ಬೆಳಗಾವಿ : ಮುಸ್ಲಿಂ ಸಮುದಾಯದ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಅನ್ಯಕೋಮಿನ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ವೀರಭದ್ರ ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಐವರು ಮುಸ್ಲಿಂ ಸಮುದಾಯದ ವೇಷ ಧರಿಸಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದರು. ಭಿಕ್ಷೆ ಬೇಡುವ ನೆಪದಲ್ಲಿ ಮನೆ–ಮನೆಗೆ ಭೇಟಿ ನೀಡುತ್ತಿದ್ದ ಅವರ ಸಂಶಯಾಸ್ಪದ ನಡೆ ಗಮನಿಸಿ ಸ್ಥಳೀಯರು ವಿಚಾರಿಸಿದಾಗ ಅವರು ವೇಷ ಮರೆಸಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಹೊಟ್ಟೆಪಾಡಿಗಾಗಿ ಈ ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದೇವೆ. ಭಿಕ್ಷೆ ಕೇಳುತ್ತಿದ್ದೇವೆ. ಬೇರೇನೂ ಉದ್ದೇಶವಿಲ್ಲ’ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 6 ಜನ ಹಿಂದೂ ಧರದಮಕ್ಕೆ ಸೇರಿದವರಾಗಿದ್ದು, ಅದರಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ. ಈ ಆರು ಮಂದಿ ಬೀದರ್ ಜಿಲ್ಲೆಯ ಹುಮನಾಬಾದ್‌ನವರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದು, ತಪ್ಪಿತಸ್ಥರಾಗಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮಾರ್ಕೆಟ್ ಠಾಣೆ ಸಿಪಿಐ ಎಂ.ಎಸ್. ತುಳಸಿಗೇರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಹಿಜಾಬ್–ಕೇಸರಿಶಾಲು ವಿವಾದ ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಮುಸ್ಲಿಮರಂತೆ ವೇಷಭೂಷಣ ಧರಿಸಿ ಓಡಾಡುತ್ತಿರುವುದು ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಹೆಸರು ತರುವ ಉದ್ದೇಶವಾಗಿದೆ. ಅವರು ಭಿಕ್ಷಾಟನೆಗಾಗಿ ಈ ವೇಷ ದರಿಸಿದ್ದೇವೆ ಎಂದು ಹೇಳುತ್ತಿದ್ದಾರೆ, ಭಿಕ್ಷೆ ಬೇಡಲು ಮುಸ್ಲಂ ವೇಷವೇ ಬೇಕಿತ್ತಾ? ಇದರ ಹಿಂದೆ ಬೇರೇನೋ ಉದ್ದೇಶವಿದೆ. ಪೊಲೀಸರು ಸರಿಯಾದ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.