ಬೆಂಗಳೂರು : ಲಕ್ಷಾಂತರ ಪ್ರಯಾಣಿಕರಿಗೆ ನೆರವಾಗಲಿರುವ 19 ಕಿ.ಮೀ. ಬ್ಲೂ ಲೈನ್ ಮೆಟ್ರೋ

ಬೆಂಗಳೂರು ನಗರದ ಹೊರ ವರ್ತುಲ ರಸ್ತೆ (ORR) ಮಾರ್ಗದಲ್ಲಿನ 19 ಕಿ.ಮೀ. ಉದ್ದದ ನಮ್ಮ ಮೆಟ್ರೋ ಬ್ಲೂ ಲೈನ್ (ಫೇಸ್-2A) ಯೋಜನೆ ಪೂರ್ಣಗೊಂಡ ಬಳಿಕ ಲಕ್ಷಾಂತರ ಐಟಿ ಉದ್ಯೋಗಿಗಳು ಮತ್ತು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗವು ನಗರದ ಅತ್ಯಂತ ವಾಹನ ದಟ್ಟಣೆ ಇರುವ ಐಟಿ ಕಾರಿಡಾರ್‌ಗೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಲಿದೆ. ಬೆಂಗಳೂರು

ಬ್ಲೂ ಲೈನ್ ಮೆಟ್ರೋ ಮಾರ್ಗವು ಬೆಳ್ಳಂದೂರು, ಕಾಡುಬೀಸನಹಳ್ಳಿ, ಮಾರತಹಳ್ಳಿ, ಮಹದೇವಪುರ ಸೇರಿದಂತೆ ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸಲಿದೆ. ಇದರಿಂದ ಖಾಸಗಿ ವಾಹನಗಳ ಅವಲಂಬನೆ ಕಡಿಮೆಯಾಗುವ ಜೊತೆಗೆ ಪ್ರಯಾಣದ ಸಮಯವೂ ಗಣನೀಯವಾಗಿ ಇಳಿಯುವ ನಿರೀಕ್ಷೆಯಿದೆ.

ಯೋಜನೆಯ ಭಾಗವಾಗಿ ಬಿಇಎಂಎಲ್ ನಿರ್ಮಿಸಿರುವ ಮೊದಲ ಆರು ಬೋಗಿಗಳ ಚಾಲಕರಹಿತ (Driverless) ರೈಲು ಈಗಾಗಲೇ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಗೊಂಡಿದೆ. ಅತ್ಯಾಧುನಿಕ ಸುರಕ್ಷತಾ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳನ್ನು ಹೊಂದಿರುವ ಈ ರೈಲುಗಳು 2026ರ ಅಂತ್ಯದೊಳಗೆ ಸೇವೆಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು

ಇದನ್ನೂ ನೋಡಿ : ಒಳಚರಂಡಿ ಸಂಸ್ಕರಣಾ ಟ್ಯಾಂಕ್‌ಗೆ ಬಿದ್ದ ಇಬ್ಬರು ಕಾರ್ಮಿಕರಿಗಾಗಿ ಹುಡುಕಾಟ ಮುಂದುವರಿಕೆ

ಇದೇ ವೇಳೆ, ಬ್ಲೂ ಲೈನ್ ಮೆಟ್ರೋದ ಕೆ.ಆರ್.ಪುರಂ–ಮಾರತಹಳ್ಳಿ ಮಾರ್ಗದಲ್ಲಿ 2026ರ ಅಕ್ಟೋಬರ್ ವೇಳೆಗೆ ಪ್ರಾಯೋಗಿಕ ಸಂಚಾರ (Trial Run) ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನಂತರ ಹಂತ ಹಂತವಾಗಿ ವಿಮಾನ ನಿಲ್ದಾಣದವರೆಗೂ ಸಂಪರ್ಕ ವಿಸ್ತರಿಸಲಾಗುತ್ತದೆ.

ಪ್ರಸ್ತುತ ಸಿಲ್ಕ್ ಬೋರ್ಡ್–ಕೆ.ಆರ್.ಪುರಂ ORR ಮಾರ್ಗದಲ್ಲಿ ಪ್ರತಿದಿನ 8 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಲೂ ಲೈನ್ ಮೆಟ್ರೋ ಯೋಜನೆ ಬೆಂಗಳೂರಿನ ಸಂಚಾರ ಸಮಸ್ಯೆ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : LIVE : SIR ವಿರೋಧಿಸಿ ಬೃಹತ್ ಪ್ರತಿರೋಧ ಸಮಾವೇಶ

Donate Janashakthi Media

Leave a Reply

Your email address will not be published. Required fields are marked *