ಶವದ ಜೊತೆ ರೋಗಿಗೆ ಚಿಕಿತ್ಸೆ – ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ

ಬೆಂಗಳೂರು : ನಗರದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಒಂದೆರಡಲ್ಲ. ಈ ಹಿಂದೆಯೂ ಹಲವು ಬಾರಿ ಅವ್ಯವಸ್ಥೆಯ ಕಾರಣಕ್ಕೆ ಸುದ್ದಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆ ಇದೀಗ ಮತ್ತೆ ಸುದ್ದಿಯಲ್ಲಿದೆ.

ಶುಶ್ರೂಷೆ ಅರಸಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಹೀನಾಯವಾಗಿ ನಡೆಸುಕೊಳ್ಳುತ್ತಿರುವ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ.

ಶವದ ಪಕ್ಕದಲ್ಲೇ ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೃತ ವ್ಯಕ್ತಿಯ ಶವ ತೆರವು ಮಾಡದೇ, ಮತ್ತೊಬ್ಬ ರೋಗಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇನ್ನು ಆಸ್ಪತ್ರೆಯಲ್ಲಿ ಐಸಿಯು ಬೆಡ್ ಇಲ್ಲದೇ ಸರಣಿ ಸಾವಾಗಾಗುತ್ತಿದೆ.  ಐಸಿಯು ಬೆಡ್ ಕೊರತೆಯಿಂದ ರೋಗಿಗಳು ಆಂಬ್ಯುಲೆನ್ಸ್ನಲ್ಲೇ ಪರದಾಡುತ್ತಿರುವ  ದೃಶ್ಯಗಳು ವಿಕ್ಟೋರಿಯಾ ದಲ್ಲಿ ಕಾಣಿಸುತ್ತಿವೆ.

ಜೀವ ಕೈಯಲ್ಲಿಡಿದು ವಿಕ್ಟೋರಿಯಾ ಅಸ್ಪತ್ರೆಯ ಮೆಟ್ಟಿಲೇರುವ ಜನರಿಗೆ ನರಕ ತೋರಿಸಲಾಗುತ್ತಿದೆ. ಜನಸಾಮಾನ್ಯರ ಜೀವಕ್ಕೆ ಇವರು ಕೊಡುವ ಬೆಲೆಯೇ ಇಷ್ಟು ಎಂಬ ಅನುಮಾನ ಕಾಡ ತೊಡಗಿದೆ.

ಶವದ ಪಕ್ಕದಲ್ಲೇ ಟ್ರೀಟ್ಮೆಂಟ್ ಕೊಡ್ತಿರೋ ಆರೋಪ :  ಇನ್ನು ಒಂದೇ ಹಾಸಿಗೆಯಲ್ಲಿ ಸತ್ತ ಶವದ ಪಕ್ಕದಲ್ಲೇ ಚಿಕಿತ್ಸೆಯನ್ನೂ ಇಲ್ಲಿ ಕೊಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಸತ್ತ ವ್ಯಕ್ತಿಯ ಶವ ತೆರವು ಮಾಡದೇ, ಮತ್ತೊಬ್ಬ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಆರ್‌ಎಸ್ ಪಕ್ಷ ಆರೋಪಿಸುತ್ತಿದೆ. ಹೊರಗಿನಿಂದ ಬರುವ ರೋಗಿಗಳಿಗೆ ಕೂರಲೂ ಒಂದು ಸೂಕ್ತ ವ್ಯವಸ್ಥೆ ಈ ಆಸ್ಪತ್ರೆಯಲ್ಲಿ ಇಲ್ಲದಂತಾಗಿದೆ. ಪರಿಣಾಮ, ರೋಗಿಗಳು ಮೆಟ್ಟಿಲ ಮೇಲೆಯೇ ಗೋಳಾಡುವಂತಾಗಿದೆ. ಜೀವನ್ಮರಣದ ಮಧ್ಯೆ ಹೋರಾಡುವ ಬಡ ರೋಗಿಗಳ ಗೋಳಾಟ ಕೇಳೋರಿಲ್ಲ ಇಲ್ಲಿ. ನಡಿಯಲೂ ಆಗದ ರೋಗಿಗಳಿಗೆ ಕಡ್ಡಾಯವಾಗಿ ಸ್ಟ್ರಕ್ಚರ್ ಒದಗಿಸಬೇಕು. ಅದಕ್ಕೂ ಇಲ್ಲಿ ಹಣದ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಈ ಎಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ವಿಕ್ಟೋರಿಯಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಮೇಶ್ ಕೃಷ್ಣ, ನಿನ್ನ ನಡೆದ ಘಟನೆ ತಿಳಿದ ಕೂಡಲೇ ಸಂಬಂಧಪಟ್ಟವರು ಭೇಟಿ ಕೋಟ್ಟು ಸೂಕ್ತ ವ್ಯವಸ್ಥೆ ಮಾಡಿಕೊಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಗಳ ಕೊರತೆ ಇಲ್ಲ. ಇಲ್ಲಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಜನರು ಮಾಡಿಕೊಳ್ಳಲಿ ಎಂಬ ಹಾರಿಕೆ ಉತ್ತರವನ್ನು ಕೊಟ್ಟಿದ್ದಾರೆ.

ಜನರ ಹಣವನ್ನು ಸಂಬಳ ರೂಪದಲ್ಲಿ ಪಡೆದುಕೊಳ್ಳುವ ಇಂಥಾ ಸರ್ಕಾರಿ ನೌಕರರು ನಡೆಸುವ ಅಂಧ ದರ್ಬಾರ್ ಗೆ ಜನರು ತಮ್ಮ ಜೀವವನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದರ ಬಗ್ಗೆ ಆರೋಗ್ಯ ಸಚಿವರು ಆದಷ್ಟು ಬೇಗ ಗಮನ ಹರಿಸಿ ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಹೇಳಲು ಮುಂದಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *