ಬಂಗಾಳ ರೈತರ ಮೂರು ದಿನಗಳ ಬೃಹತ್ ಮಹಾಪಡಾವ್ ಕೋಲ್ಕತ್ತಾದಲ್ಲಿ ಉದ್ಘಾಟನೆ

ಕೋಲ್ಕತ್ತಾ ಜ 21 : ಎಐಕೆಎಸ್‌ಸಿಸಿ ನಾಯಕತ್ವದಲ್ಲಿ ಬಂಗಾಳದ ರೈತರ ಮೂರು ದಿನಗಳ ಬೃಹತ್ ಮಹಾಪಡಾವ್ ಜನವರಿ 20 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಯಿತು.  ಇದು ಜನವರಿ 22 ರಂದು ಮುಕ್ತಾಯಗೊಳ್ಳಲಿದೆ. ಸಾವಿರಾರು ರೈತರು ಮತ್ತು ಕೃಷಿ ಕಾರ್ಮಿಕರು ಭಾಗವಹಿಸುತ್ತಿದ್ದಾರೆ.

ಕೊಲ್ಕತ್ತಾದ ರಾಣಿ ರಶ್ಮೋನಿ ರಸ್ತೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಡಾ.ಅಶೋಕ್ ಧವಾಲೆ, ಜೈ ಕಿಸಾನ್ ಆಂದೋಲನ್ ನಾಯಕ ಯೋಗೇಂದ್ರ ಯಾದವ್, ಎಐಕೆಎಸ್‌ಸಿಸಿ ಬಂಗಾಳ ಸಂಚಾಲಕ ಅಮಲ್ ಹಲ್ದಾರ್, ಎಐಕೆಎಸ್‌ಸಿಸಿ ಬಂಗಾಳ ಕಾರ್ಯದರ್ಶಿ ಕಾರ್ತಿಕ್ ಪಾಲ್, ಎಐಕೆಎಸ್‌ಸಿಸಿ ಕಾರ್ಯದರ್ಶಿ ಅವಿಕ್ ಸಹಾ ಮತ್ತು ಇತರ ಅನೇಕ ಮುಖಂಡರು ಮಾತನಾಡಿದರು. ಮಾತನಾಡಿದ ಎಲ್ಲಾ ಭಾಷಣಕಾರರು ಬಿಜೆಪಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಪ್ರತೀಕಾರದ ಬಗ್ಗೆ ತೀವ್ರವಾಗಿ ಟೀಕಿಸಿದರು. ಅಂಬಾನಿ ಮತ್ತು ಅದಾನಿ ನೇತೃತ್ವದ ಕಾರ್ಪೊರೇಟ್ ಲಾಬಿಯ ಮುಂದೆ ಅದು ಶರಣಾಗಿದೆ, ಇದು ಈ ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನ ವಿರೋಧಿ ಕೃಷಿ ಕಾನೂನುಗಳನ್ನು ತರಲು ಕಾರಣವಾಯಿತು ಮತ್ತು  ಕಾರ್ಮಿಕ ಸಂಹಿತೆಗಳನ್ನು ಹಾಗೂ  ಟಿಎಂಸಿ ರಾಜ್ಯ ಸರ್ಕಾರದ ಅವಕಾಶವಾದ ಮತ್ತು ರೈತ ವಿರೋಧಿ ನೀತಿಗಳನ್ನೂ ತೀವ್ರವಾಗಿ ವಿರೋಧಿಸಲಾಯಿತು.

ಜನವರಿ 26 ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಕಿಸಾನ್ ಪೆರೇಡ್‌ಗೆ ಬೆಂಬಲವಾಗಿ ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಟ್ರಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *