ಬೆಂಗಳೂರು: ಈ ದೇಶದಲ್ಲಿ ಸಂಪತ್ತು ಸೃಷ್ಟಿಯಾಗುವುದು ರೈತ ಕಾರ್ಮಿಕರಿಂದಾಗಿ ಎಂದು ರೈತ ಸಂಘದ ಹೋರಾಟಗಾರ ಬಸವರಾಜಪ್ಪ ಹೇಳಿದರು. ಕಾರ್ಮಿಕರಿಂದ
ಮೂರು ದಿನಗಳ ‘ದುಡಿಯುವ ಜನತೆಯ ಮಹಾಧರಣಿʼ ಎರಡನೇ ದಿನದ ಕಾರ್ಯಕ್ರಮದಲ್ಲಿ ರೈತ ನಾಯಕ ಬಸವರಾಜಪ್ಪ ಮಾತನಾಡಿ, ಜನರ ಭವಣೆಯ ಕುರಿತು ಬಾಯಿ ಬಿಚ್ಚದ ಮೋದಿ ಸರ್ಕಾರ, ರಾಮ ಮಂದಿರ ಕಟ್ಟಿದ್ದೇವೆ ಎಂಬ ಮಾತನ್ನು ಆಡುತ್ತಿದೆ. ರಾಮಮಂದಿರದಿಂದ ಜನರ ಬದುಕು ಹಸನಾಗುವುದಿಲ್ಲ ಎಂಬುದು ದುಡಿಯ ಜನರಾದ ನಮಗೆ ಗೊತ್ತಿದೆ. ದುಡಿಯುವ ರೈತ ಕಾರ್ಮಿಕರಿಂದ ಸಂಪತ್ತು ಸೃಷ್ಟಿಯಾಗುತ್ತಿದೆ, ಆದರೆ ಅದು ಶ್ರೀಮಂತರ ಕೈಯಲ್ಲಿ ಕೇಂದ್ರೀಕರಣಗೊಳ್ಳುತ್ತಿದೆ. ಮೋದಿ ಸರ್ಕಾರ ಸಂಪತ್ತಿನ ಕೇಂದ್ರೀಕರಣಕ್ಕೆ ನೀತಿಗಳನ್ನು ಮಾರ್ಪಾಡು ಮಾಡುತ್ತಿದೆ ಎಂದರು.
ಇದನ್ನೂ ಓದಿ:ಮಹಾಧರಣಿ| ನಮ್ಮ ಶತ್ರುಗಳ ಹೃದಯಗಳಲ್ಲಿ ಭಯ ಬಿತ್ತುವ ಹೋರಾಟ ನಾವು ಕಟ್ಟಬೇಕಾಗಿದೆ-ವಿಜೂ ಕೃಷ್ಣನ್
ಧರ್ಮ, ಜಾತಿಗಳ ನಡುವೆ ಬೆಂಕಿ ಹಚ್ಚಿ ಅಧಿಕಾರ ಹಿಡಿಯಬಹುದು ಎಂದು ಬಿಜೆಪಿ ನಂಬಿತ್ತು. ಆದರೆ ನಮ್ಮ ರಾಜ್ಯದ ಜನರು ಅವರನ್ನು ಸೋಲಿಸಿ ಮನೆಗೆ ಕಳುಹಿಸಿದರು. ಹೊಸ ಸರ್ಕಾರ ಆರು ತಿಂಗಳಾದರೂ ಗ್ಯಾರೆಂಟಿ ಹಿಂದೆಯೆ ತೇಲಾಡುತ್ತಿದೆ. ಮೂರು ರೈತ ವಿರೋಧಿ ಕಾನೂನನ್ನು ವಾಪಾಸು ಪಡೆಯಲು ಕೇಳಿಕೊಂಡರೂ ಸಹ ಈ ವರೆಗೂ ಅದನ್ನು ವಾಪಾಸು ಪಡೆದಿಲ್ಲ. ಬಿಜೆಪಿ ಸರ್ಕಾರಕ್ಕೆ ಕೊಟ್ಟ ಎಚ್ಚರಿಕೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೂ ನೀಡುತ್ತಿದ್ದೇವೆ ಎಂದರು. ಕಾರ್ಮಿಕರಿಂದ
