ಕೊಪ್ಪಳ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಈಗಾಗಲೇ ಬಿ.ಇಡಿ ವಿದ್ಯಾರ್ಥಿಗಳ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಿ ಸಮಸ್ಯೆಗಳು ಉಂಟಾಗಲಿವೆ. ಹಾಗಾಗಿ ಪರೀಕ್ಷೆ ವೇಳಾ ಪಟ್ಟಿ ಬದಲಾಯಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಇಂದು ಬಿ.ಇಡಿ ವಿದ್ಯಾರ್ಥಿಗಳೊಂದಿಗೆ ಕೊಪ್ಪಳ ತಹಶಿಲ್ದಾರರ ಮೂಲಕ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿವುದರ ಮೂಲಕ ಒತ್ತಾಯ ಮಾಡಿದೆ.
ಪರೀಕ್ಷೆಗಳನ್ನು ಬೇಗ ಮುಗಿಸಿಬೇಕೆಂಬ ಏಕೈಕ ಉದ್ದೇಶದಿಂದ ಪರೀಕ್ಷೆಯ ವೇಳಾಪಟ್ಟಿಯನ್ನು ಈ ರೀತಿ ನಿಗದಿ ಮಾಡುವುದು ಸರಿಯಾದ ಕ್ರಮವಲ್ಲ, ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿಯೊಂದು ವಿಷಯ ಪರೀಕ್ಷೆ ನಂತರ ಕನಿಷ್ಠ ಒಂದು ದಿನವಾದರೂ ಅಂತರ ಇರಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಈಗಾಗಲೇ ಬಿ.ಇಡಿ ವಿದ್ಯಾರ್ಥಿಗಳ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 2, 2021 ರಿಂದ ಪ್ರಾರಂಭವಾಗಿ ಮಾರ್ಚ್ 5,2021 ನೇ ತಾರೀಕಿಗೆ ಎಲ್ಲಾ ಹಂತದ ಪರೀಕ್ಷೆಗಳನ್ನು ಮುಗಿಸಲು ವೇಳಾಪಟ್ಟಿ ನಿಗದಿ ಮಾಡಿದೆ. ಆದರೆ ಇದು ಅವೈಜ್ಞಾನಿಕವಾಗಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸಲು ತುಂಬಾ ಸಮಸ್ಯೆಯಾಗುತ್ತದೆ, ಏಕೆಂದರೆ ಮಾರ್ಚ್ 2 ನೇ ತಾರೀಖಿನಂದು 4ನೇ ಸೆಮಿಸ್ಟರ್ ಮತ್ತು ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ನಿಗದಿಯಾಗಿದ್ದು, ಕೆಲವೊಂದು ವಿದ್ಯಾರ್ಥಿಗಳು 2ನೇ ಸೆಮಿಸ್ಟರ್ ನಲ್ಲಿ ಅನುತ್ತೀರ್ಣರಾಗಿದ್ದರು. ಈಗ ಅವರು 4ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು , ಒಂದೇ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ 4ನೇ ಸೆಮಿಸ್ಟರ್ ಹಾಗೂ ಎರಡನೇ ಸೆಮಿಸ್ಟರ್ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು ಒಂದೇ ದಿನ ಎರಡು ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಹಾಗಾಗಿ ಪರೀಕ್ಷೆ ದಿನಾಂಕವನ್ನು ಬದಲಾಯಿಸಬೇಕೆಂದು. ಬದಲಾವಣೆ ಮಾಡದೇ ಇದ್ದರೆ ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷ ಸುಭಾನ್ ಸೈಯಾದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಯಮನೂರ ಹೊಮ್ಮಿನಾಳ, ಹುಸೇನ್ ಸಾಬ ಬನ್ನಿಗೋಳ, ಬಾಳಪ್ಪ ಹುಲಿಹೈದರ, ಹನುಮೇಶ ವಾಲ್ಮೀಕಿ, ಮಂಜುನಾಥ ಕುರಿ ಇತರರು ಇದ್ದರು.