ಬಾಂಗ್ಲಾದೇಶದಲ್ಲಿ ನಿರಂಕುಶ , ಭ್ರಷ್ಟ ಆಳ್ವಿಕೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸಾಮೂಹಿಕ ಬಂಡಾಯ

ನವದೆಹಲಿ :  ನಿರಂಕುಶ ಮತ್ತು ಭ್ರಷ್ಟ ಆಳ್ವಿಕೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದ ಸಾಮೂಹಿಕ ಬಂಡಾಯದಲ್ಲಿ  ಬಾಂಗ್ಲಾದೇಶದ ಪ್ರಧಾನ ಮಂತ್ರಿ  ಶೇಖ್ ಹಸೀನಾ ಮತ್ತು ಅವರ ಸರ್ಕಾರವನ್ನು ಪದಚ್ಯುತಗೊಳಿಸಲಾಗಿದೆ. ಸಾಮೂಹಿಕ ಪ್ರತಿಭಟನೆಗಳ ಕ್ರೂರ ದಮನದಿಂದಾಗಿ 300 ಕ್ಕೂ ಹೆಚ್ಚು ಜೀವನಷ್ಟವಾಗಿದೆ ಎಂದು ಪೊಲಿಟ್ ಬ್ಯೂರೋ ಆಳವಾದ ದುಃಖವನ್ನು ವ್ಯಕ್ತಪಡಿಸಿದೆ.

ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಬಾಹ್ಯ ಶಕ್ತಿಗಳ ಬೆಂಬಲದೊಂದಿಗೆ ಲಾಭ ಪಡೆಯಲು ಬಯಸುವ ಬಲಪಂಥೀಯ ಮತ್ತು ಮೂಲಭೂತವಾದಿ ಶಕ್ತಿಗಳ ಹುನ್ನಾರಗಳನ್ನು ವಿಫಲಗೊಳಿಸಲು ಇದು ಅವಶ್ಯಕವಾಗಿದೆ ಎಂದು ಅದು ಹೇಳಿದೆ.

ನವದೆಹಲಿಯಲ್ಲಿ ನಡೆದ ಸಿಪಿಐ(ಎಂ) ನ ಪೊಲಿಟ್‍ಬ್ಯುರೊದ ಾಗಸ್ಟ್‍6ರಂದುಸಭೆ ಸೇರಿದ್ದು, ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ.

ಪೊಲಿಟ್‍ಬ್ಯುರೊ  ಹೇಳಿಕೆಯ ಇತರ ಅಂಶಗಳು ಹೀಗಿವೆ:

ಪರಿಶಿಷ್ಟ ಜಾತಿ ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು

ಪೊಲಿಟ್‍ಬ್ಯುರೊ ಸುಸ್ಪಷ್ಟ  ಮಾರ್ಗಸೂಚಿಗಳ ಆಧಾರದಲ್ಲಿ ಪರಿಶಿಷ್ಟ ಜಾತಿಗಳ  ಉಪ-ವರ್ಗೀಕರಣದ ಕುರಿತ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಪೀಠದ 6-1 ಬಹುಮತದ ತೀರ್ಪನ್ನು ಬೆಂಬಲಿಸಿದೆ. ಆದರೆ ಅದೇ ಸಮಯದಲ್ಲಿ, . ತೀರ್ಪಿನ ಕಾರ್ಯಕಾರಿಯ ಭಾಗವಾಗಿಲ್ಲದಿದ್ದರೂ, ಏಳು ನ್ಯಾಯಾಧೀಶರಲ್ಲಿ ನಾಲ್ವರು  ಕೆನೆ ಪದರವನ್ನು ಪರಿಚಯಿಸುವ ಪರವಾಗಿ ಅಭಿಪ್ರಾಯಪಟ್ಟಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಮೀಸಲಾತಿಯೊಳಗೆ  ಕೆನೆ ಪದರವನ್ನು ಪರಿಚಯಿಸುವುದನ್ನು ಪಕ್ಷ ನಿರಂತರವಾಗಿ ವಿರೋಧಿಸಿಕೊಂಡು ಬಂದಿದ್ದು ಅದನ್ನು ಈ ಸಂದರ್ಭದಲ್ಲಿಯೂ ಪುನರುಚ್ಚರಿಸುವುದಾಗಿ ಪೊಲಿಟ್‍ಬ್ಯುರೊ ಹೇಳಿದೆ

ಕೋಮು ಧ್ರುವೀಕರಣದ ಆಕ್ರಮಣಕಾರಿ ಅನುಸರಣೆ

ಭಾರತದ ಜನರಿಂದ ಸಂಪೂರ್ಣ ಬಹುಮತ ನಿರಾಕರಿಸಲ್ಪಟ್ಟ ಮೋದಿ ಮತ್ತು ಬಿಜೆಪಿ ಇಂದು ಎನ್‌ಡಿಎ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಈ ವಾಸ್ತವದ ಹೊರತಾಗಿಯೂ, ಮೋದಿ ಏನೂ ಬದಲಾಗಿಲ್ಲ ಎಂಬಂತೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದಾರೆ ಮತ್ತು ಅದು ‘ಎಂದಿನ ವ್ಯವಹಾರ’ವಾಗಿದೆ. ಬಿಜೆಪಿಯು ಬಹುಮತವನ್ನು ನಿಯಂತ್ರಿಸುವ ರಾಜ್ಯ ವಿಧಾನಸಭೆಗಳಲ್ಲಿ ಅಲ್ಪಸಂಖ್ಯಾತರನ್ನು ನಿರ್ಲಜ್ಜವಾಗಿ ಗುರಿಯಾಗಿಸುವ ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದೆ, ಈ ಮೂಲಕ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರೆಯ ಮಾರ್ಗದಲ್ಲಿ ಅಂಗಡಿಕಾರರು ಮತ್ತು ಬೀದಿ ವ್ಯಾಪಾರಿಗಳು ತಮ್ಮ ನಾಮಫಲಕವನ್ನು ಪ್ರದರ್ಶಿಸಬೇಕು ಎಂದು ಘೋಷಿಸಿದ್ದವು. ಇದು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಉದ್ದೇಶ ಹೊಂದಿತ್ತು. ಅದೃಷ್ಟವಶಾತ್ ಸುಪ್ರೀಂ ಕೋರ್ಟ್ ಈ ಆದೇಶಗಳ ಅನುಷ್ಠಾನಕ್ಕೆ ತಡೆ ನೀಡಿದೆ.

ಉತ್ತರ ಪ್ರದೇಶ ಸರ್ಕಾರವು ‘ ಕಾನೂನುಬಾಹಿರ ಧರ್ಮ ಪರಿವರ್ತನೆ (ತಿದ್ದುಪಡಿ) ಮಸೂದೆ, 2024’ ಅನ್ನು ಸ್ಪಷ್ಟವಾಗಿ ಅಂತರ್-ಸಮುದಾಯ ವಿವಾಹಗಳನ್ನು ಗುರಿಯಾಗಿಸಿಕೊಂಡು ತಂದಿದೆ. ಇದರಲ್ಲಿ ಹತ್ತು ವರ್ಷಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಹೆಚ್ಚಿಸಿದೆ.

ಅಸ್ಸಾಂನಲ್ಲಿ, ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಭೂಮಿ ಮಾರಾಟವನ್ನು ತಡೆಯಲು ಇದನ್ನು ‘ಲ್ಯಾಂಡ್ ಜೆಹಾದ್’ ಎಂದು ಕರೆಯುವ ಕಾನೂನನ್ನು ಪರಿಗಣಿಸಲಾಗುತ್ತಿದೆ. ಇಂತಹ ವ್ಯವಹಾರಗಳು ಮುಖ್ಯಮಂತ್ರಿಗಳ ಅನುಮತಿಯ ಮೇರೆಗೆ ನಡೆಯುತ್ತಿವೆ! ಉತ್ತರಪ್ರದೇಶ  ಮಾದರಿಯಲ್ಲಿ ಲವ್ ಜೆಹಾದ್ ಎಂದು ಕರೆಯಲ್ಪಡುವ ಅಂತರ್ ಸಮುದಾಯ ವಿವಾಹಗಳಿಗೆ ಶಿಕ್ಷೆಯಾಗಿ ಜೀವಾವಧಿ ಶಿಕ್ಷೆಯನ್ನು ಪರಿಚಯಿಸಲು ಅವರು ಪರಿಶೀಲಿಸುತ್ತಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ನೇತೃತ್ವದ ಸರ್ಕಾರವು ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆಯನ್ನು ಪರಿಚಯಿಸಿತು, ಇದು ಯುಎಪಿಎಗಿಂತ ಹೆಚ್ಚು ಕರಾಳವಾಗಿ  ನಗರ ನಕ್ಸಲಿಸಂ ಅನ್ನು ನಿಗ್ರಹಿಸುವ ಹೆಸರಿನಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಅಪರಾಧೀಕರಿಸಲು ಪ್ರಯತ್ನಿಸುತ್ತದೆ.

ವಯನಾಡ್ ದುರಂತ

ಕೇರಳದಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಜನರು ಸವಾಲುಗಳನ್ನು ಜಯಿಸಲು ಒಂದೇ ವ್ಯಕ್ತಿಯಂತೆ ಒಕ್ಕೊರಲಿನಿಂದ ಎದ್ದು ನಿಂತಿದ್ದಾರೆ ಎಂಬ ಸಂಗತಿಯನ್ನು ಪೊಲಿಟ್ ಬ್ಯೂರೋ ಗಮನಿಸಿದೆ. ಜನರ ಪುನರ್ವಸತಿಗೆ ಮತ್ತು ಪರಿಹಾರ ಒದಗಿಸಲು ಎಲ್ ಡಿಎಫ್ ಸರ್ಕಾರ ನಡೆಸುತ್ತಿರುವ ವ್ಯಾಪಕ ಪ್ರಯತ್ನಗಳ ವರದಿಯನ್ನು ಪಿಬಿ ಆಲಿಸಿತು. ಜನರು ಮತ್ತು ಸರ್ಕಾರದ   ಪ್ರಯತ್ನಗಳನ್ನು ಪೊಲಿಟ್‍ ಬ್ಯುರೊ ಶ್ಲಾಘಿಸಿತು.

ಕೇರಳ ಎಲ್‌ಡಿಎಫ್ ಸರ್ಕಾರದ ವಿರುದ್ಧ ಒಕ್ಕೂಟ ಗೃಹ ಸಚಿವರು ಹರಡಿದ ತಪ್ಪು ಮಾಹಿತಿಯ ಪ್ರಚಾರವನ್ನು ಪೊಲಿಟ್ ಬ್ಯೂರೋ ಖಂಡಿಸಿದೆ. ಅವರ  ದಾವೆಗಳು ತಪ್ಪು ಮತ್ತು ಅಸತ್ಯ ಎಂದು ತೋರಿಸಲ್ಪಟ್ಟಿದೆ.

ಪಕ್ಷವು ಪ್ರತ್ಯೇಕ ಬ್ಯಾಂಕ್ ಖಾತೆಯೊಂದಿಗೆ ಸ್ಥಾಪಿಸಿರುವ ವಯನಾಡ್ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡುವಂತೆ ಪೊಲಿಟ್‍ಬ್ಯುರೊ ಜನರಿಗೆ ಮನವಿ ಮಾಡಿದೆ.

ಸಿಪಿಐ(ಎಂ) ನ 24 ನೇ ಮಹಾಧಿವೇಶನ ವನ್ನು ತಮಿಳುನಾಡಿನ ಮಧುರೈನಲ್ಲಿ 2025 ರ ಏಪ್ರಿಲ್ 2 ರಿಂದ 6 ರವರೆಗೆ ನಡೆಸಲು ಪೊಲಿಟ್ ಬ್ಯೂರೋ ಅನುಮೋದನೆ ನೀಡಿದೆ.

 

Donate Janashakthi Media

Leave a Reply

Your email address will not be published. Required fields are marked *