ಟೋಕಿಯೋ: ಕುಸ್ತಿಪಟು ಭಜರಂಗ್ ಪೂನಿಯಾ ನಿರೀಕ್ಷೆಸಿಂದಯೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ವಿಭಾಗದಲ್ಲಿ ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ಎದುರು 2-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಪದಕದಕ್ಕೆ ಸಮೀಪಿಸಿದ್ದಾರೆ.
ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್ : ಮಹಿಳಾ ಹಾಕಿ ಪದಕದ ಕನಸು ಭಗ್ನ
ಕ್ವಾರ್ಟರ್ ಫೈನಲ್ ನಲ್ಲಿ ನಡೆದ ಕಾದಾಟದಲ್ಲಿ ಮೊರ್ತೆಜಾ ಘಿಯಾಸಿ ಚೆಕಾ ಮೊದಲಿಗೆ ಒಂದು ಅಂಕ ಗಳಿಸಿದರು. ಇದರೊಂದಿಗೆ ಮೊದಲ ಸುತ್ತಿನಲ್ಲಿ ಇರಾನಿ ಸ್ಪರ್ಧಿ 1-0 ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಕಾದಾಟದಲ್ಲಿ ಭಜರಂಗ್ ಪೂನಿಯಾ 2 ಅಂಕಗಳನ್ನು ಗಳಿಸುವ ಮೂಲಕ ಗೆಲುವಿನ ದಾರಿಯನ್ನು ಸುಗಮಗೊಳಿಸಿದರು. ಇರಾನಿನ ಅಟಗಾರನನ್ನು ಪಂದ್ಯದ ಒಂದು ನಿಮಿಷ ಬಾಕಿ ಇರುವಾಗಲೇ ಬಜರಂಗ್ ಪೂನಿಯಾ ಗೆಲುವಿನ ನಗೆ ಬೀರಿದರು.
ಇದನ್ನು ಓದಿ: ಕುಸ್ತಿ ಕಾದಾಟದಲ್ಲಿ ಹೋರಾಟ; ಬೆಳ್ಳಿಗೆ ಕೊರಳೊಡ್ಡಿದ ರವಿ ಕುಮಾರ್ ದಹಿಯಾ
ಸೆಮಿಫೈನಲ್‌ನಲ್ಲಿ ಭಜರಂಗ್ ಪೂನಿಯಾ ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್ ಎದುರು ಹೋರಾಡಲಿದ್ದಾರೆ. ಈ ಕಾದಾಟವು ಇಂದು ಮಧ್ಯಾಹ್ನ 2.55ಕ್ಕೆ ಆರಂಭವಾಗಲಿದೆ, ಈ ಪಂದ್ಯವನ್ನು ಜಯಿಸಿದರೆ ಭಜರಂಗ್ ಒಲಿಂಪಿಕ್ಸ್ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.