ಆರ್​​ಬಿಐನಿಂದ ಮಹತ್ವದ ನಿರ್ಧಾರ; ಇನ್ಮುಂದೆ 2 ಸಾವಿರ ರೂ. ನೋಟ್​​ ಚಲಾವಣೆ ಇಲ್ಲ

ನವದೆಹಲಿಯ : ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಆರ್‌ಬಿಐ ಆದೇಶಿಸಿದೆ. ಬ್ಯಾಂಕ್‌ಗಳಲ್ಲಿ…

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಮಾನ ಮನಸ್ಕ ಪಕ್ಷಗಳ ನಾಯಕರು ಭಾಗಿ

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ  ಮೇ 20ರಂದು ಮಧ್ಯಾಹ್ನ ಪ್ರಮಾಣ…

ನಾನೇಕೆ ಅಸಮಾಧಾನಗೊಳ್ಳಬೇಕು? ನಾವು ಸಾಗಬೇಕಾದ ದಾರಿ ಬಹಳ ದೂರವಿದೆ : ಡಿಕೆ ಶಿವಕುಮಾರ್

ನವದೆಹಲಿ: “ನಾನೇಕೆ ಅಸಮಾಧಾನಗೊಳ್ಳಬೇಕು? ನಾವು ಸಾಗಬೇಕಾದ ದಾರಿ ಇನ್ನು ಬಹಳ ದೂರ ಇದೆ” ಎಂದು ಕರ್ನಾಟಕ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.…

ರೈತರ ಹಕ್ಕುಗಳನ್ನು ಬೆಂಬಲಿಸಿದ ಸಂಶೋಧಕಿಯನ್ನು ತನಿಖೆಗೆ ಗುರಿಪಡಿಸಿದ ಇ.ಡಿ.: ವಿಶ್ವಾದ್ಯಂತ ತೀವ್ರ ಖಂಡನೆ-ಪ್ರತಿಭಟನೆ

