ಡೆಲಿವರಿ ಬಾಯ್ ಮೇಲೆ ಯುವಕರ ಗುಂಪಿನಿಂದ ಹಲ್ಲೆ, ನಾಲ್ವರ ಬಂಧನ

ಬೀದರ್ : ಇಲ್ಲಿಯ ಓಲ್ಡ್ ಆದರ್ಶ ಕಾಲೋನಿಯ ರೈಲ್ವೆ ಗೇಟ್ ಹತ್ತಿರ ಮಂಗಳವಾರ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಡೆಲಿವರಿ ಬಾಯ್ ಓರ್ವನಿಗೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಕುಮಾರ ಹಲ್ಲೆಗೊಳಗಾದ ಯುವಕ. ವಯಸ್ಸಾದ ವ್ಯಕ್ತಿಯೊಂದಿಗೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಈತನನ್ನು ಯುವಕರ ಗುಂಪು ಅವಾಚ್ಯವಾಗಿ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕ ಅಲ್ಲಿಂದ ತನ್ನ ಕಚೇರಿಗೆ ತೆರಳಿದ್ದಾನೆ. ನಂತರ ಅಲ್ಲಿಯೂ ಆಗಮಿಸಿದ್ದ ಯುವಕರ ಗುಂಪು ವಿಜಯಕುಮಾರನ ಮತ್ತೆ ಹಲ್ಲೆ ನಡೆಸಿದಲ್ಲದೆ ಅಲ್ಲಿಯೇ ಇದ್ದ ಇನ್ನೋರ್ವ ಕಚೇರಿ ಸಿಬ್ಬಂದಿ ರೋಹನ ಎನ್ನುವಾತನ ಮೇಲೆಯೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಗಾಯಾಳು ವಿಜಯಕುಮಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿಸಂದರ್ಭ ಬಂದರೆ ಕುಮಾರಸ್ವಾಮಿ ಬಂಧನ – ಸಿಎಂ ಸಿದ್ದರಾಮಯ್ಯ

ಪ್ರಕರಣದ ಹಿನ್ನೆಲೆ : ‘ನಗರದ ಓಲ್ಡ್‌ ಆದರ್ಶ ಕಾಲೊನಿಯಲ್ಲಿ ಮಂಗಳವಾರ ವಿಜಯಕುಮಾರ್‌ ಡೆಲಿವರಿಗೆ ಹೋಗಿದ್ದಾಗ, ಬೈಕ್‌ ಪರಸ್ಪರ ತಾಕಿದ್ದರಿಂದ ಕೆಲವರು ಜಗಳ ಮಾಡಿಕೊಳ್ಳುತ್ತಿದ್ದರು. ಇದನ್ನು ನೋಡಿ ವಿಜಯಕುಮಾರ್‌ ಮಧ್ಯ ಪ್ರವೇಶಿಸಿ ಈ ರೀತಿ ಜಗಳವಾಡದಂತೆ ಸಲಹೆ ಮಾಡಿ ತೆರಳಿದ್ದಾರೆ. ಆನಂತರ ಯುವಕರ ಗುಂಪು ಅವರ ಬೆನ್ನಟ್ಟಿ ಅಮೆಜಾನ್‌ ಕಚೇರಿಗೆ ಹೋಗಿ ಹಲ್ಲೆ ನಡೆಸಿದ್ದರು.

‘ಓಲ್ಡ್‌ ಆದರ್ಶ ಕಾಲೊನಿಯಲ್ಲಿ ಮಂಗಳವಾರ ಮಧ್ಯಾಹ್ನ ವಸ್ತುಗಳ ಡೆಲಿವರಿಗೆ ಬೈಕ್‌ನಲ್ಲಿ ಹೋಗಿದ್ದೆ. ಈ ವೇಳೆ ರಸ್ತೆಯಲ್ಲಿ ಸೀನಿಯರ್‌ ಸಿಟಿಜನ್‌ ಜೊತೆ ಮೂರ್ನಾಲ್ಕು ಜನ ಯುವಕರು ಜಗಳವಾಡುತ್ತಿದ್ದರು. ಅವರ ನೆರವಿಗೆ ನಾನು ಹೋಗಿದ್ದೆ. ಯುವಕರು ಅವರನ್ನು ಬಿಟ್ಟು ನನ್ನೊಂದಿಗೆ ಜಗಳಕ್ಕಿಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು. ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಅವರು ಬೆನ್ನಟ್ಟಿ ನನ್ನ ಕಚೇರಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿರುವ ರೋಹನ್‌ ಮೇಲೂ ಹಲ್ಲೆ ಮಾಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ವಿಜಯಕುಮಾರ್‌ ದೂರು ನೀಡಿದ್ದರು.

Donate Janashakthi Media

Leave a Reply

Your email address will not be published. Required fields are marked *