ಕಲ್ಬುರ್ಗಿ : ವಿಜ್ಞಾನ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನೇತೃತ್ವದಲ್ಲಿ ನಡೆದ ೩೧ನೇ “ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ”ದಲ್ಲಿ ಹಾಸನ ಜಿಲ್ಲೆಯ ಅಟ್ಟಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೆಪ್ಪಾಲೆ
ಇತ್ತೀಚೆಗೆ ಕಲ್ಬುರ್ಗಿಯ ಸೇಡಂನಲ್ಲಿ ಭಾರತ ಸರ್ಕಾರದ ಸಹಕಾರದೊಂದಿಗೆ ಕರ್ನಾಟಕ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನೇತೃತ್ವದಲ್ಲಿ ನಡೆದ ೩೧ನೇ “ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ”ದಲ್ಲಿ ಹಾಸನ ಜಿಲ್ಲೆಯ ಅಟ್ಟಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ ತಮ್ಮೂರಿನ ಸುತ್ತಮುತ್ತ ಕಾಮಾಲೆ ರೋಗಿಗಳಿಗೆ ನಾಟಿ ವೈದ್ಯರು ನೀಡುತ್ತಿದ್ದ ಬೆಪ್ಪಾಲೆ (ಶ್ವೇತ ಕುಟಜ) ಗಿಡದ ನಾಟಿ ಔಷದಿಯ ಪ್ರಭಾವದ ಕುರಿತು ಅಧ್ಯಯನ ಮಾಡಿ “ಬೆಪ್ಪಾಲೆ” ದೂರ ಕಾಮಾಲೆ” ಶೀರ್ಷಿಕೆಯಲ್ಲಿ ಸಂಶೋಧನಾ ವರದಿ ಮಂಡಿಸಿ ಯುವವಿಜ್ಞಾನಿಯಾಗಿ ವಿಜೇತರಾಗಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನು ಓದಿ : ಮತ್ತೆ ಬಿಜೆಪಿ ಪಾಳಯ ಸೇರಿದ ಕಾಂಗ್ರೆಸ್ ಎಮ್‌ಎಲ್‌ಸಿ ಜಗದೀಶ್ ಶೆಟ್ಟರ್!
ಸದರಿ ಸಂಶೋಧನೆಗೆ ಸರ್ಕಾರಿ ಪ್ರೌಢಶಾಲೆ ಅಟ್ಟಾವರದ ವಿಜ್ಞಾನ ಶಿಕ್ಷಕಿ ಬಿ.ಕೆ.ಲೋಲಾಕ್ಷಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ದೇಶದ ಜನರನ್ನು ಬಾದಿಸುತ್ತಿರುವ ಕಾಮಾಲೆ ರೋಗಕ್ಕೆ ಹಾಸನ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಪರಿಣಾಮಕಾರಿ ಔಷಧ ವಿಧಾನವನ್ನು ಸಮಗ್ರವಾಗಿ ಅಧ್ಯಯನ ಮಾಡಿ “ಡೆಪ್ಪಾಲೆ” ಮದ್ದಿನ ಪರಿಣಾಮವನ್ನು ನಾಡಿಗೆ ಪರಿಚಯಿಸಿ ಗೆಲುವುಸಾಧಿಸಿ ಅಟ್ಟಾವರ ಸರ್ಕಾರಿ ಪ್ರೌಢಶಾಲೆ ಹಾಗೂ ಜಿಲ್ಲೆಗೆ ಹೆಸರು ತಂದ ವಿದ್ಯಾರ್ಥಿನಿ ಲಕ್ಷಿö್ಮ ಹಾಗೂ ಅವರಿಗೆ ಸೂಕ್ತವಾಗಿ ಮಾರ್ಗದರ್ಶನ ಮಾಡಿದ ಶಿಕ್ಷಕಿ ಲೋಲಾಕ್ಷಿ ಅವರಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಎಚ್.ಪಿ. ರಾಜಶೇಖರ ಮತ್ತು ಶಿಕ್ಷಕ ವೃಂದ, ಬಿಜಿವಿಎಸ್ ಅಟ್ಟಾವರ ಘಟಕದ ಕಾರ್ಯದರ್ಶಿ ಆಶಾ, ಮತ್ತು ಮಕ್ಕಳ ವಿಜ್ಞಾನ ಸಮಾವೇಶ ಜಿಲ್ಲೆಯ ಸಂಚಾಲಕರಾದ ವಿಜಯೇಂದ್ರ ರಾವ್ ಹಾಗು ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ತಾಲ್ಲೂಕು ಮತ್ತು ಜಿಲ್ಲಾ ಘಟಕ ಶುಭ ಹಾರೈಸಿದ್ದಾರೆ. ಬೆಪ್ಪಾಲೆ
ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿ ಏಪ್ರಿಲ್ ತಿಂಗಳಿನಲ್ಲಿ ಕೇರಳ ಅಥವ ಗುಜರಾತಿನಲ್ಲಿ ನಡೆಯಲಿದೆ.
ಇದನ್ನು ನೋಡಿ : #ಮಂಗಳೂರು – ರಾಷ್ಟ್ರ ಧ್ವಜ ಹಾರಿಸುವ ಅಶೋಕ ಸ್ಥಂಬದಲ್ಲಿ #ಆರೆಸ್ಸೆಸ್ ಬಾವುಟ ಹಾರಿಸಿದ ಕಿಡಿಗೇಡಿಗಳು