ಆಟವಾಡುತ್ತಿದ್ದ ವೇಳೆ ಪೌಷ್ಟಿಕಾಂಶ ಮಾತ್ರೆ ತಿಂದು ವಿದ್ಯಾರ್ಥಿನಿ ಸಾವು; ಐವರು ಗಂಭೀರ

ನೀಲಗಿರಿ; ಶಾಲೆಯೊಂದರಲ್ಲಿ ಮಕ್ಕಳು ಪೌಷ್ಟಿಕಾಂಶದ ಮಾತ್ರೆಗಳನ್ನು ತಿನ್ನುವ ಆಟವಾಡಿದಾರೆ. ಈ ವೇಳೆ ಮಿತಿಮೀರಿದ ಮಾತ್ರೆ ಸೇವನೆಯಿಂದ 6ನೇ ತರಗತಿ ವಿದ್ಯಾರ್ಥಿ, 7ನೇ ತರಗತಿ ವಿದ್ಯಾರ್ಥಿ ಹಾಗೂ ನಾಲ್ವರು ಎಂಟನೇ ತರಗತಿ ವಿದ್ಯಾರ್ಥಿಗಳು ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿಯೊಬ್ಬಳು ಮೃತ ಪಟ್ಟಿರುವ ಘಟನೆ ನಡೆದಿದೆ.

ಮಾರ್ಚ್‌ 6ರಂದು ತಮಿಳುನಾಡಿನ ನೀಲಗಿರಿಯಲ್ಲಿ ಊಟಿ ಕಾಂತಲ್ ಪ್ರದೇಶದಲ್ಲಿ ಪುರಸಭೆ ಆಡಳಿತ ಒಡೆತನದ ಉರ್ದು ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನು ಓದಿ: ಬಸ್​ ಇಲ್ಲದ್ದಕ್ಕೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ; ಒಬ್ಬ ವಿದ್ಯಾರ್ಥಿನಿ ಸಾವು

ಮೃತರನ್ನು 8ನೇ ತರಗತಿ ವಿದ್ಯಾರ್ಥಿನಿ ಝೈಭಾ ಫಾತಿಮಾ (13) ಉದಗಮಂಡಲಂ ಪುರಸಭೆಯ ಕಂದಲ್‌ ನಿವಾಸಿ ಎಂದು ಗುರುತಿಸಲಾಗಿದೆ. ಬಾಲಕಿಯರನ್ನು ಸಿಎಂಸಿಎಚ್‌ನ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಫಾತಿಮಾ ಅವರ ಯಕೃತ್ತು ವೈಫಲ್ಯಕ್ಕೆ ಒಳಗಾಗಿದ್ದರಿಂದ, ಆಸ್ಪತ್ರೆಯ ಅಧಿಕಾರಿಗಳು ಅವರನ್ನು ಸ್ಟಾನ್ಲಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲು ನಿರ್ಧರಿಸಿದರು.

ನಾಲ್ವರ ಪೈಕಿ ವಿದ್ಯಾರ್ಥಿನಿಯೊಬ್ಬಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಚೆನ್ನೈಗೆ ಕಳುಹಿಸಲಾಗಿದೆ. ಆದರೆ ಚಿಕಿತ್ಸೆಗೆ ತೆರಳುವ ಮಾರ್ಗಮಧ್ಯೆಯೇ ಸೇಲಂ ಬಳಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಊಟಿ ಪಶ್ಚಿಮ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೀನಾ ಪ್ರಿಯಾ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಲಸಿಕಾ ಔಷಧಿಗಳ ಮೇಲಿನ ಜಿಎಸ್‌ಟಿ ಮನ್ನಾ ಮಾಡಿ: ಸಿಎಂ ಸ್ಟಾಲಿನ್‌ ಒತ್ತಾಯ

