ರಾಮನಗರ: ಸಾರ್ವಜನಿಕ ಬ್ಯಾಂಕ್ ಗಳ ಖಾಸಗಿ ಕರಣವನ್ನು ವಿರೋಧಿಸಿ ಯುಎಫ್‌ಬಿಯು ನೇತೃತ್ವದಲ್ಲಿ ನಗರದಲ್ಲಿ ಬ್ಯಾಂಕ್ ನೌಕರರು ಧರಣಿ ಹಮ್ಮಿಕೊಂಡಿದ್ದರು.
ಪ್ರತಿಭಟಣಕಾರರನ್ನು ಉದ್ದೇಶಿಸಿ ಯುಬಿಎಫ್‌ಐ ಜಂಟಿ ಕಾರ್ಯದರ್ಶಿ ನಾಗರಾಜ್ ಶಾನುಭೋಗ್ ಮಾತನಾಡಿ, ಸಾರ್ವಜನಿಕರ ಆಸ್ತಿಯಾದ ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಲು ಹೊರಟಿದೆ. ಇದು ಸರಿಯಾದ ಕ್ರಮವಲ್ಲ, ಕೇಂದ್ರ ಸರ್ಕಾರದ ಈ ಜನವಿರೋಧಿ ಬ್ಯಾಂಕಿಂಗ್ ಸುಧಾರಣೆಗಳ ವಿರುದ್ಧ ಇದೇ ತಿಂಗಳ 15 ಮತ್ತು 16 ರಂದು ದೇಶವ್ಯಾಪಿ ಬ್ಯಾಂಕ್ ಬಂದ್ ಯಶಸ್ವಿ ಮಾಡಲು ಕಾರ್ಯಪ್ರವೃತ್ತರಾಗಲು ಕರೆ ನೀಡಿದರು. ಇದೊಂದು ದೇಶಪ್ರೇಮಿ ಹೋರಾಟ, ಜನಪರ ಹೋರಾಟ ಆದ್ದರಿಂದ ಇದರ ಉದ್ದೇಶವನ್ನು ಗ್ರಾಹಕರಿಗೆ, ಜನಸಾಮಾನ್ಯರಿಗೆ ಮುಟ್ಟಿಸಿ ಅವರ ಬೆಂಬಲ ಪಡೆಯಲು ಕರೆ ನೀಡಿದರು.
ಈ ಪ್ರತಿಭಟನಾ ಧರಣಿಯಲ್ಲಿ ಅಖಿಲ ಭಾರತ ಬ್ಯಾಂಕ್ ಆಫೀಸರ್ಸ್ ಅಸೋಶಿಯೇಷನ್ ಪರವಾಗಿ ಸುರೇಶ್ ಹಾಗೂ ಬಿ ಎಮ್ ಮಾಧವ ಬಿಇಎಫ್‌ಐ ಪರವಾಗಿ, ಸಿಬಿಎಸ್‌ಯು ಪರವಾಗಿ ವೆಂಕಟೇಶ್ ಮಾತನಾಡಿದರು.