ಹೊಸದಿಲ್ಲಿ: ಮುಸ್ಲಿಂ ವಿದ್ಯಾರ್ಥಿಗೆ ಮೌಖಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಎಬಿವಿಪಿ ಕಾರ್ಯಕರ್ತನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಅಮಾನತುಗೊಂಡ ಯುವಕನನ್ನು ಎಂಎ ಸ್ನಾತಕೋತ್ತರ ವಿದ್ಯಾರ್ಥಿ ರಿಷಿ ತಿವಾರಿ ಎಂದು ಗುರುತಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿಯೊಬ್ಬರು ದ್ವೇಷದ ಅಪರಾಧದ ಬಗ್ಗೆ ದೂರು ನೀಡಿದ ನಂತರ, ಶಿಕ್ಷೆಗೆ ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿವೆ. ಇದರ ಬಳಿಕ ರಿಷಿ ತಿವಾರಿಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಂ.ಎ. ತಿವಾರಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಸಂಬಂಧ ಹೊಂದಿದ್ದಾರೆ. ಮೇ 1 ರಂದು ಈ ಘಟನೆ ನಡೆದಿದೆ. ಮೇ 1 ರಂದು, ಮುಸ್ಲಿಂ ವಿದ್ಯಾರ್ಥಿ ಕೆಜಿಎ ಹಾಸ್ಟೆಲ್ ಬಳಿ ತನ್ನ ಉಪವಾಸ (ರೋಜಾ) ಮುಗಿಸಲು ಬಂದಿದ್ದಾಗ ತಿವಾರಿ ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾನೆ, ಹಾಗೂ ಅವರ ಆಹಾರವನ್ನು ಎಸೆದು, ಮುಖದ ಮೇಲೆ ಉಗುಳಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತಿವಾರಿ ಕೃತ್ಯವನ್ನು “ಇಸ್ಲಾಮೋಫೋಬಿಕ್” ಎಂದು ಕರೆದಿದೆ.
ಅಮಾನತಿನ ನಂತರವೂ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಿರ್ಧಾರದಿಂದ ತೃಪ್ತರಾಗಿಲ್ಲ. “ಇದು ದ್ವೇಷದ ಅಪರಾಧ ಮತ್ತು ಇದನ್ನು ಅತ್ಯಂತ ಗಂಭೀರ ರೀತಿಯಲ್ಲಿ ತೆಗೆದುಕೊಳ್ಳಬೇಕು” “ಅಪರಾಧಿಯನ್ನು ಹೊರಹಾಕುವ ಅಗತ್ಯವಿದೆ ಅಥವಾ ಕನಿಷ್ಠ ಒಂದು ವರ್ಷದ ಪೂರ್ಣ ಅಮಾನತು ಅಗತ್ಯವಿದೆ,” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
“ಆ್ಯಂಟಿ ರ‌್ಯಾಗಿಂಗ್ ಸೆಲ್ ಈ ಸಮಸ್ಯೆಯನ್ನು ರ‌್ಯಾಗಿಂಗ್ ಕ್ರಿಯೆಯಾಗಿ ಪರಿಗಣಿಸಬೇಕು ಮತ್ತು ನಾವು ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು ರ‌್ಯಾಗಿಂಗ್ ವಿರೋಧಿ ಅಫಿಡವಿಟ್‌ಗಳಿಗೆ ಸಹಿ ಮಾಡಿದಂತೆ, ಶಿಕ್ಷೆಯನ್ನು ವಿಧಿಸಬೇಕು” ಎಂದು ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.