ಸಾಲಕ್ಕಾಗಿ ನಾಟಿ ಕೋಳಿ ಲಂಚ: ಬರೋಬ್ಬರಿ 39,000 ರೂಪಾಯಿ ಮೌಲ್ಯದ ನಾಟಿ ಕೋಳಿ ತಿಂದು ತೇಗಿದ ಬ್ಯಾಂಕ್‌ ಮಾನೇಜರ್

ರಾಯ್‌ಪುರ್: ಚತ್ತೀಸಘಡದ ಬಿಲಾಸಪುರ ಜಿಲ್ಲೆಯ ಮಸ್ತುರಿಯಲ್ಲಿ ರೈತನೊಬ್ಬನಿಗೆ ಬ್ಯಾಂಕ್‌ ಮಾನೇಜರ್ರೊಬ್ಬ 12 ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 39,000 ರೂಪಾಯಿ ಮೌಲ್ಯದ ನಾಟಿ ಕೋಳಿಯನ್ನು ತಿಂದು ತೇಗಿರುವ ಘಟನೆ ನಡೆದಿದೆ. ನಾಟಿ ಕೋಳಿ

ರೈತನೊಬ್ಬನಿಗೆ 12 ಲಕ್ಷ ರೂಪಾಯಿ ಬೇಕಿತ್ತು.ರೈತ ಓದಿಲ್ಲ, ಬ್ಯಾಂಕ್ ಪ್ರಕ್ರಿಯೆ, ಸಾಲಕ್ಕೆ ಅರ್ಜಿ ಸಲ್ಲಿಸುವ ಅರಿವಿಲ್ಲ. ಆದರೂ ಬ್ಯಾಂಕ್‌ಗೆ ತೆರಳಿ ಮ್ಯಾನೇಜರ್ ಬಳಿ ಸಾಲಕ್ಕೆ ಮನವಿ ಮಾಡಿದ್ದಾನೆ. ಇತ್ತ ಮ್ಯಾನೇಜರ್ ಸಾಲ ಕೊಡಿಸುವ ನೆಪದಲ್ಲಿ ಪ್ರತಿ ಶನಿವಾರ ರೈತ ಸಾಕಿದ್ದ ನಾಟಿ ಕೋಳಿಗೆ ಬೇಡಿಕೆ ಇಟ್ಟಿದ್ದಾನೆ. ಹೀಗೆ ಬರೋಬ್ಬರಿ 39,000 ರೂಪಾಯಿ ಮೌಲ್ಯದ ನಾಟಿ ಕೋಳಿ ತಿಂದರೂ ರೈತನಿಗೆ ಸಾಲ ಮಾತ್ರ ಸಿಗಲೇ ಇಲ್ಲ. ಈ ಘಟನೆ ಚತ್ತೀಸಘಡದ ಬಿಲಾಸಪುರ ಜಿಲ್ಲೆಯ ಮಸ್ತುರಿಯಲ್ಲಿ ನಡೆದಿದೆ. ನಾಟಿ ಕೋಳಿ

ರೂಪ್‌ಚಾಂದ್ ಮನಹ‌ ಅನ್ನೋ ರೈತನ ಕೃಷಿ ಚಟುವಟಿಕೆಗೆ ಸಾಲ ಬೇಕಿತ್ತು. 12 ಲಕ್ಷ ರೂಪಾಯಿ ಸಾಲದ ಅವಶ್ಯಕತೆ ಇತ್ತು. ರೂಪ್‌ಚಾಂದ್ ಮನಹ‌ ನಾಟಿ ಕೋಳಿ ಸಾಕಾಣಿಕೆಯನ್ನೂ ನಡೆಸುತ್ತಿದ್ದ. ಇದೇ ಸಾಲದಲ್ಲಿ ನಾಟಿ ಕೋಳಿ ಸಾಕಾಣಿಕೆ ವಿಸ್ತರಣೆ ಮಾಡಲು ರೈತ ನಿರ್ಧರಿಸಿದ್ದು. ಅರ್ಜಿ ಸಲ್ಲಿಕೆ ಕುರಿತು ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಮಸ್ತುರಿಯ ಸ್ಟೇಟ್ ಆಫ್ ಇಂಡಿಯಾ ಶಾಖೆಗೆ ತೆರಳಿ ಸಾಲಕ್ಕೆ ಮನವಿ ಮಾಡಿದ್ದಾರೆ. ರೈತ ಅವಿದ್ಯಾವಂತ, ಇದನ್ನೇ ಬಳಸಿಕೊಂಡ ಬ್ಯಾಂಕ್ ಮ್ಯಾನೇಜರ್ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ನಾಟಿ ಕೋಳಿ

ಇದನ್ನೂ ಓದಿ : ಯುವತಿಗೆ ಡ್ರಗ್ಸ್‌ ನೀಡಿ ಅತ್ಯಾಚಾರ, ಜಾತಿನಿಂದನೆ ಆರೋಪ; ಆಂಧ್ರದ ಯುವಕನ ವಿರುದ್ಧ ಪ್ರಕರಣ ದಾಖಲು  ನಾಟಿ ಕೋಳಿ

ಯಾವ ಕಾರಣಕ್ಕಾಗಿ ಸಾಲ ಪಡೆಯುವ ಮಾಹಿತಿ ಕೇಳಿದ್ದಾನೆ. ಬಳಿಕ ಇತರ ದಾಖಲೆ ತರಲು ಸೂಚಿಸಿದ್ದಾನೆ. ಬ್ಯಾಂಕ್‌ ಮ್ಯಾನೇಜರ್ ಹೇಳಿದ ದಾಖಲೆ ಪತ್ರಗಳನ್ನು ಒದಗಿಸಿದ ರೈತನಿಗೆ ಸಾಲ ಕೊಡಿಸುವುದಾಗಿ ಹೇಳಿದ್ದಾನೆ. ಬೇರೆ ಮ್ಯಾನೇಜರ್ ಸಾಲ ಕೊಡಿಸಲು ಹಣ ಕೇಳುತ್ತಾರೆ. ನಾನು ಹಾಗಲ್ಲ, ನನಗೆ ಏನೂ ಬೇಡ. ಸಾಲ ಕೊಡಿಸುತ್ತೇನೆ ಎಂದು ಹೇಳಿ ರೈತನ ವಿಶ್ವಾಸ ಗಳಿಸಿದ್ದಾನೆ. ಇತ್ತ ರೈತ ಕೂಡ ಬ್ಯಾಂಕ್‌ ಮ್ಯಾನೇಜರ್‌ಗೆ ಭರವಸೆ ನೀಡಿದ್ದಾರೆ. ಇನ್ನು ಮನೆ ಹಾಗೂ ಜಮೀನು ಭೇಟಿ ಮಾಡಬೇಕು ಎಂದು ಬ್ಯಾಂಕ್ ಮಾನೇಜರ್ ರೈತನ ಮನೆಗೆ ಆಗಮಿಸಿದ್ದಾನೆ.

ಸಾಲ ಕೊಡಿಸುತ್ತೇನೆ, ಆದರೆ ನಾಟಿ ಕೋಳಿಯೊಂದು ಕೊಡಿ ಎಂದು ವಿನಂತಿಸಿದ್ದಾನೆ. ಅರೆ 12 ಲಕ್ಷ ರೂಪಾಯಿ ಸಾಲ ಕೊಡಿಸುವ ಮ್ಯಾನೇಜರ್ ಒಂದು ನಾಟಿ ಕೋಳಿ ಕೇಳಿದರೆ ತಪ್ಪೇನು? ಎಂದು ನಾಟಿ ಕೋಳಿಯನ್ನು ಕೊಟ್ಟಿದ್ದಾನೆ. ಬಳಿಕ ಪ್ರತಿ ಶನಿವಾರ ನಾಟಿ ಕೋಳಿಗೆ ಬೇಡಿಕೆ ಇಟ್ಟಿದ್ದಾನೆ. ಇಲ್ಲ ಎಂದರೆ ಸಾಲ ನಿರಾಕರಿಸಿದರೆ ಗತಿ ಏನು ಎಂದು ರೈತ ಆತಂಕಪಟ್ಟಿದ್ದಾನೆ. ಹೀಗಾಗಿ ಪ್ರತಿ ಶನಿವಾರ ಒಂದೆರೆಡು ಕೋಳಿ ಬ್ಯಾಂಕ್‌ ಮ್ಯಾನೇಜರ್ ಹೊಟ್ಟೆ ಸೇರಿದೆ. ಮೋಸ

ಬಳಿಕ ಸಾಲದ ಚಾರ್ಜ್, ಪ್ರೊಸೆಸಿಂಗ್ ಫೀ ಸೇರದಂತೆ ಹಲವು ಕಾರಣಗಳನ್ನು ನೀಡಿ ಸಾವಿರಾರು ರೂಪಾಯಿಯನ್ನು ಲಂಚದ ರೂಪದಲ್ಲಿ ಪಡೆದಿದ್ದಾನೆ. ಇತ್ತ ರೈತ ಕಂಗಲಾಗಿದ್ದಾನೆ. ಕಾರಣ 12 ಲಕ್ಷ ರೂಪಾಯಿಗೆ ಶೇಕಡಾ 10 ರಷ್ಟು ಲಂಚ ನೀಡಿದ್ದಾನೆ. ಇಷ್ಟೇ ಅಲ್ಲ ಪ್ರತಿ ಶನಿವಾರ ಒಂದೆರೆಡು ಕೋಳಿ ಎಂದು ಬರೋಬ್ಬರಿ 39,000 ರೂಪಾಯಿ ಮೌಲ್ಯದ ನಾಟಿ ಕೋಳಿಯನ್ನು ತಿಂದು ತೇಗಿದ್ದಾನೆ.

ಇಷ್ಟಾದರೂ ಸಾಲ ಮಾತ್ರ ಸಿಗಲಿಲ್ಲ. ಮ್ಯಾನೇಜರ್ ತನಗೆ ಸಾಲ ನೀಡುವುದಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ರೈತ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಲು ತೆರಳಿದ್ದಾನೆ. ಆದರೆ ಜಿಲ್ಲಾಧಿಕಾರಿ ಭೇಟಿಗೆ ಯಾರೂ ಅವಕಾಶ ನೀಡಲಿಲ್ಲ. ಹೀಗಾಗಿ ಉಪವಾಸ ಹೋರಾಟ ಆರಂಭಿಸಿದ ರೈತ, ನನ್ನ ಕೋಳಿ ದುಡ್ಡು, ಲಂಚ ವಸೂಲಿ ಮಾಡಿದ ದುಡ್ಡು ಎಲ್ಲವನ್ನೂ ವಾಪಾಸ್ ನಡುವಂತೆ ಪಟ್ಟು ಹಿಡಿದಿದ್ದಾನೆ.

ಇದನ್ನೂ ನೋಡಿ: ಕಿರು ಸಾಲಗಳಿಂದ ಮುಕ್ತಿ ಹೇಗೆ? ಹೋರಾಟಗಾರ ಬಿಎಂ ಭಟ್‌ ಹೇಳುವುದೇನು? Janashakthi Media ನಾಟಿ ಕೋಳಿ

Donate Janashakthi Media

Leave a Reply

Your email address will not be published. Required fields are marked *