ಸಂಶೋಧಕಿ, ಲೇಖಕಿ ಮತ್ತು ಸಕ್ರಿಯ ಕಾರ್ಯಕರ್ತೆ ಮತ್ತು ಪ್ರಧಾನ ಮಂತ್ರಿಗಳನ್ನು ಮಣಿಸಿದ ರೈತರ ಐತಿಹಾಸಿಕ ಹೋರಾಟವನ್ನು ಸಕ್ರಿಯವಾಗಿ ಬೆಂಬಲಿಸಿದ ಡಾ. ನವಶರಣ್ ಸಿಂಗ್ ಅವರನ್ನು ಮೇ 10ರಂದು ಏಳು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್‌ಎ(ಕಪ್ಪು ಹಣವನ್ನು ಬಿಳುಪು ಮಾಡುವುದನ್ನು ತಡೆಯುವ) ಕಾಯ್ದೆಯ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಿರುವುದಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿವೆ. ರೈತ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಒಂದು ಹೇಳಿಕೆಯನ್ನು ನೀಡಿ, ಡಾ. ನವಶರಣ ಅವರು ದಿಲ್ಲಿ ಗಡಿಗಳಲ್ಲಿ ಐತಿಹಾಸಿಕ ರೈತ ಚಳವಳಿಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು, ರೈತರ ಹೋರಾಟದ ಸಂದೇಶವನ್ನು ಅಂತಾರಾಷ್ಟ್ರೀಯ ವೇಧಿಕೆಗಳಿಗೆ ಕೊಂಡೊಯ್ದರು. ಇದಕ್ಕಾಗಿಯೇ ಮೋದಿ ಸರ್ಕಾರ ಆಕೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತ ,ನ್ಯಾಯಕ್ಕಾಗಿ ಆಕೆಯ ಅನ್ವೇಷಣೆಯಲ್ಲಿ ಎಸ್‌ಕೆಎಂ ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ. ಇದು ಡಾ.ನವಶರಣ್ ಸಿಂಗ್ ಅವರಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಬಿಜೆಪಿ ಸರ್ಕಾರದ ದುಷ್ಟ ಪ್ರಯತ್ನ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ತೀವ್ರವಾಗಿ ಖಂಡಿಸಿದೆ. ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ಪ್ರಶ್ನಿಸುವ ಜಾರಿ ನಿರ್ದೇಶನಾಲದ ಕ್ರಮ ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವ ಇನ್ನೊಂದು ಪ್ರಯತ್ನವಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದಕರಾಗಿ, ಸಾರ್ವಜನಿಕ ಚಿಂತಕರಾಗಿ ಮಹತ್ವದ ಪಾತ್ರ ವಹಿಸುತ್ತಿರುವ ಅವರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತ-ವಿರೋಧಿ ಮತ್ತು ಜನವಿರೋಧಿ ನೀತಿಗಳಿಗೆ ತಮ್ಮ ವಿರೋಧವನ್ನು ನಿರಂತರವಾಗಿ ವ್ಯಕ್ತಪಡಿಸುತ್ತ ಬಂದಿರುವವರು. ಖ್ಯಾತ ನಾಟಕಕಾರ ದಿವಂಗತ ಗುರುಶರಣ್ ಸಿಂಗ್ ಅವರ ಪುತ್ರಿಯಾಗಿರುವ ಅವರು ರೈತ ಚಳವಳಿಗಳ ಕಟ್ಟಾ ಬೆಂಬಲಿಗರಾಗಿ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಎಐಕೆಎಸ್ ಕೂಡ ನೆನಪಿಸಿದೆ. ಖ್ಯಾತ ಹಕ್ಕು ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ ಟ್ರಸ್ಟ್ ‘ಅಮನ್ ಬಿರಾದಾರಿ’ ಮಂಡಳಿಯ ಸದಸ್ಯರಾಗಿರುವ ಅವರನ್ನು ಈ ಟ್ರಸ್ಟ್£ ಕೆಲವು ಹಣಕಾಸಿನ ವಹಿವಾಟುಗಳು ಮತ್ತು ಹರ್ಷಮಂದರ್ ಅವರೊಂದಿಗಿನ ಸಂಬAಧದ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಜನರ ಹಕ್ಕುಗಳನ್ನು ಮತ್ತು ಕೋಮು ಸೌಹಾರ್ದವನ್ನು ಪ್ರತಿಪಾದಿಸುತ್ತ, ಈ ಹಕ್ಕುಗಳ ಮತ್ತು ಸೌಹಾರ್ದದ ಉಲ್ಲಂಘನೆಯ ವಿರುದ್ಧ ದೇಶವಿಡೀ ಸಂಚರಿಸುತ್ತಿರುವ ಮಾಜಿ ಉನ್ನತ ಸರಕಾರೀ ಅಧಿಕಾರಿ ಹರ್ಷ ಮಂದರ್ ಅವರ ದನಿಯನ್ನು ಅಡಗಿಸಲು ಆರಂಭಿಸಿರುವ ಈ ತನಿಖೆಯಲ್ಲಿ ಈಗ ನವಶರಣ್ ಸಿಂಗ್‌ರವರನ್ನು ಕೂಡ ಸೇರಿಸಿರುವುದು ದೇಶದಾದ್ಯಂತ ಬುದ್ಧಿಜೀವಿಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸುವ ಮೋದಿ ಸರ್ಕಾರದ ವಿಶಾಲ ಮಾದರಿಯ ಭಾಗವಾಗಿದೆ ಎಂದಿರುವ ಎಐಕೆಎಸ್ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ದನಿಗಳ ಮೇಲೆ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ದಾಳಿಗಳ ವಿರುದ್ಧ ದನಿ ಎತ್ತುವಂತೆ ಜನಾಂದೋಲನದ ಎಲ್ಲಾ ವಿಭಾಗಗಳಿಗೆ ಮನವಿ ಮಾಡಿದೆ. ಅಖಿಲ ಭಾರತ ಅರಣ್ಯ ದುಡಿಯುವ ಜನರ ಸಂಘ ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ಕೂಡ ಇದು ಭಿನ್ನಾಭಿಪ್ರಾಯದ ದನಿಗಳನ್ನು ತೊಡೆದುಹಾಕಲು ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸುವ ನಿಂದನೀಯ ಕೃತ್ಯ ಎಂದು ಖಂಡಿಸಿವೆ. ಡಾ.ನವಶರಣ್ ಸಿಂಗ್ ಕೆನಡಾದ ಕಾರ್ಲೆಟನ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಲ್ಲಿಯೂ ಬೌದ್ಧಿಕ ವಲಯದಲ್ಲಿ ಖ್ಯಾತರಾಗಿರುವ ಅವರನ್ನು ಬೆಂಬಲಿಸಿ ಕೆನಡಾದ 20 ಕ್ಕೂ ಹೆಚ್ಚು ಸಂಸ್ಥೆಗಳು ಜಂಟಿ ಹೇಳಿಕೆಯನ್ನು ನೀಡಿದ್ದು, ಇ.ಡಿ. ಯ ಈ ಕ್ರಮವನ್ನು ಪ್ರಗತಿಪರ ಧ್ವನಿಗಳನ್ನು ಗುರಿಯಾಗಿಸಿಕೊಂಡಿರುವ ಮೋದಿ ಸರ್ಕಾರದ ಬಂಧನಗಳೋAದಿಗೆ ತಳುಕು ಹಾಕುತ್ತ “ದಕ್ಷಿಣ ಏಷ್ಯಾದ ಒಬ್ಬ ಸಾಧಕಿ, ವಿದ್ವಾಂಸೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಡಾ. ಸಿಂಗ್ ಅವರು ತಳಮಟ್ಟದ ಕೆಲಸದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅವರ ದಿವಂಗತ ತಂದೆಯಿAದ ಪಡೆದ ಪರಂಪರೆಯನ್ನು ಮುಂದಕ್ಕೊಯ್ಯುತ್ತಿದ್ದಾರೆ ಗ್ರಾಮೀಣ ಪಂಜಾಬ್ ಮತ್ತು ಇತರೆಡೆಗಳಲ್ಲಿ ಬಡವರು ಮತ್ತು ವಂಚಿತರನ್ನು ತಲುಪುವ ಮೂಲಕ, ಅವರ ಬೆಂಬಲ ಮತ್ತು ವಕಾಲತ್ತು ಅವರಿಗೆ ಜನಸಾಮಾನ್ಯರ ಪ್ರೀತಿ ಮತ್ತು ಗೌರವವನ್ನು ಗಳಿಸಿ ಕೊಟ್ಟಿದೆ. ಇದು ಅವರು ಮೋದಿಯ ಕಠೋರ ಕಾನೂನುಗಳ ವಿರುದ್ಧ ಭಾರತೀಯ ರೈತರ ಹೋರಾಟವನ್ನು ಧೈರ್ಯದಿಂದ ಬೆಂಬಲಿಸಿದಾಗ ಸ್ಪಷ್ಟವಾಗಿದೆ. …ಡಾ. ನವಶರಣ್ ಸಿಂಗ್ ಮತ್ತು ಅವರ ತಳಮಟ್ಟದ ಮತ್ತು ಶೈಕ್ಷಣಿಕ ಕೆಲಸಗಳ ಬಗ್ಗೆ ತಿಳಿದಿರುವ ಅಥವಾ ಪರಿಚಿತರಾಗಿರುವ ನಮಗೆ, ಆಡಳಿತದ ತನಿಖಾ ಸಂಸ್ಥೆಗಳಿAದ ಆಕೆಯ ಕಿರುಕುಳವು ಆಕ್ರೋಶ ಉಂಟು ಮಾಡಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ , ಅದನ್ನು ದೃಢವಾಗಿ ವಿರೋಧಿಸಬೇಕು” ಎಂದಿವೆ.

