ಲೇಬರ್ ಪಾರ್ಟಿಯ ನಾಯಕ ಆ್ಯಂಟನಿ ಅಲ್ಬನೀಸ್ ಆಸ್ಟ್ರೇಲಿಯಾದ ನೂತನ ಪ್ರಧಾನಿ

ಸಿಡ್ನಿ: ಆಸ್ಟ್ರೇಲಿಯಾ ಸಂಸತ್ತಿಗೆ ನಡೆದ ಚುನಾವಣೆಯ ಪ್ರಾಥಮಿಕ ಫಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಪ್ರತಿಪಕ್ಷ ಲೇಬರ್ ಪಾರ್ಟಿ ಮುನ್ನಡೆ ಸಾಧಿಸಿದ್ದು ಆ್ಯಂಟನಿ ಅಲ್ಬನೆಸ್‌ ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ನಿಚ್ಚಳವಾಗಿದೆ.

ಆ್ಯಂಟನಿ ಅಲ್ಬನೆಸ್‌ ನೇತೃತ್ವದ ಪಕ್ಷ 2007ರ ನಂತರ ಇದೇ ಮೊದಲಿಗೆ ಅಧಿಕಾರ ಗಳಿಸುವತ್ತ ಮುನ್ನಡೆದಿದೆ. ಅಲ್ಪಮತದ ಸರ್ಕಾರ ರಚನೆಯ ಸೂಚನೆ ಸ್ಪಷ್ಟವಾಗಿದೆ. ಹಿಂದೆ 2010-13ರಲ್ಲಿ ಅತಂತ್ರ ಸಂಸತ್ತು ರಚನೆಯಾಗಿತ್ತು. ‘ತಮ್ಮ ನೇತೃತ್ವ ತಂಡವು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದೆ’ ಎಂದೂ ಆ್ಯಂಟನಿ ಪ್ರಕಟಿಸಿದ್ದಾರೆ.

“ಸರ್ಕಾರದ ಬದಲಾವಣೆ ಇದೆ ಎಂಬ ಸಂದೇಶವನ್ನು ಜಗತ್ತಿಗೆ ಕಳುಹಿಸಲು ಈ ಚುನಾವಣೆ ಸಹಾಯವಾಗಿದೆ ಎಂದು ಆ್ಯಂಟನಿ ತಿಳಿಸಿದ್ದಾರೆ. ಚುನಾವಣಾ ವಿಜಯದ ನಂತದ ಕಾರ್ಯಕರ್ತರು ಮತ್ತು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ಇತರ ದೇಶಗಳ ಜೊತೆಗಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತೇನೆ, ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಹಾಗೂ ಕಾರ್ಮಿಕರನ್ನು ಬಲಪಡಿಸುವ ಕೆಲವನ್ನು ಮಾಡುತ್ತೇವೆ. ಆರ್ಥಿಕವಾಗಿ ಬಲಪಡಿಸುವ ಯೋಜನೆಯನ್ನು ನಮ್ಮ ಸರಕಾರ ಹಾಕಿ ಕೊಳ್ಳಲಿದೆ. ಒಟ್ಟಿನಲ್ಲಿ ದೇಶದ ಜನರಿಗೆ ಉತ್ತಮ ಆಡಳಿತವನ್ನು ನೀಡುತ್ತೇವೆ ಎಂದು ತಿಳಿಸಿದರು. ದೇಶದ 31 ನೇ ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಅರ್ಪಿಸಿದರು.”ಅಂಗವಿಕಲ ಪಿಂಚಣಿದಾರರಾಗಿದ್ದ ಒಂಟಿ ಅಮ್ಮನ ಮಗ, ಕ್ಯಾಂಪರ್‌ಡೌನ್‌ನ ರಸ್ತೆಯ ಸಾರ್ವಜನಿಕ ವಸತಿಗೃಹದಲ್ಲಿ ಬೆಳೆದ ಹುಡುಗ  ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದಾನೆ. ಒಂಬತ್ತು ವರ್ಷಗಳ ಸಂಪ್ರದಾಯವಾದಿ ಆಡಳಿತವನ್ನು ಕೊನೆಗೊಳಿಸಲು ಸ್ಕಾಟ್ ಮಾರಿಸನ್ ಅವರನ್ನು ಅಧಿಕಾರದಿಂದ ಹೊರಹಾಕಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ಆಸ್ಟ್ರೇಲಿಯದ ಫೆಡರಲ್ ಚುನಾವಣೆ ಹೊಸ ಸರ್ಕಾರ ರಚಿಸಲು ಆಡಳಿತಾರೂಢ ಲಿಬರಲ್-ನ್ಯಾಷನಲ್ ಒಕ್ಕೂಟ ಹಾಗೂ ವಿರೋಧ ಪಕ್ಷವಾದ ಲೇಬರ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆಸ್ಟ್ರೇಲಿಯನ್ ಚುನಾವಣಾ ಆಯೋಗದ (ಎಇಸಿ) ಪ್ರಕಾರ ದೇಶಾದ್ಯಂತ 7,000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಆಸ್ಟ್ರೇಲಿಯನ್ನರು ತಮ್ಮ ಮತಚಲಾಯಿಸಿದ್ದಾರೆ. ಶನಿವಾರ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಯಿತು.

Donate Janashakthi Media

Leave a Reply

Your email address will not be published. Required fields are marked *