ಒಂದು ಹೆಕ್ಡೇರ್‌ಗೆ ಕನಿಷ್ಠ 40 ಸಾವಿರ ಪರಿಹಾರ ನೀಡಬೇಕಿದೆ. ರೈತ ಕಾರ್ಮಿಕರ ಗುಳೆ ಹೋಗುವುದನ್ನು ತಪ್ಪಿಸಿ ಆಯಾ ಗ್ರಾಮದಲ್ಲಿ ಸರ್ಕಾರ ಅವರಿಗೆ ಕೆಲಸ ನೀಡಬೇಕು. ರೈತರನ್ನು ಮರೆತು ಗ್ಯಾರೆಂಟಿ ಯೋಜನೆಯಲ್ಲಿ ತೇಲಾಡಿದರೆ ಕಾಂಗ್ರೆಸ್ ಕೂಡಾ ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಂತ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿ, ಭಾರತದ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಭಾರಿ ದೊಡ್ಡ ಗಂಡಾತರ ಬಂದಿದೆ. ಅದನ್ನು ಕಾರ್ಪೋರೇಟ್ ಪರವಾದ ಹಿಂದುತ್ವವಾದಿ ಮೊದಿ ಸರ್ಕಾರ ಮಾಡುತ್ತಿದೆ ಎಂದರು.
ಇಂಡಿಯಾ ಅಂದರೆ ಇಂದಿರಾ ಎಂದು ಹೇಳುತ್ತಾ, ಸರ್ವಾಧಿಕಾರ ಹೇರಿದಾಗ ಅವರ ವಿರುದ್ಧ ತೀರ್ಪು ನೀಡಿತ್ತು. ವಾಜಪೇಯಿ ಕಾಲದಲ್ಲಿ ಕೋಮುವಾದ ಮತ್ತು ಉದಾರವಾದಾಗ ವೇಗವಾಗಿ ಹೇರಿದಾಗ ಅದನ್ನೂ ಜನರು ತಪ್ಪಿಸಿದ್ದಾರೆ. ಕಾಪೋರೇಟ್ ಹಿಂದುತ್ವ ಮೋದಿ ಸರ್ಕಾರವನ್ನು ಕಿತ್ತೊಗೆಯಲು ರೈತ ಮತ್ತು ಕಾರ್ಮಿಕ ಐಕ್ಯ ಹೋರಾಟ ನಿಂತಿದೆ. ರೈತರನ್ನು ಕಾರ್ಪೋರೇಟ್‌ಗಳು ಹೇಗೆ ಬೇಕಾದರೂ ಶೋಷಣೆ ಮಾಡಲು ಮೋದಿ ಸರ್ಕಾರ ಅವಕಾಶ ಮಾಡುಕೊಟ್ಟಿದೆ ಎಂದು ಕಿಡಿಕಾರಿದರು.
