ನಿವೃತ್ತ ಕನ್ನಡ ಅಧ್ಯಾಪಕಿ, ಲೇಖಕಿ ಮಂಜುಳಾ ಬಿ.ಸಿ. ನಿಧನ

ಬೆಂಗಳೂರು : ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ನಿವೃತ್ತರಾಗಿದ್ದ ಮಂಜುಳಾ ಬಿ.ಸಿ. (65) ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.

ಮಹಿಳಾ ಸಂಘಟನೆಯಲ್ಲಿ ಕ್ರಿಯಾಶೀಲರಾಗಿದ್ದ ಅವರಿಗೆ ಪತಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಹಾಗೂ ಮಗ ಮೇಜರ್ ಭಾರತಿ ನಂದ ಇದ್ದಾರೆ.

ಹಾಸನ ಸಮೀಪದ ಬುಸ್ತೇನಹಳ್ಳಿಯಲ್ಲಿ ಜನಿಸಿದ ಅವರು ಬಡತನದ ಕಾರಣಕ್ಕಾಗಿ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದರು. ಅನಂತರ ಮೈಸೂರಿನಲ್ಲಿ ಕನ್ನಡ ಎಂ.ಎ ಮುಗಿಸಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು.

ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದ ಅವರು, ಅನೇಕ ಲೇಖನಗಳನ್ನು ಕೂಡ ಬರೆದಿದ್ದಾರೆ. ನಾಸ್ತಿಕರಾಗಿದ್ದ ಅವರು, ಶುಷ್ಕ ಆಚರಣೆಗಿಂತ ಹೆಣ್ಣಿಗೆ ವಿದ್ಯೆ ಮುಖ್ಯ ಎಂದು ನಂಬಿದ್ದರು.

ಮಂಜುಳಾ ರವರ ಪಾರ್ಥಿವ ಶರೀರವನ್ನು ನಾಳೆ ಬೆಳಗ್ಗೆ (ಏಪ್ರಿಲ್ 16) 9.00 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ನಮನ ಸಲ್ಲಿಸಬಹುದು. ಆನಂತರ ಮೈಸೂರಿನ ಅವರ ಸ್ವಗೃಹದಲ್ಲಿ (ಬೋಗಾದಿ ದಕ್ಷಿಣ ಎರಡನೇ ಹಂತ, ವಾಗ್ದೇವಿನಗರ, ಎಸ್.ಜೆ.ಸಿ.ಇ. ಮುಖ್ಯರಸ್ತೆ) ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *