ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಗೆ ಶನಿವಾರ ಕೊನೆ ದಿನವಾಗಿದೆ.
ವಾಹನಗಳ ಮಾಲೀಕರು ದಂಡ ಪಾವತಿಸದೇ ಇದ್ದಲ್ಲಿ ಕೂಡಲೇ ಪಾವತಿಸುವ ಮೂಲಕ ರಿಯಾಯಿತಿ ಸದುಪಯೋಗ ಪಡಿಸಿಕೊಳ್ಳಲು ಮಧ್ಯರಾತ್ರಿ 12 ಗಂಟೆವರೆಗೆ ಮಾತ್ರ ಅವಕಾಶವಿದೆ.
ಎರಡನೇ ಬಾರಿ ದಂಡ ಪಾವತಿಗೆ ಮಾ.4ರಿಂದ 18ರವರೆಗೆ ಅಂದರೆ ನಾಳೆವರೆಗೆ ರಿಯಾಯಿತಿಯಲ್ಲಿ ಅರ್ಧದಷ್ಟು ಮಾತ್ರ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ದಂಡದಿಂದ ಮುಕ್ತರಾಗಬಹುದಾಗಿದೆ.
ಇದನ್ನೂ ಓದಿ : ಸಂಚಾರಿ ನಿಮಯ ಉಲ್ಲಂಘನೆ; ದಂಡ ಪಾವತಿಗೆ ಶೇ. 50 ರಿಯಾಯಿತಿ-ದಂಡ ಕಟ್ಟಲು ಮುಗಿಬಿದ್ದ ಜನ
ದಂಡ ಪಾವತಿಸಲು ಪೇಟಿಎಂ ಆಯಪ್, ಕೆಎಸ್‍ಪಿ ಆಯಪ್, ಕರ್ನಾಟಕ ಒನ್, 144 ಬೆಂಗಳೂರು ಒನ್ ವೆಬ್‍ಸೈಟ್‍ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದ್ದು, ಕಳೆದ 13 ದಿನಗಳಲ್ಲಿ 3.22 ಲಕ್ಷ ಪ್ರಕರಣಗಳಿಂದ ನಿನ್ನೆವರೆಗೂ 9.30 ಕೋಟಿ ರೂ. ದಂಡ ಸಂಗ್ರಹವಾಗಿದ್ದು, ನಾಳೆಯೊಳಗಾಗಿ ಇನ್ನೂ 3 ಕೋಟಿ ಬಾಕಿ ದಂಡ ಸಂಗ್ರಹವಾಗುವ ನಿರೀಕ್ಷೆಯಿದೆ.ಕಳೆದ ಬಾರಿ 126.87 ಕೋಟಿ ದಂಡ ಸಂಗ್ರಹವಾಗಿತ್ತು.