ಅತ್ತಿಬೆಲೆ ಪಟಾಕಿ ದುರಂತ| ಮೃತರ ಸಂಖ್ಯೆ 16ಕ್ಕೆ ಏರಿಕೆ

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್‌ ಎಂಬುವವರು ಗುರುವಾರ (ಅಕ್ಟೋಬರ್-11) ಬೆಳಿಗ್ಗೆ‌ ಮೃತಪಟ್ಟಿದ್ದಾರೆ. ಇದರೊಂದಿಗೆ ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತದ ನಂತರ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ

ವೆಂಕಟೇಶ್‌ ಸ್ನೇಹಿತನೊಂದಿಗೆ ಪಟಾಕಿ ಖರೀದಿಗೆ ಹೋಗಿದ್ದ ಸಂದರ್ಭದಲ್ಲಿ ಪಟಾಕಿ ದುರಂತ ಸಂಭವಿಸಿತ್ತು. ದುರಂತದಲ್ಲಿ ಅವರ ಸ್ನೇಹಿತ ಪಾರಾಗಿದ್ದು, ವೆಂಕಟೇಶ್‌ ಗೋದಾಮಿನ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಬೆನ್ನು, ತಲೆ, ಕೈ ಕಾಲುಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದವು.

ಮೃತ ವೆಂಕಟೇಶ್‌(25) ಬೆಂಗಳೂರು ನಗರ ಜಿಲ್ಲೆಯ ಗಾರೆ ಭಾವಿಪಾಳ್ಯದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದ ಅವರು ಪ್ರವೃತ್ತಿಯಲ್ಲಿ ಬಾಡಿ ಬಿಲ್ಡರ್‌ ಆಗಿದ್ದರು. ಪರಿಚಯದವರ ಕಾರ್ಯಕ್ರಮಕ್ಕೆ ಪಟಾಕಿ ತರಲು ಅತ್ತಿಬೆಲೆಗೆ ಹೋಗಿದ್ದರು.

ದುರಂತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯುವಕ ತಮಿಳುನಾಡಿನ ದಿನೇಶ್‌ ಬುಧುವಾರ ಮೃತಪಟ್ಟಿದ್ದಾರೆ. ಇನ್ನೂ ಆರು ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೋ ನೋಡಿ:

 

Donate Janashakthi Media

Leave a Reply

Your email address will not be published. Required fields are marked *