ದಾವಣಗೆರೆ: ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಮೂರು ಬಾರಿ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್, “ಕಳೆದ ನಾಲ್ಕು ವರ್ಷದಿಂದ ನಾನು ಖಾಲಿ ಇದ್ದೇನೆ” ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಬೇಸರ ಹೊರಹಾಕಿದರು.
ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಡಿಐಜಿಪಿ ರವಿ ಡಿ.ನಾಲ್ಕು ವರ್ಷಗಳಿಂದ ನಾನು ಖಾಲಿ ಇದ್ದೇನೆ ಎಂದು ಅವರು ಬೇಸರ ಹೊರಹಾಕಿದ್ದಾರೆ. ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ರವಿ ಡಿ ಚನ್ನಣ್ಣನವರ್ ಭಾಷಣದಲ್ಲಿ ಅವರು ಈ ಮಾತು ಹೇಳಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಜಾತ್ರೆ ನಡೆಯುತ್ತಿದೆ ಪರೋಕ್ಷವಾಗಿ ಸರ್ಕಾರದ ವಿರುದ್ಧ ರವಿ ಡಿ ಚೆನ್ನಣ್ಣನವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನವದೆಹಲಿ| ನಾವು ಜನರ ತೀರ್ಪನ್ನು ಸ್ವೀಕರಿಸುತ್ತೇವೆ: ಅರವಿಂದ್ ಕೇಜ್ರಿವಾಲ್
ಬಳಿಕ ಸಂಸದ ವಿ ಸೋಮಣ್ಣ ರವಿ ಡಿ ಚೆನ್ನಣ್ಣವರಿಗೆ ತಮ್ಮ ಭಾಷಣದಲ್ಲಿ ಸಮಾಧಾನ ಪಡಿಸಿದರು. ಬಿಜೆಪಿ ಸರ್ಕಾರದಲ್ಲಿ ರವಿ ಚನ್ನಣ್ಣನವರನ್ನು ಚೆನ್ನಾಗಿ ನಡೆಸಿಕೊಂಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರನ್ನು ಚೆನ್ನಾಗಿ ನಡೆಸಿಕೊಂಡಿದ್ದೇವೆ ಎಂದರು.
ಆದರೆ ಈಗ ತೊಂದರೆ ಆಗಿರಬೇಕು ಅದಕ್ಕೆ ಅವರು ಖಾಲಿ ಇದ್ದೇನೆ ಎಂದು ಹೇಳುತ್ತಿದ್ದಾರೆ..ರವಿ ಚನ್ನಣ್ಣವರ ಒಪ್ಪಿದರೆ ಕೇಂದ್ರ ಸರ್ಕಾರದ ಸೇವೆಗೆ ತೆಗೆದುಕೊಳ್ಳುತ್ತೇವೆ. ತಾಳ್ಮೆ ಇರಲಿ, ಪ್ರತಿಭೆ ಮಾನದಂಡ, ಅವಕಾಶ ಹುಡುಕಿಕೊಂಡು ಬರುತ್ತದೆ ಎಂದು ರವಿ ಡಿ ಚೆನ್ನಣ್ಣನವರ್ ಅವರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಮಾಧಾನಪಡಿಸಿದರು.
ಇದನ್ನೂ ನೋಡಿ: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿJanashakthi Media