ಬದಲಾದ ನೋಂದಣಿ ನೀತಿ: ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಸಿಗುವುದೆ?

ಬೆಂಗಳೂರು : ಸುಮಾರು 15 ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಖರೀದಿ ಮಾಡಿ ಕನ್ನಡ ಪತ್ರಿಕೆಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಸೇವೆ ಮಾಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಹಾಗೂ ವಿಶ್ವ ಪತ್ರಿಕಾ ಸಂಗ್ರಹಕಾರ‌ ಕಲ್ಯಾಣ ಕುಮಾರ್‌ ಅವರು ಈ ಬಾರಿ ಎರಡು ಪುಸ್ತಕ ಮಳಿಗೆ ಲಭ್ಯವಾಗದಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸುಮಾರ್ 15 ವರ್ಷಗಳಿಂದ ನಿರಂತರವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳ ಸಾಲಿನಲ್ಲಿ ಸಾಹಿತ್ಯ ಪರಿಷತ್ತು ನಿಗದಿಪಡಿಸಿದ ಹಣವನ್ನು ಕೊಟ್ಟು ಎರಡು ಮಳಿಗೆಗಳನ್ನು ಪಡೆದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದ ಪ್ರಕಟವಾಗುವ ಕನ್ನಡದ ದಿನಪತ್ರಿಕೆ, ವಾರ, ಪಾಕ್ಷಿಕ, ಮಾಸಿಕ ಪತ್ರಿಕೆಗಳನ್ನು ಪ್ರದರ್ಶನ ಮಾಡುತ್ತಾ ಕನ್ನಡದ ಪತ್ರಿಕೆಗಳನ್ನು ಕೊಳ್ಳುವುದು ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಆಕಾಂಕ್ಷೆಯನ್ನು ಇಟ್ಟುಕೊಂಡು ಸತತ ಮೂರು ದಿನಗಳ ಕಾಲ ಪ್ರದರ್ಶನ ಮಾಡಿ ನನ್ನ ಕೆಲಸಕ್ಕೆ ಮರಳುತ್ತಿದ್ದೆ ಎಂದಿದ್ದಾರೆ.

ಆದರೆ ಈ ವರ್ಷ ಸಹಿತ ಪರಿಷತ್ತು ಪುಸ್ತಕ ಮಳಿಗೆಗಳ ನೋಂದಣಿಗಾಗಿ ವಿಶೇಷ ಆಪ್ ಬಿಡುಗಡೆ ಮಾಡಿದ್ದು ಸರಿ ಅಷ್ಟೇ. ಆದರೆ, ಈ ವರ್ಷ ಮಳಿಗೆ ಒಂದಕ್ಕೆ 3000 ರೂ. ನಿಗದಿ ಮಾಡಿದರು. ಎರಡು ಮಳಿಗೆಗಳನ್ನು ಪಡೆಯಲು ಆಪ್ ಮೂಲಕ ಪ್ರಯತ್ನಿಸಿದರೆ ನೋಂದಣಿ ಪ್ರಕ್ರಿಯೆ ಸಾಧ್ಯವಾಗಲಿಲ್ಲ. ಈಗ ಸಾಹಿತ್ಯ ಪರಿಷತ್ತು ನೀಡಿದ ಅವಧಿಗಿಂತ ಮೊದಲೇ ಮಳಿಗೆಗಳ ನೋಂದಾವಣೆ ಸ್ಥಗಿತ ಮಾಡಿದ್ದು, ಪತ್ರಿಕೆಗಳ ಪ್ರದರ್ಶನ ನಿರಂತರವಾಗಿ ಮಾಡಬೇಕೆಂಬ ನನ್ನ ಆಸಕ್ತಿಗೆ ದಕ್ಕೆಯಾಗಿದೆ. ನೇರವಾಗಿ ಸಾಹಿತ್ಯ ಪರಿಷತ್ತನ್ನು ಭೇಟಿಯಾಗಿ ಹೇಗಾದರೂ ಸರಿ ನನಗೆ ಎರಡು ಮಳಿಗೆಗಳನ್ನು ನೀಡಿ ಎಂದರೆ ಸಾಧ್ಯವಿಲ್ಲವೆಂದು ಉತ್ತರಿಸಿರುತ್ತಾರೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *