇಶಕರು ಇರಬೇಕು.
  3. ಈ ಶಾಶ್ವತ ‘ನಿರ್ದೇಶನಾಲಯ’ ಇಡೀ ವರ್ಷ ಚಿತ್ರೋತ್ಸವ ವನ್ನು ಸಂಘಟಿಸುವ ಕೆಲಸ ಮಾಡಬೇಕು.
  4. ಫಿಲಂಗಳ ಆಯ್ಕೆ, ಪ್ರಶಸ್ತಿಗಳಲ್ಲಿ ಕೇಳಿ ಬಂದಿರುವ ರಾಜಕೀಯ ಮಧ್ಯಪ್ರವೇಶ, ವಶೀಲಿಬಾಜಿ ಮತ್ತಿತರ ಆರೋಪಗಳು ಬರದಂತೆ ಸೂಕ್ತ ಜ್ಯೂರಿ ವ್ಯವಸ್ಥೆ ಸ್ಥಾಪಿಸಬೇಕು.

ಕುಂದಾಪುರದಲ್ಲಿ ‘ಸಮುದಾಯ ಕರ್ನಾಟಕ’ದ ಎರಡು ದಿನಗಳ 8 ನೇ ರಾಜ್ಯ ಸಮ್ಮೇಳನ ಡಿಸೆಂಬರ್ 16ರ ಶನಿವಾರ ಚಾಲನೆಗೊಂಡು, ಭಾನುವಾರ ಸಮಾಪನಗೊಂಡಿದೆ.

ವಿಡಿಯೊ ನೋಡಿ: ಪಿಚ್ಚರ್‌ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್‌ಕಥೆ ಹೇಳುವವರು: ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *