ಬಹುರೂಪಿ ನಾಟಕೋತ್ಸವಕ್ಕೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಮೈಸೂರಿನ ಕಲಾಮಂದಿರದ ಕಿಂದರಜೋಗಿ ಬಳಿ ಬಹುರೂಪಿ ನಾಟಕೋತ್ಸವ ವಿವಾದದ ಕುರಿತು ಚರ್ಚಿಸಲು ಪರ್ವ ನಾಟಕದ ಕಿರಿಯ ಕಲಾವಿದರು ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಮೈಸೂರು: ರಂಗಾಯಣದ ಪ್ರತಿಷ್ಟಿತ ಕಾರ್ಯಕ್ರಮ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಬಿಜೆಪಿ ಬೆಂಬಲಿತ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕ ಅವಿನಾಶ್ ಅವರನ್ನು ಕರೆಸಬಾರದು ಎಂದು ‘ಪರ್ವ’ ನಾಟಕದ ಕಿರಿಯ ಕಲಾವಿದರು ರಂಗಾಯಣ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

“ಬಹುರೂಪಿ ಕಾರ್ಯಕ್ರಮವು ರಂಗಾಯಣಕ್ಕೆ ಗರಿಮೆಯದ್ದಾಗಿದೆ. ಈ ಕಾರ್ಯಕ್ರಮಕ್ಕೆ ಸಮಾಜದ ದೃಷ್ಟಿಯಲ್ಲಿ ಎಲ್ಲಾ ಸಿದ್ಧಾಂತಗಳಿಗೂ ಗೌರವಕೊಡುವ ಸಮಾನ ಮನಸ್ಕರನ್ನು ಕರೆಸಬೇಕು” ಎಂದು ಕಿರಿಯ ಕಲಾವಿದರು ಆಗ್ರಹಿಸಿದ್ದಾರೆ.

ಬಹುರೂಪಿ ನಾಟಕೋತ್ಸವವೂ ವಿಶ್ವವಿಖ್ಯಾತಿಯನ್ನು ಪಡೆದಿದೆ. ಇಂತಹ ಕಾರ್ಯಕ್ರಮಕ್ಕೆ ಸಮಾನ ಮನಸ್ಕರನ್ನು ಕರೆಸಬೇಕು. ಅವರು ಯಾರೇ ಆಗಿದ್ದರೂ ಕರೆಸಬಹುದು. ಆದರೆ ಒಂದು ಪಕ್ಷದ ವಕ್ತಾರರಾಗಿರುವ ಹಾಗೂ ಸುಳ್ಳಿನ ಸರಮಾಲೆ ಹೆಣೆದು ಭಾಷಣ ಬಿಗಿದು ಕೋಮುಗಲಭೆ ಸೃಷ್ಟಿಸಿರುವ ‘ಚಕ್ರವರ್ತಿ ಸೂಲಿಬೆಲೆ’ಯನ್ನು ಕರೆಸುವುದು ಸೂಕ್ತವಲ್ಲ ಎಂದು ಕಿರಿಯ ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, “ಮತ್ತೊಬ್ಬ ಕಲಾವಿದರಾದ ಮಾಳವಿಕ ಅವಿನಾಶ್ ಅವರು ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರನ್ನೂ ಕರೆಸುವುದು ಸೂಕ್ತವಲ್ಲ. ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ ತಾವು ತುಸು ಗಂಭೀರವಾಗಿ ಆಲೋಚಿಸಿದರೆ ನಮಗೆ ಖುಷಿ ಮತ್ತು ಹಾಗೂ ಅವರಿಬ್ಬರನ್ನು ಕರೆಸುವುದನ್ನು ನಾವು ವಿರೋಧಿಸುತ್ತೇವೆ” ಎಂದು ತಿಳಿಸಿದ್ದಾರೆ.

“ನಮ್ಮ ಆಸೆ ಒಂದೇ. ನಿಮ್ಮ ಸಾರಥ್ಯದಲ್ಲಿ ಬಹುರೂಪಿಯು ಯಾವುದೇ ವಿವಾದ, ಅಡಚಣೆಗಳಿಗೆ ಕೇಂದ್ರ ಬಿಂದುವಾಗದೆ ಯಶಸ್ವಿಯಾಗಬೇಕಿದೆ” ಎಂದು ಕೋರಿರುವ ಪತ್ರದಲ್ಲಿ ಹಲವರು ಸಹಿ ಮಾಡಿದ್ದಾರೆ. “ನಿಮ್ಮ ಮಕ್ಕಳ ಸ್ಥಾನದಲ್ಲಿರುವ ಪರ್ವದ ಕಿರಿಯ ಕಲಾವಿದರು” ಎಂದು ಉಲ್ಲೇಖಿಸಿ ಅಡ್ಡಂಡ ಕಾರ್ಯಪ್ಪ ಅವರಿಗೆ ಪತ್ರ ತಲುಪಿಸಿದ್ದಾರೆ.

ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸದಾ ಚರ್ಚೆಯ ಮುಖ್ಯ ಬಿಂದುವಾಗುತ್ತಿರುವ ಅಡ್ಡಂಡ ಸಿ.ಕಾರ್ಯಪ್ಪ ಅವರು ಕಲಾವಿದರ ಮನವಿಯನ್ನು ಸಲ್ಲಿಸಿದ್ದಾರೆ.

ಬಹುರೂಪಿ ನಾಟಕೋತ್ಸವವು ಡಿಸೆಂಬರ್‌ 10ರಿಂದ ಡಿಸೆಂಬರ್‌ 19ರವರೆಗೆ ನಡೆಯಲು ನಿಗದಿಗೊಂಡಿದ್ದವು. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯಂತೆ ಸದ್ಯ ನಾಟಕೋತ್ಸವವು ಮುಂದೂಡಗಿದ್ದು, ದಿನಾಂಕ ನಿಗದಿಯಾಗಿಲ್ಲ.

Donate Janashakthi Media

2 thoughts on “ಬಹುರೂಪಿ ನಾಟಕೋತ್ಸವಕ್ಕೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

  1. ಈ ಹಿಂದಿನ ನಿರ್ದೇಶರುಗಳಿದ್ದ ಸಯದಲ್ಲೂ ಈ ರೀತಿಯಲ್ಲೇ ನಡೆಯುತ್ತಿದ್ದದ್ದು, ಆಸಮಯದ ಪ್ರಭಾವಿಗಳನ್ನೇ ಕರೆಸಿ ಕಾರ್ಯಕ್ರಮನಡೆಸುತ್ತಿದ್ದರು. ಒಮ್ಮೆಲೇ ನೋಡಿದರೆ ಈಗಿನ ನಡೆಯನ್ನು ನೋಡಿದರೆ ಇತರ ಶಕ್ತಿಗಳ ಕೈವಾಡವೂ ಕಾಣುವುದರಲ್ಲಿ ಸಂದೇಹವೇ ಇಲ್ಲ, ಇಂತಹ ಪತ್ರಗಳನ್ನು ಸಿದ್ಧಪಡಿಸಿ, ಯುವ ಪೀಳಿಗೆಯಲ್ಲಿ ದ್ವೇಶ, ದಳ್ಳುರಿ ಹೊತ್ತಿಸುವವರ ಬಗ್ಗೆ ಹೇಸಿಗ ಎನಿಸುತ್ತದೆ, ಈ ರೀತಿ ಕೋಮುದ್ವೇಶ ಗೀಮುದ್ವೇಶ ಇತ್ಯಾದಿ ಹುಟ್ಟುಹಾಕುವವರ ಹುಟ್ಟಡಗಿಸ ಬೇಕು

  2. ಈ ಹಿಂದಿನ ನಿರ್ದೇಶರುಗಳಿದ್ದ ಸಯದಲ್ಲೂ ಅವರಿಗೆ
    ಬೇಕಾದ, ಆಗಿನ ಸರಕಾರೀ ಜೀ ಹುಜೂರ್ ಪ್ರಭಾವಿಗಳನ್ನೇ ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದರು. ಒಮ್ಮೆಲೇ ಈಗಿನ ನಡೆಯನ್ನು ನೋಡಿದರೆ ಇತರ ಶಕ್ತಿಗಳ ಕೈವಾಡವೂ ಕಾಣುವುದರಲ್ಲಿ ಸಂದೇಹವೇ ಇಲ್ಲ, ಇಂತಹ ಪತ್ರಗಳನ್ನು ಸಿದ್ಧಪಡಿಸಿ, ಯುವ ಪೀಳಿಗೆಯಲ್ಲಿ ದ್ವೇಶ, ದಳ್ಳುರಿ ಹೊತ್ತಿಸುವವರ ಬಗ್ಗೆ ಹೇಸಿಗೆ ಎನಿಸುತ್ತದೆ, ಈ ರೀತಿ ಕೋಮುದ್ವೇಶ ಗೀಮುದ್ವೇಶ ಇತ್ಯಾದಿ ಹುಟ್ಟುಹಾಕುವವರ ಹುಟ್ಟಡಗಿಸ ಬೇಕು

Leave a Reply

Your email address will not be published. Required fields are marked *