ಬೆಂ-ಮೈ ಎಕ್ಸ್‌ ಪ್ರೆಸ್‌ ವೇ: ಹೆಚ್ಚುವರಿ ಟೋಲ್‌ ಸಂಗ್ರಹ ವಿರೋಧಿಸಿ ನಿಖಿಲ್‌ ಪ್ರತಿಭಟನೆ

ಬೆಂಗಳೂರು: ರಾಜಧಾನಿ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇಯ ಸರ್ವೀಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸದೆ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುತ್ತಿರುವುದನ್ನು ಖಂಡಿಸಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಡದಿ ಸಮೀಪದ ಕಣಮಿಣಿಕಿ ಟೋಲ್ ಪ್ಲಾಜಾ ಬಳಿ ಜಮಾಯಿಸಿದ ಕಾರ್ಯಕರ್ತರು ಹೆಚ್ಚುವರಿ ಶುಲ್ಕ ಸಂಗ್ರಹ ಖಂಡಿಸಿ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಗಡಿ ಶಾಸಕ ಮಂಜು ನೇತೃತ್ವದಲ್ಲಿ ರಾಮನಗರ,ಚನ್ನಪಟ್ಟಣ, ಬಿಡದಿ, ಕೆಂಗೇರಿ ಸೇರಿದಂತೆ ಸುತ್ತಮುತ್ತಲ ಊರುಗಳಿಂದಲೂ ನೂರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಟೋಲ್‌ಗೆ  ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸರ್ವೀಸ್ ರಸ್ತೆ ಸಹ ಮುಕ್ತವಾಗಿಲ್ಲ. ವಾಹನ ಸವಾರರಿಗೆ ಎಲ್ಲಿಯೂ ಸಹ ಸೂಚನಾ ಫಲಕಗಳಿಲ್ಲ. ಇದರಿಂದ ಭಾರೀ ತೊಂದರೆಯಾಗುತ್ತಿದೆ. ಈ ಎಲ್ಲ ಅವ್ಯವಸ್ಥೆ ನಡುವೆಯೂ ರಾಜಕೀಯ ಪ್ರಚಾರಕ್ಕಾಗಿ ಹೆದ್ದಾರಿ ಉದ್ಘಾಟಿಸಿ ಮನಬಂದಂತೆ ವಾಹನ ಸವಾರರಿಂದ ಹೆಚ್ಚುವರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ವಾಹನ ಸವಾರರು, ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ, ಚನ್ನಪಟ್ಟಣ, ಬಿಡದಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆ ಸರಿಯಾಗಿಲ್ಲ. ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ. ಇದರಿಂದ ಸ್ಥಳೀಯರಿಗೆ, ರೈತರಿಗೆ ತೀವ್ರ ತೊಂದರೆಯಾಗಿದೆ. ಏಕಮುಖ ಸಂಚಾರಕ್ಕೆ ಕಾರಿಗೆ 250ರೂ. ತೆಗೆದುಕೊಳ್ಳುತ್ತಿದ್ದು, ಕೇವಲ 55ಕಿಮೀಗೆ ಇಷ್ಟು ದರ ನಿಗದಿಮಾಡಿರುವುದು ಸರಿಯಲ್ಲ. ರಸ್ತೆಯಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲ ಎಂದು ಕಿಡಿಕಾರಿದರು. ಟೋಲ್ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ರಸ್ತೆ ತಡೆಯಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಗಿ ಭದ್ರತೆ:
ಟೋಲ್ ಸಂಗ್ರಹ ಪ್ರಾರಂಭವಾದಾಗಿನಿಂದ ಪ್ರತಿದಿನ ಪ್ರತಿಭಟನೆ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಟೋಲ್ ಪ್ಲಾಜಾ ಬಳಿ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸ್ವಚ್ಛ್ ಭಾರತ್ ಬಗ್ಗೆ ಬಿಜೆಪಿಯವರು ಮಾತಾಡುತ್ತಾರೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ  ಸ್ವಚ್ಛಭಾರತ್ ಇರಬಾರದಾ? ನಾವು ಶೌಚಾಲಯಕ್ಕೆ ಎಲ್ಲಿ ಹೋಗಬೇಕು? ಎಂದು ಪೆಶ್ನೆಸಿದರು.

ಅಪಘಾತವಾದರೇ, ಆರೋಗ್ಯ ಸಮಸ್ಯೆಯಾದರೇ, ಶೌಚಾಲಯ ಅಗತ್ಯವಿದ್ದರೆ ಈ ಎಕಸ್ಪ್ರೆಸ್ ಹೆದ್ದಾರಿಯಲ್ಲಿ ಅಗತ್ಯ ಸೌಲಭ್ಯವಿಲ್ಲ ಎಂದು ಕಿಡಿಕಾರಿದರು.

ಟೋಲ್ ದರದಿಂದಾಗಿ ಮೈಸೂರು ಬೆಂಗಳೂರು ಮಾರ್ಗದ ಬಸ್ ದರವನ್ನು ಹೆಚ್ಚಳ ಮಾಡಾಗಿದೆ. ಸದ್ಯ ಟಿಕೆಟ್ 20 ರಿಂದ 25 ರೂಪಾಯಿ ಹೆಚ್ಚಿದ್ದಾರೆ. ಮಾತ್ರವಲ್ಲದೇ, ದೇಶದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಹೆಚ್ಚಾಗಿದೆ. ಶ್ರೀಮಂತರಿಗೆ ಮಾತ್ರವೇ ಈ ರಸ್ತೆಯೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ರಸ್ತೆಯಲ್ಲಿ ಓಡಾಡಬೇಕು ಎಂದರೆ ದಿನ 270 ರೂಪಾಯಿ ಟೋಲ್ ಪಾವತಿಸಬೇಕು. ತಿಂಗಳಿಗೆ 8-9 ಸಾವಿರ ಆಗುತ್ತದೆ. ಎಲ್ಲರೂ ಆರ್ಥಿಕವಾಗಿ ಸೃಢವಾಗಿರುವುದಿಲ್ಲ. ಈ ಸರ್ಕಾರ ಕಾಮನ್ ಮ್ಯಾನ್ ಸರ್ಕಾರ ಅಲ್ಲ. ಉದ್ಯಮಿಗಳು, ಬಿಸನೆಸ್ ಮ್ಯಾನ್ಗಳ ಸರ್ಕಾರವವೇ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಜಮೀನು ಒತ್ತುವರಿ ವಿಚಾರದಲ್ಲಿ ಬೇನಾಮಿಗಳಿಗೆ ಹಣ ಕೊಟ್ಟು ವಸೂಲಿ ಮಾಡಿದ್ದಾರೆ. ಟೋಲ್ ನ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿರೋದು ಯಾಕೆ. ಸರ್ವಿಸ್ ರಸ್ತೆ ಪೂರ್ಣಗಳಿಸದೇ ಹಣ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಾಗಡಿ ಶಾಸಕ ಎ ಮಂಜುನಾಥ್ ಮಾತನಾಡಿ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ. ಇಲ್ಲಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಇಲ್ಲಿನ ಅಧಿಕಾರಿಗಳಿಗೆ ಒತ್ತಡ ಏರಿದ್ದಾರೆ. ಸುಸಜ್ಜಿತ ರಸ್ತೆ ಮಾಡ್ತೀನಿ ಅಂತ ಹೇಳಿ, ದುಸ್ತಿತಿಯ ರಸ್ತೆ ನಿರ್ಮಾಣ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಬೆಂಗಳೂರಿನಿಂದ ಮೈಸೂರು ವರೆಗೆ ದಶಪಥ ಹೆದ್ದಾರಿ ಎಂದು ಹೇಳುತ್ತಾರೆ. ಆದರೆ ಇಲ್ಲಿನ ಅಧಿಕಾರಿಗಳು ಆರು ಪಥದ ರಸ್ತೆ ಎಂದು ಹೇಳುತ್ತಾರೆ. ಈ ಮೊದಲೇ ನಾಲ್ಕು ಪಥದ ರಸ್ತೆಯಲ್ಲಿ ಓಡಾಡುತ್ತಿದ್ದೆವು. ಇನ್ನೆರೆಡು ರಸ್ತೆ ಮಾಡುವುದಕ್ಕೆ ಇಷ್ಟೆಲ್ಲಾ ಖರ್ಚಾಗಿ ರಸ್ತೆ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.

ನಿಖಿಲ್ ಪೊಲೀಸ್ ವಶಕ್ಕೆ
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸ್ವಯಂ ಪ್ರೇರಿತರಾಗಿ ಪೊಲೀಸ್ ವಶಕ್ಕೆ ಒಳಗಾಗಿ ಪೊಲೀಸ್ ವ್ಯಾನ್ ಏರಿದರು.

Donate Janashakthi Media

Leave a Reply

Your email address will not be published. Required fields are marked *