ರಾಮನಗರ: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಚಾರಿ ಮುಕ್ತವಾಗಲಿದ್ದು, ಈ ಮೂಲಕ ಪ್ರಯಾಣಿಕರು ಹಣ ಪಾವತಿಸಿ ರಸ್ತೆ ಸಂಚಾರ ಉಪಯೋಗಿಸಬೇಕು. ನಾಳೆಯಿಂದ(ಫೆಬ್ರವರಿ 27) ಹಣ ಪಾವತಿಗೆ ಟೋಲ್ ಕೇಂದ್ರಗಳು ಆರಂಭವಾಗಲಿದೆ. 117 ಕಿ.ಮೀ ಉದ್ದದ ಹೆದ್ದಾರಿಯ ಬೆಂಗಳೂರು–ನಿಡಘಟ್ಟವರೆಗಿನ 56 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದೆ. ಹೆದ್ದಾರಿ ಉದ್ಘಾಟನೆಗೂ ಮೊದಲೇ ಹಣ ಪಾವತಿಗೆ ಅನುಮತಿ ನೀಡಲಾಗಿದೆ.
ಈ ಮೂಲಕ ಇಷ್ಟು ದಿನ ಉಚಿತ ಪ್ರಯಾಣಕ್ಕೆ ಕಡಿವಾಣ ಬೀಳಲಿದೆ. ಮಾರ್ಗದಲ್ಲಿ ಬರುವ ಮೊದಲ ಟೋಲ್ ಬೆಂಗಳೂರು – ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಇದಾಗಿದೆ. ಮತ್ತೊಂದು ಟೋಲ್ ಮಂಡ್ಯ ಬಳಿ ಇದ್ದು, ಅದರ ಕಾರ್ಯಾಚರಣೆ ಸದಸ್ಯಕ್ಕೆ ಆರಂಭಿಸಲಿಲ್ಲ.
ಇದನ್ನು ಓದಿ: ಹೆದ್ದಾರಿ ಕೆಳ ಸೇತುವೆ ನಿರ್ಮಿಸುವಂತೆ ದಶಪಥ ರಸ್ತೆ ತಡೆದು ಪ್ರತಿಭಟನೆ – ಪೊಲೀಸರಿಂದ ಲಾಠಿ ಪ್ರಹಾರ
ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ನಿರ್ಮಿಸಿರುವ ಟೋಲ್ ಮೊತ್ತ ಪಾವತಿಸಿ ಮೈಸೂರಿಗೆ ಸಂಚರಿಸಬೇಕು. ಹಾಗೆಯೇ ಮೈಸೂರು ಕಡೆಯಿಂದ ಪ್ರಯಾಣಿಸುವವರು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್‌ನಲ್ಲಿ ಟೋಲ್ ಶುಲ್ಕ ಕಟ್ಟಿ ಬೆಂಗಳೂರಿನ ಕಡೆಗೆ ಪ್ರಯಾಣಿಸಬೇಕು.
ಆರು ಪಥಗಳ ಹೆದ್ದಾರಿ ಸಂಚಾರಕ್ಕೆ ಈ ಟೋಲ್ ಶುಲ್ಕ ಅನ್ವಯ ಆಗಲಿದೆ. ತಲಾ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಯಾವುದೇ ಟೋಲ್ ಶುಲ್ಕ ಪಾವತಿಸುವ ಅಗತ್ಯವಿಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.
ಇದನ್ನು ಓದಿ: ರಾಮನಗರ: ಭಾರೀ ಮಳೆಗೆ ಮುಳುಗಿದ ಬೆಂಗಳೂರು-ಮೈಸೂರು ಹೆದ್ದಾರಿ, ಜನಜೀವನ ಅಸ್ತವ್ಯಸ್ಥ
ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಹತ್ತುಪಥಗಳ ಹೆದ್ದಾರಿ ಉದ್ಘಾಟಿಸಲಿದ್ದು, ಅದಕ್ಕೂ ಮುನ್ನವೇ ಪ್ರಯಾಣಿಕರು ಟೋಲ್ ಕಟ್ಟಬೇಕಿದೆ. ಟೋಲ್ ಕೇಂದ್ರಗಳು ತಲಾ 11 ಗೇಟುಗಳನ್ನು ಒಳಗೊಂಡಿದ್ದು, ಫ್ಯಾಶ್ ಟ್ಯಾಗ್ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಳ್ಳಲಿವೆ.
ಟೋಲ್ ದರದ ವಿವರ…
- ಕಾರು, ಜೀಪು, ವ್ಯಾನು ಏಕಮುಖ ಸಂಚಾರಕ್ಕೆ 135 ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರೂ.
- ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ಏಕಮುಖ ಸಂಚಾರಕ್ಕೆ 220ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ. ಸ್ಥಳೀಯ ವಾಹನಗಳಿಗೆ 110 ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 7315 ರೂ.
- ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್) ಏಕಮುಖ ಸಂಚಾರಕ್ಕೆ 460ರೂ. ಅದೇ ದಿನ ಮರು ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 15,325 ರೂ.
- ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್)ಏಕಮುಖ ಸಂಚಾರಕ್ಕೆ 500 ರೂ. ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 16,715 ರೂ.
- ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ್, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್)ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರೂ.
- ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)ಏಕಮುಖ ಸಂಚಾರಕ್ಕೆ 880ರೂ. ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440 ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29,255 ರೂ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