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆ ಇದಾಗಿದ್ದು, ಶಾಲೆಗೆ ಔಷಧ ಮತ್ತು ಸಾರ್ವಜನಿಕ ಕಲ್ಯಾಣ ಇಲಾಖೆಯಿಂದ ಪೌಷ್ಟಿಕಾಂಶದ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತದೆ. ಈ ಮಾತ್ರೆಗಳನ್ನು ವೈದ್ಯಕೀಯ ಮೇಲ್ವಿಚಾರಕರು ಅಥವಾ ಶಾಲೆಯಲ್ಲಿನ ಶಿಕ್ಷಕರೊಬ್ಬರು ದಿನಕ್ಕೊಮ್ಮೆ ವಿದ್ಯಾರ್ಥಿಗಳಿಗೆ ನೀಡಬೇಕು. ಮಾರ್ಚ್​​ 6ರಂದು ಶಾಲಾ ವಿದ್ಯಾರ್ಥಿಗಳ ಕೈಗೆ ಸಾಕಷ್ಟು ಪ್ರಮಾಣದಲ್ಲಿ ಮಾತ್ರೆಗಳು ಸಿಕ್ಕಿವೆ. ಆಗ ನಾಲ್ವರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ಅತೀ ಹೆಚ್ಚು ಮಾತ್ರೆಗಳನ್ನು ತಿನ್ನುವ ಆಟವಾಡಲು ಮುಂದಾಗಿದ್ದಾರೆ.

ಆಟದ ವೇಳೆ ಮಾತ್ರಗಳನ್ನು ಸೇವಿಸಿದ್ದರಿಂದ ವಿದ್ಯಾರ್ಥಿಗಳು ಆಸ್ಥವ್ಯಸ್ಥರಾಗಿದ್ದಾರೆ. ಕೂಡಲೇ ವಿದ್ಯಾರ್ಥಿಗಳನ್ನು ಊಟಿ ಸರಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಈ ಪೈಕಿ 4 ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಇದನ್ನು ಓದಿ: ತಮಿಳುನಾಡು ರಾಜ್ಯಪಾಲರನ್ನು ವಜಾ ಮಾಡಿ: ಆಡಳಿತರೂಢ ಡಿಎಂಕೆ ರಾಷ್ಟ್ರಪತಿಗೆ ಪತ್ರ

ಆರೋಗ್ಯ ಇಲಾಖೆಯ ಉಪನಿರ್ದೇಶಕ ಬಾಲುಸಾಮಿ ಮಾತನಾಡಿ, ಮಕ್ಕಳಿಗೆ ಊಟದ ಬಳಿಕ ಶಿಕ್ಷಕರ ಮೇಲ್ವಿಚಾಋಕರು ಮಾತ್ರೆಗಳನ್ನು ಪ್ರತಿದಿನ ನಿಯಮಿತವಾಗಿ ನೀಡಬೇಕಿದೆ. ಆದರೆ ಇಷ್ಟೊಂದು ಮಾತ್ರೆಗಳು ಮಕ್ಕಳ ಕೈಗೆ ಹೇಗೆ ಸಿಕ್ಕವು ಎಂಬುದು ತಿಳಿದಿಲ್ಲ. ಈ ಮಾತ್ರೆಗಳು ಮಕ್ಕಳ ಕೈಸೇರಿದ್ದು, ಶಿಕ್ಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ನಗರಸಭೆ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಮೊಹಮ್ಮದ್ ಅಮೀನ್ ಹಾಗೂ ಮಾತ್ರೆ ವಿತರಣೆ ನಿಗಾ ಅಧಿಕಾರಿ ಹಾಗೂ ಶಿಕ್ಷಕಿ ಕಲೈವಾಣಿ ಇಬ್ಬರನ್ನೂ ವಜಾಗೊಳಿಸಿ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಜಯಕುಮಾರ್ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿದ್ಯಾರ್ಥಿನಿ ಸಾವಿಗೆ ಸಂತಾಪ ಸೂಚಿಸಿದ್ದು, ಆಕೆಯ ಕುಟುಂಬಕ್ಕೆ ಮೂರು ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ಸಿಎಂಸಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಮೂವರು ಬಾಲಕಿಯರಾದ ನಸ್ಜಿಯಾ, ಆಯೇಶಾ ಮತ್ತು ಗುಲ್ತೂನ್ ನಿಶಾ ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಘೋಷಿಸಿರುವ ಮುಖ್ಯಮಂತ್ರಿ ಸ್ಟಾಲಿನ್‌, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆಸ್ಪತ್ರೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *