ಧಾರಾಕಾರ ಮಳೆ; 25 ಕೋಟಿ ರೂಪಾಯಿ ಮೌಲ್ಯದಷ್ಟು ಬಾಳೆ ಬೆಳೆ ನಾಶ

ಚಾಮರಾಜನಗರ: ಧಾರಾಕಾರ ಮಳೆ ಹಾಗೂ ವಿಪರೀತ ಗಾಳಿಯ ಪರಿಣಾಮ ಚಾಮರಾಜನಗರದಲ್ಲಿ 25 ಕೋಟಿ ರೂಪಾಯಿ ಮೌಲ್ಯದಷ್ಟು ಬಾಳೆ ಬೆಳೆ ನಾಶವಾಗಿದ್ದು ರೈತರು ಕಂಗಾಲಾಗುವಾಂತಾಗಿದೆ.

ಬೆಳೆ ನಾಶದಿಂದಾಗಿ  900 ರೈತರು ನಷ್ಟ ಎದುರಿಸಿದ್ದು, 1,250 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಉತ್ತಮ ಬೆಲೆಯನ್ನು ನಿರೀಕ್ಷಿಸುತ್ತಿದ್ದ ರೈತರು ಮುಂದಿನ ವಾರ ಬೆಳೆ ಕಟಾವಿಗೆ ನಿರ್ಧರಿಸಿದ್ದರು. ಈಗ ತೀವ್ರ ಮಳೆಯ ಪರಿಣಾಮ ರೈತರ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ಈ ಮಳೆಯ ಪರಿಣಾಮದಿಂದಾಗಿ ಬಾಳೆ ಬೆಳೆ ಮಾತ್ರವಲ್ಲದೇ ಪಪ್ಪಾಯ ಬೆಳೆಯೂ ನೆಲಕಚ್ಚಿದೆ.

ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಅಂದರೆ 700 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಚಾಮರಾಜನಗರ, ಕೊಳ್ಳೆಗಾಲ, ಯಳಂದೂರು, ಹನೂರು ತಾಲೂಕುಗಳಲ್ಲಿಯೂ ಬೆಳೆ ಹಾನಿಯಾಗಿದೆ.

ಇದನ್ನು ಓದಿ : ಭಾರತದ ಒಂದು ನಿಷ್ಕ್ರಿಯ ಚುನಾವಣಾ ಆಯೋಗ

ತೋಟಗಾರಿಕಾ ಇಲಾಖೆ ಬೆಳೆ ನಷ್ಟದ ಬಗ್ಗೆ ಪ್ರಾಥಮಿಕ ಹಂತದ ಮಾಹಿತಿಯನ್ನು ಸಂಗ್ರಹಿಸಿದ್ದು, ಈ ವಾರದಲ್ಲಿ ವಿಸ್ತೃತ ವರದಿ ನೀಡಲಿದೆ. ದತ್ತಾಂಶಗಳ ಆರಂಭಿಕ ಸಂಗ್ರಹಣೆಗೆ ಒತ್ತು ನೀಡುತ್ತಿರುವ ಅಧಿಕಾರಿಗಳಿಗೆ ರೈತರೊಂದಿಗೆ ಸಮನ್ವಯ ಸಾಧಿಸಲು ನಿರ್ದೇಶಿಸಲಾಗಿದೆ. ರೈತರು ಎಕರೆಗೆ ಕನಿಷ್ಠ 2 ಲಕ್ಷ ನಷ್ಟ ಅನುಭವಿಸಿದ್ದಾರೆ.

ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದಿದ್ದರೂ, ರೈತರು ಉತ್ತಮ ಬೆಳೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದು ಈಗ ಮಳೆಯಿಂದಾಗಿ ಹಾನಿಗೀಡಾಗಿದೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಬೆಳೆ ನಷ್ಟದ ವರದಿಗಳು ಸಿದ್ಧವಾದ ನಂತರ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಪ್ರಕಾರ ಪರಿಹಾರವನ್ನು ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ರೈತರು ಸಾಲದ ಸುಳಿಯಿಂದ ಪಾರಾಗಲು ತಾವು ಮಾಡಿರುವ ವೆಚ್ಚದ ಮೊತ್ತವನ್ನು ಪರಿಹಾರವಾಗಿ ನೀಡಲು ಒತ್ತಾಯಿಸುತ್ತಿದ್ದಾರೆ.

ಮೈಸೂರು ತಾಲೂಕಿನ ಕತ್ತೂರು ಹಾಗೂ ಇತರೆಡೆ ಮಳೆಯಿಂದಾಗಿ ರೈತರು ಬಾಳೆ ತೋಟಗಳನ್ನು ಕಳೆದುಕೊಂಡಿದ್ದಾರೆ. ಕಲ್ಲಂಗಡಿ ಬೆಳೆಗೂ ಹಾನಿಯಾಗಿದೆ ಎಂಬ ವರದಿಗಳಾಗಿವೆ.

ಇದನ್ನು ನೋಡಿ : ಬಳ್ಳಾರಿ ಲೋಕಸಭೆ : ಶ್ರೀರಾಮಲು ರಾಜಕೀಯ ಜೀವನ ಅಂತ್ಯವಾಗುತ್ತಾ?Janashakthi Media

Donate Janashakthi Media

Leave a Reply

Your email address will not be published. Required fields are marked *