ಬಿಜೆಪಿ ಸರಕಾರಕ್ಕೆ ಗೇಟ್ ಪಾಸ್ ಭಾಗ 03 : ಕಾಂಗ್ರೆಸ್‌ ನ ಭಾರೀ ವಿಜಯಕ್ಕೆ ಕಾರಣಗಳೇನು ?

  ವಸಂತರಾಜ ಎನ್.ಕೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಈ ಕುರಿತಾಗಿ ವಿವರವಾದ ಮಾಹಿತಿಯುಳ್ಳ ಲೇಖನವನ್ನು…

ಸಿದ್ದರಾಮಯ್ಯ ಸಿಎಂ; ಡಿ.ಕೆ. ಶಿವಕುಮಾರ್ ಡಿಸಿಎಂ : ಎಐಸಿಸಿಯಿಂದ ಅಧಿಕೃತ ಘೋಷಣೆ

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ. ‘ಹೈ’ ಅಲರ್ಟ್ ನೊಂದಿಗೆ ಹಗ್ಗ ಜಗ್ಗಾಟ…

ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ : ಮೇ 20ಕ್ಕೆ ಪ್ರಮಾಣವಚನ ನಿಗದಿ

ನವದೆಹಲಿ : ಕೊನೆಗೂ ಡಿ.ಕೆ.ಶಿವಕುಮಾರ್‌ ಅವರ ಮನವೊಲಿಸುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಡರಾತ್ರಿ ನಡೆದ…

ಸಿಎಂ ಆಯ್ಕೆ ಕಗ್ಗಂಟು : ಪ್ರಮಾಣವಚನ ಸಿದ್ಧತೆ ಸ್ಥಗಿತ

ಬೆಂಗಳೂರು : ಕಾಂಗ್ರೆಸ್​​ನಲ್ಲಿ ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಕಾರ್ಯಕ್ರಮವನ್ನು ಸ್ಥಗಿತಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದರಾಮಯ್ಯ ನಾಳೆ ಪ್ರಮಾಣವಚನ‌…

ಹೊಸ ಶಾಸಕರಲ್ಲಿ ಅಪರಾಧ ಹಿನ್ನೆಲೆ ಇರೋರೆ ಹೆಚ್ಚು – ಎಡಿಆರ್‌ ವರದಿಯಲ್ಲಿ ಬಹಿರಂಗ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಅಂತ್ಯವಾಗಿ, ನೂತನ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ಕ್ರಿಮಿನಲ್‌ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.…

ಸಚಿವನನ್ನೇ ಸೋಲಿಸಿದ ಕೈ ಶಾಸಕನ ಹತ್ಯೆಗೆ ಸ್ಕೆಚ್​ : ಶಾಸಕ ಜಸ್ಟ್ ಮಿಸ್!, ಇಬ್ಬರ ಬಂಧನ

ಬಳ್ಳಾರಿ: ರಾಜಕೀಯ ಗುರುವಿನ ವಿರುದ್ದ ಶಿಷ್ಯ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೈ ಶಾಸಕನ ಹತ್ಯೆಗೆ ಸಂಚು ರೂಪಿಸಿದ್ದ ವಿಚಾರ ಈಗ…

ಮಂಡ್ಯ : ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ

ಮಂಡ್ಯ : ಮಹಿಳೆಯೊರ್ವಳ ಮೇಲೆ ಅತ್ಯಾಚಾರ ಮಾಡಿ ಕೊಲೆಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ…

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ, ಅಧಿಕೃತ ಘೋಷಣೆಯಷ್ಟೇ ಬಾಕಿ!

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್…

ಬಿಜೆಪಿ ವಿರುದ್ಧ ಕರ್ನಾಟಕದ ಜನತೆಯ ನಿರ್ಣಾಯಕ ತೀರ್ಪು

ಬೆಂಗಳೂರು : ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ಬಿಜೆಪಿಯನ್ನು ನಿರ್ಣಾಯಕವಾಗಿ ತಿರಸ್ಕರಿಸಿದ್ದಾರೆ.  ಈ ಸೋಲು ಬಿಜೆಪಿ ಸರಕಾರದ ಒಟ್ಟು ದುರಾಡಳಿತ ಮತ್ತು…

ಚುನಾವಣೆಯಲ್ಲಿ ಬಿಜೆಪಿ ಸೋಲು; ಅಡ್ಡಂಡ ಕಾರ್ಯಪ್ಪ ರಾಜೀನಾಮೆ

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ  ಹೀನಾಯವಾಗಿ ಸೋತ ಹಿನ್ನೆಲೆ ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿದ್ದಾರೆ.…

ನೋಟಾಗಿಂತಲೂ ಕಡಿಮೆ ಮತ ಪಡೆದ ಮಾಜಿ ಶಾಸಕ!

ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆ ಹಲವು ಶಾಕ್​ಗಳನ್ನು ಕೊಟ್ಟಿದೆ. ಈ ರೀತಿ ಹೊಡೆತ ತಿಂದವರಲ್ಲಿ ಮಾಜಿ ಶಾಸಕ ಅನಿಲ್ ಲಾಡ್…

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯ: ಹೈಕಮಾಂಡ್ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಅಂತ್ಯಗೊಂಡಿದೆ. ನಗರದ ಶಾಂಗ್ರೀಲಾ ಹೊಟೇಲ್…

ಜನಮತ 2023 : 9 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ

ಬೆಂಗಳೂರು : ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆದಂತ ಮತದಾನ ಮತಎಣಿಕೆ ಕಾರ್ಯ ಮುಕ್ತಾಯವಾಗಿದ್ದು. ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಸರ್ಕಾರ…

ಜನಮತ 2023 : ಸ್ಪಷ್ಟ ಬಹುಮತದತ್ತ ಕಾಂಗ್ರೆಸ್

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಪಡೆದುಕೊಂಡಿದೆ. ಈ ನಡುವಲ್ಲೇ ಕೈ…

ಜನಮತ 2023 : ಕಾಂಗ್ರೆಸ್‌ಗೆ ಆರಂಭಿಕ ಮುನ್ನಡೆ, ಬಿಜೆಪಿಗೆ ಹಿನ್ನಡೆ! ಎರಡಂಕಿ ದಾಟಿದ ಜೆಡಿಎಸ್‌

ಬೆಂಗಳೂರು :  ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆಯಿಂದ…

ಮತ ಎಣಿಕೆಗೆ ಕ್ಷಣಗಣನೆ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

ಬೆಂಗಳೂರು : ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದ್ದು, ಫಲಿತಾಂಶ ಏನಾಗಲಿದೆಯೋ ಎಂಬ…