ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ದರ ಏರಿಕೆ; ಏಪ್ರಿಲ್‌ 1 ರಿಂದ ಅನ್ವಯ

ಮೈಸೂರು : ಬೆಂಗಳೂರುಮೈಸೂರು ಎಕ್ಸ್ಪ್ರೆಸ್ವೇ ಟೋಲ್ದರ ಏರಿಕೆ ಏಪ್ರಿಲ್‌ 1 ರಿಂದ ಅನ್ವಯವಾಗುತ್ತಿದ್ದುವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಎಕ್ಸ್ಪ್ರೆಸ್ವೇ

ಹೆದ್ದಾರಿಯ ಲೋಕಾರ್ಪಣೆಯಾಗಿ ಒಂದು ವರ್ಷದ ಅವಧಿಯಲ್ಲಿ ಈಗಾಗಲೇ ಎರಡು ಬಾರಿ ಟೋಲ್‌ ದರ ಹೆಚ್ಚಳವಾಗಿದ್ದು, ಮೂರನೇ ದರ ನಿಗದಿಯಾಗಿದೆ. 2023ರ ಮಾಚ್‌ ನಲ್ಲಿ ಟೋಲ್‌ ಸಂಗ್ರಹ ಆರಂಭವಾಗಿತ್ತು. ನಂತರ ಜೂನ್‌ನಲ್ಲಿಶೇ.22 ರಷ್ಟು ಟೋಲ್‌ ದರ ಏರಿಕೆಯಾಗಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್‌ ದರ ಹೆಚ್ಚಳ ಮಾಡಲಾಗಿದೆ. ಎಕ್ಸ್‌ಪ್ರೆಸ್‌ ವೇ

ಶುಲ್ಕ ಹೆಚ್ಚಳದ ಬಗ್ಗೆ ಟೋಲ್‌ ಸಿಬ್ಬಂದಿ ವಾಹನ ಸವಾರರಿಗೆ ಕರಪತ್ರ ಹಂಚುತ್ತಿದ್ದಾರೆ. ದರಪಟ್ಟಿ ಫಲಕ ತಿದ್ದುಪಡಿ ಮಾಡಲಾಗುತ್ತಿದೆ. ನೂತನ ಪರಿಷ್ಕರಣೆಯಲ್ಲಿ ಶೇ.3 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ.

ಇದನ್ನು ಓದಿ : ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಅರ್ನಬ್ ಗೋಸ್ವಾಮಿ, ಆರ್.‌ಕನ್ನಡ ಸಂಪಾದಕರ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ರಾಜ್ಯದ ಎನ್‌ಎಚ್‌275ರ ಕಿ.ಮೀ 23.900 ಕಣಿಮಿಣಿಕಿ ಗ್ರಾಮ ಮತ್ತು ಬಿಡದಿ ಬಳಿಯ ಶೇಷಗಿರಿಹಳ್ಳಿ ಬಳಿಯ ಟೋಲ್‌ ಸಂಗ್ರಹ ಕೇಂದ್ರದ ಶುಲ್ಕ ವಿವರ ಇಲ್ಲಿದೆ.

ಏಕಮುಖ ಸಂಚಾರ ಕಾರು/ವ್ಯಾನ್‌/ಜೀಪ್‌ಗಳಿಗೆ ಶುಲ್ಕ 155 ರೂ.ನಿಂದ 160ಕ್ಕೆ, ಲಘು ವಾಣಿಜ್ಯ ಬಳಕೆ ವಾಹನಗಳಿಗೆ 250ರಿಂದ 260ಕ್ಕೆ, ಟ್ರಕ್‌/ ಬಸ್‌/ಎರಡು ಆಕ್ಸೆಲ್‌ ವಾಹನಗಳಿಗೆ ಶುಲ್ಕ 525ರಿಂದ 540 ರೂ.ಗೆ ಏರಿಕೆಯಾಗಿದೆ. ತ್ರಿ ಆಕ್ಸೆಲ್‌ ವಾಣಿಜ್ಯ ವಾಹನಗಳಿಗೆ 575ರಿಂದ ರೂ.590 ರೂ.ಗೆ, ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅಥ್‌ರ್‍ ಮೂವರ್ಸ್‌/4-6 ಆಕ್ಸೆಲ್‌ ವಾಹನಗಳಿಗೆ 825 ರಿಂದ 840 ರೂ.ಗೆ ಹೆಚ್ಚಳವಾಗಿದೆ.

ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್‌ ವಸೂಲಿಗಿರುವ ಆಸಕ್ತಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಇಲ್ಲ. ಅನೇಕ ಬಾರಿ ಹೋರಾಟ ಮಾಡಿದರೂ ಹೆದ್ದಾರಿಯಲ್ಲಿಇನ್ನೂ ಶೌಚಾಲಯಗಳನ್ನು ನಿರ್ಮಿಸಿಲ್ಲ. ಸವೀರ್‍ಸ್‌ ರಸ್ತೆಗಳು ಅಪೂರ್ಣವಾಗಿವೆ. ಹೆದ್ದಾರಿಯಲ್ಲಿಪ್ರಯಾಣಿಕರಿಗೆ ಎಲ್ಲಾಸೌಕರ್ಯ ನೀಡಿದ ಮೇಲೆ ಟೋಲ್‌ ಹೆಚ್ಚಳ ಮಾಡಲಿ ಎನ್ನುತ್ತಾರೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಗಾಣಕಲ್‌ ನಟರಾಜು.

 

ಇದನ್ನು ನೋಡಿ : ಭೂಮಿಯ ಹಕ್ಕು ರೈತ, ಕೂಲಿಕಾರರದ್ದು, ಕಾರ್ಪೊರೇಟ್‌ ಬಕಾಸುರರದಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *