ಜ್ಞಾನ ಸಂಪಾದನೆಗಾಗಿ ಅಧ್ಯಯನಶೀಲರಾಗಿ – ಪ್ರೊ.ಎಂ.ವೆಂಕಟೇಶ್ವರಲು

ಕುಣಿಗಲ್: ಶಿಕ್ಷಣಕ್ಕಾಗಿ ವಿದ್ಯಾರ್ಥಿ ಜೀವನ ಅರ್ಪಿಸಿ, ಜ್ಞಾನ ಸಂಪಾದನೆಗಾಗಿ ಅಧ್ಯಯನಶೀಲರಾಗಿ ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ. ವಿದ್ವಾಂಸರು ಎಲ್ಲೆಡೆ ಗೌರವಿಸಲ್ಪಡುತ್ತಾರೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿಯಿಂದ ಏರ್ಪಡಿಸಿದ್ದ ಇಗ್ನೈಟ್ 2025, ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಭಾರತದ ಯುವ ಪ್ರತಿಭೆಗೆ ವಿಶ್ವವೇ ಬೆರಗಾಗಿದೆ. ವಿಶ್ವದ ಬಹುತೇಕ ಉದ್ದಿಮೆಗಳ ಸಿಇಒ ಗಳು ಭಾರತೀಯರಾಗಿದ್ದು,  ವಿದ್ಯಾರ್ಥಿಗಳು ಪಠ್ಯದ ಜತೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ : ತುರ್ತು ನಿರ್ಗಮನ ಬಾಗಿಲು ಇಲ್ಲದ ಹೊರ ರಾಜ್ಯಗಳ ಬಸ್‌ಗಳ ಮೇಲೆ ಕ್ರಮ: ಸರ್ಕಾರ

ತುಮಕೂರು ವಿಶ್ವವಿದ್ಯಾನಿಲಯ ದಾನಿಗಳ ನೆರವಿನಿಂದ ಮಧ್ಯಾಹ್ನದ ಉಪಹಾರ ಯೋಜನೆ ಜಾರಿಗೆ ತಂದಿದೆ. 5 ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಇಂಗ್ಲೆಂಡಿಗೆ ಕಳಿಸಿದೆ. ನವೋದ್ಯಮ ತರಬೇತಿ ಕೇಂದ್ರ ಪ್ರಾರಂಭಿಸಿ ಯುವಜನರಿಗೆ ಉದ್ಯಮ ಪ್ರಾರಂಭಿಸಿಲು ಸಹಕರಿಸಿದೆ ಎಂದರು.

ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಿಮಾಲಯ ಪಬ್ಲಿಷಿಂಗ್ ಹೌಸ್ ನೀಡಿದ ಪಠ್ಯಪುಸ್ತಕ ನೀಡಲಾಯಿತು. ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎನ್.ನರಸಿಂಹಮೂರ್ತಿ, ವಾಣಿಜ್ಯಶಾಸ್ತ್ರ ಕಲಿತವರು ಜಾಗತಿಕ ಆರ್ಥಿಕತೆ, ನಾವೀನ್ಯತೆ, ವ್ಯಾಪಾರ, ಉದ್ದಿಮೆ, ಹಣಕಾಸು, ವಿಮೆ, ಮಾರುಕಟ್ಟೆ ಮತ್ತು ಸಂಪನ್ಮೂಲ ನಿರ್ವಹಣೆಯ ಜ್ಞಾನ ಅರಿತು ವಿಶ್ವದೆಲ್ಲೆಡೆ ಇರುವ ಅವಕಾಶ ಪಡೆಯಬಹುದು ಎಂದರು.

ಪ್ರಾಂಶುಪಾಲ ರಾಮಾಂಜನಪ್ಪ, ಆಂಗ್ಲ ವಿಭಾಗದ ಮುಖ್ಯಸ್ಥ ಸಿ.ಆರ್.ಮನೋಜ್, ಮ್ಯಾನೇಜರ್ ಚೆಲುವಮೂರ್ತೀ, ಸಿ.ಜಿ.ನಾಗಮಣಿ, ಮೋಜಿನಕುಮಾರ್, ಶಶಿಕಲ, ಬಬಿತ, ಮಂಜುಸ್ವಾಮಿ ನಾಗಮಣಿ ಬಿ.ಸುರೇಶ್, ಇದ್ದರು.

ಇದನ್ನೂ ನೋಡಿ : ನಾಟಕ| ಸಂಪತ್ತಿಗೆ ಸವಾಲ್‌ | ಮೀಡಿಯಾ ಕ್ಲಬ್‌ ಕೊಪ್ಪಳ |ಪಿ.ಬಿ. ಧುತ್ತರಗಿ Janashakthi Media

Donate Janashakthi Media

Leave a Reply

Your email address will not be published. Required fields are marked *