ಉದ್ಘಾಟನೆಗೊಂಡ ಎರಡೇ ದಿನಕ್ಕೆ ಕಿತ್ತು ಬಂದ ದಶಪಥ ರಸ್ತೆ

ರಾಮನಗರ : ಉದ್ಘಾಟನೆಯಾದ ಮರುದಿನವೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಿತ್ತುಕೊಂಡು ಬಂದಿದೆ. ಡಾಂಬರ್ ಕಿತ್ತು ಬಂದು ಜಲ್ಲಿಕಲ್ಲುಗಳು ಕಾಣುತ್ತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಮನಗರ ಕಡೆಯಿಂದ ಬಿಡದಿ ಬೈಪಾಸ್ ರಸ್ತೆ ಮುಕ್ತಾಯದ ಜಾಗದಲ್ಲಿ ಸೇತುವೆಯೊಂದು ನಿರ್ಮಾಣ ಮಾಡಲಾಗಿದೆ. ಸೇತುವೆ ಆರಂಭದಲ್ಲಿ ರಸ್ತೆ ಕಿತ್ತು ಬಂದಿದ್ದು, ಈ ಹಿಂದೆ ಇದೇ ಜಾಗದಲ್ಲಿ ಹಲವು ವಾಹನಗಳು ಸ್ಕಿಡ್‌ ಆಗಿದ್ದವು ಎನ್ನಲಾಗಿದೆ. ಸದ್ಯ ರಸ್ತೆ ಕಿತ್ತು ಬಂದ ಹಿನ್ನೆಲೆ ಈ ಜಾಗದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ರಸ್ತೆಯ ಬದಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

‘ಬೆಂಗಳೂರು- ಮೈಸೂರು express ಹೈವೇ 40% ಕಮಿಷನ್ ಬಿಟ್ಟು 80% ಕಮಿಷನ್ ತೊಗೊಂಡಿರಬೇಕು ಇಷ್ಟೊಂದು ಕಳಪೆ ಕಾಮಗಾರಿ ಮಾಡಿದರೂ ಬಾಯಿ ಬಿಡದೇ ವಾಪಾಸ್ ಆಗಿದ್ದು ನೋಡಿದರೆ ಅವರಿಗೂ ಪಾಲು ಹೋಗಿರೋದು ಪಕ್ಕಾ ಅನ್ಸುತ್ತೆ’ ಎಂದು ಟ್ವಿಟರ್ ಬಳಕೆದಾರ ಶರಣಬಸವ ಹೂಗಾರ ಪ್ರತಿಕ್ರಿಯಿಸಿದ್ದಾರೆ.

ದಶಪಥ ಹೆದ್ದಾರಿ ಉದ್ಘಾಟನೆಯಾದಗಿನಿಂದ ಇದು ಜನ ಸ್ನೇಹಿ ರಸ್ತೆಯಾಗಿ ಉಳಿದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಟೋಲ್‌ ಸಂಗ್ರಹಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ನಿನ್ನೆ ಜನ ಟೋಲ್‌ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಇಂದು ರಸ್ತೆಯೇ ಕಿತ್ತುಕೊಂಡು ಬಂದಿದೆ. ಚುನಾವಣೆಯಲ್ಲಿ ಮತ ಸೆಳೆಯುವುದಕ್ಕಾಗಿ  ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಇದು ಕಳಪೆ ಕಾಮಗಾರಿ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪ್ರಧಾನಿ ಮೋದಿ ಜನರಿಗೆ ಅನುಕೂಲ ಆಗಲೆಂದು ರಸ್ತೆ ಉದ್ಘಾಟಿಸಿದರೋ ಅಥವಾ ಜನರಿಂದ ಟೋಲ್‌ ಸಂಗ್ರಹಿಸುವುದಕ್ಕಾಗಿ ಟೋಲ್‌ ಉದ್ಘಾಟಿಸಿದರೋ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿಬೆಂ-ಮೈ ಎಕ್ಸ್‌ಪ್ರೆಸ್‌ವೇ – ಟೋಲ್‌ ಸಂಗ್ರಹ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Donate Janashakthi Media

One thought on “ಉದ್ಘಾಟನೆಗೊಂಡ ಎರಡೇ ದಿನಕ್ಕೆ ಕಿತ್ತು ಬಂದ ದಶಪಥ ರಸ್ತೆ

  1. ಸುಳ್ಳನ್ನೇ ಸತ್ಯ ಹೇಳುವವರಷ್ಟೇ ನಿಖರ ಆಂಗಿಕ ಭಂಗಿಗಳೊಂದಿಗೆ ಭಾಷಣ ಮಾಡುವವರಲ್ಲಿ ಬಹುಶಃ ಪ್ರಪಂಚದಲ್ಲಿಯೇ ಮೊದಲ ಸಾಲಿನಲ್ಲಿ ನಿಲ್ಲುವವರು ಮೋದಿಯವರು ಮಾತ್ರ. ನಂತರ ಅವರ ಹಿಂದೆ ನಿಲ್ಲುವವರು ಅಮಿತ್ ಶಾ. ರಸ್ತೆ ಅವಾಂತರ ನೋಡಲು ಒಂದು ಮಳೆ ಆಗುವವರೆಗೆ ಕಾಯಬೇಕು. ಇಲ್ಲಿಯವರೆಗೆ ಕ್ರೆಡಿಟ್ ಗಾಗಿ ಹೋರಾಡುತ್ತಿರುವವರು ಮೂಲೆ ಸೇರುವುದು ಗ್ಯಾರಂಟಿ. ಇದೊಂದೇ ಕಾರಣಕ್ಕೆ ಇವರು ಚುನಾವಣೆಯಲ್ಲಿ ಸೋಲುವುದೂ ಗ್ಯಾರಂಟಿ.
    ದಯಾನಂದ ಮೂರ್ತಿ, ಮೈಸೂರು

Leave a Reply

Your email address will not be published. Required fields are marked *