ಈ ಹಿಂದೆ ರೈತರ ಆತ್ಮಹತ್ಯೆ ನೀರಾವರಿ ಮತ್ತು ವಾಣಿಜ್ಯ ಬೆಳೆಗಳಿಗೆ ಮಾತ್ರ ನಡೆಯುತ್ತಿತ್ತು. ಇಂದು ಎಲ್ಲಾ ಬೆಳೆಗಳನ್ನು ಬೆಳೆಯುವ ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ. ಕೇರಳ ಮತ್ತು ತಮಿಳುನಾಡು ಸರ್ಕಾರ ಕೇಂದ್ರದ ವಿದುತ್‌ಚ್ಚಕ್ತಿ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಸರ್ಕಾರ ಕೂಡಾ ಹೀಗೆ ಹೇಳಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು. ಕಾರ್ಮಿಕರಿಂದ
ಇದನ್ನೂ ಓದಿ:ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್
ಎಐಟಿಯುಸಿ ಮುಖಂಡ ಅಮ್ಜದ್ ಮಾತನಾಡಿ, ಭಾರತಕ್ಕೆ ಬಂದ ಅಪಾಯಗಳನ್ನು ತಡೆಯಲು ಏನು ಮಾಡಬೇಕು ಎಂದು ಯೋಚನೆ ಮಾಡಲು ಈ ಹೋರಾಟ ಪ್ರಾರಂಭವಾಗಿದೆ. ರೈತರನ್ನು ದಿಕ್ಕು ತಪ್ಪಿಸಲು ಸರ್ಕಾರ ನೋಡಿತು. ನೂರಾರು ವರ್ಷಗಳ ಕಾಲ ಜಾರಿಗೆ ಬಂದ ಕಾರ್ಮಿಕ ಕಾನೂನನ್ನು ಇದು ತಿದ್ದುಪಡಿ ಮಾಡಿದೆ. ಇದು ಪ್ರಜಾಪೀಡಕ ಸರ್ಕಾರ, ವ್ಯಾಪಾರಿ ಧೋರಣೆಯಿಂದ ರಾಜಕೀಯ ಮಾಡುತ್ತಿದ್ದಾರೆ. ರೈತ ದಾರಿಗೆ ಮೊಳೆ ಹೊಡೆದ ಸರ್ಕಾರ. ಪ್ರಶ್ನೆ ಕೇಳಿದವರಿಗೆ ಬುಲ್ಡೋಜರ್ ಏರಿಸಿ ಅವರ ಮೇಲೆ ಯುಎಪಿಎ ಹಾಕಿ ಜೈಲಿಗೆ ಹಾಕುತ್ತಿದೆ. 2024 ರಕ್ಕೆ ಸುಳ್ಳಿನ ಸರದಾರರನ್ನು ಗದ್ದುಗೆಯಿಂದ ಇಳಿಸುವ ಪ್ರತಿಜ್ಞೆ ನಡೆಸಬೇಕಾಗಿದೆ ಎಂದರು.
ಮೋದಿಗೆ ಮತ್ತೊಂದು ಹೆಸರೇ ಸುಳ್ಳು. ರೈತ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡು ಇದು ಮುಂದುವರೆಯುತ್ತಿದೆ. ಇವರು ಮತ್ತೊಂದು ಬಾರಿ ಗೆದ್ದರೆ ದೇಶ ಉಳಿಯುವುದಿಲ್ಲ, ಯಾಕೆಂದರೆ ಇವರಿಗೆ ಅಂಬೇಡ್ಕರ್ ಬರೆದಿರುವ ಸಂವಿದಾನದ ಮೇಲೆ ಪ್ರೀತಿಯಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಕಾರ್ಮಿಕ ಮತ್ತು ರೈತ ವಿರೋಧಿ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ವಾಪಾಸು ಪಡೆಯಬೇಕಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರವಿಕುಮಾರ್ ಪುಣಚ್ಚ ಅವರು ಮಾತನಾಡಿ, ಭಾರತ ಎಂದು ಹೇಳಿದರೆ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ ಮೋದಿ ಸರ್ಕಾರ ಮಾಡುತ್ತಿದೆ. ಅಖಂಡ ಭಾರತ ಎಂದು ಹೇಳುತ್ತಾ, ರಾಜ್ಯಗಳಿಗೆ ಇರುವ ಅಧಿಕಾರವನ್ನು ಕಿತ್ತು ರಾಜ್ಯದ ಸಂಪತ್ತನ್ನು ಕಾರ್ಪೋರೇಟ್‌ಗಳಿಗೆ ಲೂಟಿ ಮಾಡುವ ಅವಕಾಶ ಮೋದಿ ಸರ್ಕಾರ ನೀಡುತ್ತಿದೆ. ನಾವು ಈ ದೇಶದ ಮಾಲಿಕರು, ಅವರು ನಮ್ಮ ಸೇವಕರಾಗಿದ್ದಾರೆ. ನೀಟ್ ಸೇರಿದಂತೆ ಹಲವಾರು ಕಾನೂನು ತಂದು ಇಲ್ಲಿನ ಯುವಕರಿಗೆ ಉದ್ಯೋಗ ನೀಡುವ ಅವಕಾಶ ಕೂಡಾ ಇಲ್ಲದಂತೆ ಈ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
52 ಸಾವಿರ ಕೋಟಿ ಇದ್ದ ದೇಶದ ಸಾಲವನ್ನು 1ಲಕ್ಷದ 36 ಸಾವಿರ ಕೋಟಿಗೆ ತಂದಿದ್ದಾರೆ. ತೆರಿಗೆಯನ್ನು ಮೂರು ಪಟ್ಟು ಹೆಚ್ಚಿಸಿ ಲೂಟಿ ಮಾಡುತ್ತಿದ್ದಾರೆ. ಅತೀ ವೃಷ್ಠಿ ಬಂದರೆ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಲಾಭ ಎಂಬ ಮಾತಿದೆ. ಆದರೆ ನರೇಂದ್ರ ಮೋದಿ ಸರ್ಕಾರ ರೋಗದಲ್ಲೂ ಲಾಭ ಮಾಡಿದೆ. 20 ಲಕ್ಷ ಕೋಟಿ ರೂ.ಗಳ ಪರಿಹಾರ ದೇಶದ ಯಾವುದೆ ಸಾಮಾನ್ಯ ಜನರಿಗೆ ತಲುಪಿದೆಯೆ? ಇವೆಲ್ಲವರನ್ನೂ ವಿರೋಧಿಸಿ ನಾವು ಸಂಘರ್ಷ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ದೇಶ ಸಂಕಷ್ಟಕ್ಕೆ ಬಂದಾಗ ತಕ್ಷಣ ಪರಿಹಾರ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ನಲ್ಲಿ ಇಟ್ಟ ಚಿನ್ನವನ್ನು ನರೇಂದ್ರ ಮೋದಿ ಸರ್ಕಾರ ಮಾರಾಟ ಮಾಡಿದೆ. ಪಿಎಂ ಕೇರ್ ಪಂಡ್ ಹೆಸರಿನಲ್ಲಿ ಲಕ್ಷಾಂತರ ಕೋಟಿ ಪಡೆದುಕೊಂಡರು. ಆದರೆ ಈ ಸಂಫೂರ್ಣ ಪಿಎಂ ಫಂಡ್ ಅನ್ನು ಮೋದಿ ಸರ್ಕಾರ ನುಂಗಿ ನೀಡು ಕುಡಿದಿದೆ. ಪಿಎಂ ಫಸಲ್ ಯೋಜನೆಯಲ್ಲೂ ನುಂಗಲು ಪ್ರಯತ್ನಿಸುತ್ತಿದ್ದಾರೆ. ನಾವು ಗೌರವಯುತವಾಗಿ ಜೀವನ ಮಾಡಲು 2024ರಲ್ಲಿ ಮೋದಿ ಸರ್ಕಾರವನ್ನು ಒದ್ದೋಡಿಸಬೇಕಾಗಿದೆ ಎಂದರು. ಕಾರ್ಮಿಕರಿಂದ
ವಿಡಿಯೋ ನೋಡಿ:ದುಡಿಯುವ ಜನರ ಮಹಾಧರಣಿ| ಸಂವಿಧಾನ ಸಂಕಲ್ಪ | ಸಂವಿಧಾನ ಪೀಠೀಕೆ ಬೋಧನೆ