ಗೋಪಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿ.ಕೆ. ಹುಲಿಯಪ್ಪ 13 ಮತಗಳಿಂದ ಜಯ

ರಾಮನಗರ : ಬಿಡದಿ ಹೋಬಳಿಯ ಗೋಪಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ  ಕಾಂಗ್ರೆಸ್ ಬೆಂಬಲಿತ ಸದಸ್ಯ ಬಿ.ಕೆ. ಹುಲಿಯಪ್ಪ ಆಯ್ಕೆಯಾದರು. ಆರ್.ಎ. ಗೋಪಾಲ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆಯಿತು.

ಅಂತಿಮವಾಗಿ ಹುಲಿಯಪ್ಪ 13 ಮತಗಳನ್ನು ಪಡೆದು ಜಯ ಗಳಿಸಿದರು. ವಿನೋದ್‍ಕುಮಾರ್ 11 ಮತಗಳನ್ನು ಪಡೆದು ಪರಾಭವಗೊಂಡರು. 2 ಮತ ತಿರಸ್ಕೃತಗೊಂಡವು. ಕೈ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಇದನ್ನೂ ಓದಿ: ಅನುಮಾನಾಸ್ಪದ ಸಾವು: ಸ್ವಗ್ರಾಮಕ್ಕೆ ತಲುಪಿದ ಐವರ ಮೃತದೇಹಗಳು

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೋಪಹಳ್ಳಿ ಸದಸ್ಯ ಹುಲಿಯಪ್ಪ ಹಾಗೂ ಮಂಚೇಗೌಡನಪಾಳ್ಯದ ಜೆಡಿಎಸ್ ಬೆಂಬಲಿತ ಸದಸ್ಯ ವಿನೋದ್‍ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಒಟ್ಟು 26 ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ 15 ಹಾಗೂ ಜೆಡಿಎಸ್ ಬೆಂಬಲಿತ 11 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.

ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜು, ಬಿಎಂಐಸಿ ನಿರ್ದೇಶಕ ರಮೇಶ್ ಅಬ್ಬನಕುಪ್ಪೆ, ಪಂಚಾಯಿತಿ ಅಧ್ಯಕ್ಷೆ ಸರೋಜ ನಾಗರಾಜು, ಸದಸ್ಯರಾದ ಸಿ.ಪಿ. ಪ್ರಕಾಶ್, ಆರ್.ಎ.ಗೋಪಾಲ್, ಶಿವಲಿಂಗಯ್ಯ, ಗೋಪಾಲಗೌಡ, ರಾಮಚಂದ್ರ, ತಿಮ್ಮಯ್ಯ, ಶ್ರೀಕಂಠಯ್ಯ, ಕವಿತಾ, ರಾಧಾಕುಮಾರ್, ಸರೋಜನಾಗರಾಜು, ಸುಜಾತತಾಯಪ್ಪ, ನೀಲಗೋವಿಂದಪ್ಪ, ಅನುಸೂಯ, ಮಂಜುಳಾ ತಿಮ್ಮಪ್ಪ, ಪಿಡಿಒ ಲೋಕೇಶ್, ಮುಖಂಡ ಉಮಾಶಂಕರ್, ರಾಮನಹಳ್ಳಿ ಹಾಲಿನಡೇರಿ ಅಧ್ಯಕ್ಷ ಅನಿಲ್‍ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದರು.

ಇದನ್ನೂ ನೋಡಿ: ಧರ್ಮಸ್ಥಳದ ಎಲ್ಲ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ನೀಡಬೇಕುJanashakthi Media

Donate Janashakthi Media

Leave a Reply

Your email address will not be published. Required fields are marked *