ಬೆಂಗಳೂರು: ಬೆಂಗಳೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಹಿಂದೆ ನೀಡಿದ್ದ ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ಖುದ್ದಾಗಿ ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಇದೀಗ ಪೊಲೀಸರು ವಿಸ್ತೃತವಾದ ಮಾಹಿತಿ ನೀಡಿದ್ದಾರೆ. ಬೈಕ್ ಡಿಕ್ಕಿಯಾಗಿ ಗಲಾಟೆಯಾಗಿ ಚಂದ್ರುಗೆ ಚೂರಿ ಇರಿತ ಆಗಿದೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಕ್ತಸ್ರಾವವಾಗಿ ಚಂದ್ರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಉರ್ದು ಭಾಷೆಯಲ್ಲಿ ಮಾತನಾಡಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಚಂದ್ರು ಎಂಬ ಯುವಕನನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು.
ಇದನ್ನು ಓದಿ: ಪ್ರತಿ ಯೂನಿಟ್ ವಿದ್ಯುತ್ ದರ 35 ಪೈಸೆ ಹೆಚ್ಚಳ: ಏ.1ರಿಂದಲೇ ಪೂರ್ವಾನ್ವಯ ಜಾರಿ
ಪೊಲೀಸರು ಚಂದ್ರು ಕೊಲೆ ಪ್ರಕರಣದ ಬಗ್ಗೆ ಹಾಗೂ ಆರೋಪಿಗಳ ಬಂಧನದ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಗೃಹ ಸಚಿವರಿಗೆ ಅಧಿಕಾರಿಗಳು ಈ ರೀತಿಯ ಮಾಹಿಯನ್ನೇ ನೀಡಿಲ್ಲ ಎಂದು ತಿಳಿದುಬಂದಿದೆ. ಗೃಹ ಸಚಿವರ ಇವತ್ತಿನ ಹೇಳಿಕೆಯಿಂದ ಅಧಿಕಾರಿಗಳಲ್ಲೆ ಗೊಂದಲ ಉಂಟಾಗಿದೆ.
ನಾನು ನೀಡಿದ್ದ ಹೇಳಿಕೆ ಮೂಲಗಳ ಮಾಹಿತಿ ಆಧಾರವಾಗಿಟ್ಟುಕೊಂಡು ಹೇಳಿದ್ದೆ, ನಾನು ಈ ಹಿಂದೆ ಹೇಳಿದಂತೆ ಯಾವುದೇ ಘಟನೆ ನಡೆದಿಲ್ಲ. ಪ್ರಾಥಮಿಕ ಹಂತದ ತನಿಖೆಯಲ್ಲಿ ಆ ರೀತಿ ಇತ್ತು. ಅದಕ್ಕಾಗಿ ನಾನು ಹಾಗೇ ಹೇಳಿದ್ದೆ. ಈಗ ತನಿಖೆಯ ಸಂಪೂರ್ಣ ವರದಿ ಬಂದಿದೆ. ಆ ವರದಿಯಲ್ಲಿ ಅಪಘಾತದ ವಿಚಾರಕ್ಕೆ ಸಂಬಂಧಿಸಿದ ಕೊಲೆಯಾಗಿದೆ ಎಂಬುದು ಗೊತ್ತಾಗಿದೆ. ಹೀಗಾಗಿ ಇದನ್ನು ಬಿಟ್ಟು ಬೇರೆ ಯಾವ ವಿಷಯಕ್ಕೂ ಆತನ ಕೊಲೆಯಾಗಿಲ್ಲ. ಗೃಹ ಸಚಿವನಾಗಿ ನಾನು ಸರಿಯಾಗಿ ಹೇಳಬೇಕಾಗುತ್ತದೆ. ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸರಕಾರಿ ಸಭಾಂಗಣಗಳಿಗೆ ಶುಲ್ಕ ಹೆಚ್ಚಳ: ತೀವ್ರ ವಿರೋಧ
ಜೆಜೆ ನಗರ ಚಂದ್ರು ಕೊಲೆ ಪ್ರಕರಣದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಗೃಹ ಸಚಿವರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿದುಬಂದಿದೆ. ಹೇಳಿಕೆಯಿಂದಾಗುವ ಪರಿಣಾಮಗಳ ಬಗ್ಗೆ ಅಧಿಕಾರಿಗಳು ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ. ಗೃಹ ಸಚಿವರಿಗೆ ಪೊಲೀಸರು ನೀಡಿದ್ದ ಮಾಹಿತಿಗೂ, ಗೃಹ ಸಚಿವ ಅರಗ ಜ್ಞಾನೇಂದ್ರ ವ್ಯಕ್ತಪಡಿಸಿದ ಮಾಹಿತಿ ಬಗ್ಗೆ ಪೊಲೀಸರಿಗೆ ಗೊತ್ತಿಲ್ಲ ಎಂಬುದು ತಿಳಿದುಬಂದಿದೆ.
ತನಿಖೆ ಮುಂದುವರೆದಿದೆ: ಕಮಲ್ ಪಂತ್
ಎರಡು ಬೈಕ್ ನಡುವೆ ಡಿಕ್ಕಿಯಾಗಿ ಗಲಾಟೆಯಾಗಿದೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ರಕ್ತ ಸ್ರಾವದಿಂದ ಚಂದ್ರು ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಆರಗ ಜ್ಞಾನೇಂದ್ರ ಮಾತು ಸಮಾಜದಲ್ಲಿ ಶಾಂತಿ ಕದಡುವ ತಂತ್ರ: ಹೆಚ್ಡಿಕೆ
ಬೆಂಗಳೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಮತ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ‘ಗೃಹ ಸಚಿವರಿಗೆ ಜವಾಬ್ದಾರಿಯಿಲ್ಲ. ಸಣ್ಣತನದಿಂದ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ತರುವಂತ ಮಾತನಾಡಿದ್ದಾರೆ. ಗೃಹ ಸಚಿವರಿಗೆ ಜವಾಬ್ದಾರಿ ಇಲ್ಲ. ಅವರ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ. ತನಿಖೆಯಾಗದೇ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ಇದರಲ್ಲಿ ಯಾವುದು ಸತ್ಯ ಯಾವುದು ಅಸತ್ಯ? ಮಂತ್ರಿನೇ ತೀರ್ಪು ಕೊಟ್ಟ ಮೇಲೆ ಇನ್ಯಾವ ತನಿಖೆ ನಡೆಸುತ್ತೀರಿ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಪೊಲೀಸ್ ಇಲಾಖೆ ಮೇಲೆ ಸ್ವಲ್ಪ ನಂಬಿಕೆ ಇದೆ. ಆದರೆ ಗೃಹ ಸಚಿವರು ಅದನ್ನು ಕಡಿಮೆ ಮಾಡಿದ್ದಾರೆ. ಇಂಥಹ ಕೊಲೆ ಪ್ರಕರಣಗಳು ನಡೆದಿವೆ. ಆದರೆ, ಈವರೆಗೆ ಇಂಥಹ ಹೇಳಿಕೆಗಳು ಬಂದಿಲ್ಲ. ಆದರೆ ಯುವಕನ ಕೊಲೆ ಪ್ರಕರಣವನ್ನು ದಲಿತನ ಕೊಲೆ ಎಂದು ಹೇಳಿಕೆ ನೀಡಿದ್ದಾರೆ, ಜೊತೆಗೆ ವಿಚಾರಣೆಗೂ ಮುನ್ನ ಅವರೇ ತೀರ್ಪನ್ನು ಕೊಟ್ಟಿದ್ದಾರೆ. ಬಿಜೆಪಿಯವರು ಕೇವಲ ಮತ ರಾಜಕಾರಣ ಮಾಡುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.