ದಲಿತ ಪೇದೆಯ ಮದುವೆ ಮೆರವಣಿಗೆ ವೇಳೆ ಸವರ್ಣಿಯರ ದಾಳಿ; ಕಲ್ಲು ತೂರಾಟ

ಮೀರತ್‌: ಬುಲಂದ್ ಶಹರ್ ನಲ್ಲಿ ಸವರ್ಣಿಯರ ಗುಂಪೊಂದು ದಲಿತ ಪೇದೆಯ ಮದುವೆ ಮೆರವಣಿಗೆ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲಖಾವತಿಯ ಪೇದೆಯೋರ್ವರ ಜೊತೆ ಗಾಝಿಯಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ರಾಬಿನ್ ಸಿಂಗ್(31) ಗೆ ವಿವಾಹ ನಡೆದಿದೆ. ವಿವಾಹದ ಬಳಿಕ ಮದುವೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ತಮ್ಮ ಕೇರಿಯಲ್ಲಿ ದಲಿತ ವರ ಮದುವೆ ಮೆರವಣಿಗೆ ನಡೆಸದಂತೆ ಸವರ್ಣೀಯರು ತಡೆದು ಕಲ್ಲು ತೂರಾಟವನ್ನು ನಡೆಸಿದ್ದಾರೆ. ಕಲ್ಲು ತೂರಾಟ ಮತ್ತು ದಾಳಿಯಿಂದ ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲವರು ಗಾಯಗೊಂಡಿದ್ದಾರೆ.

ಈ ಕುರಿತು ವರನ ತಂದೆ ನಂದ್ರಾಮ್ ಪ್ರತಿಕ್ರಿಯಿಸಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಜಹಾಂಗೀರಾಬಾದ್ ಪ್ರದೇಶದ ಟಿಟೋನಾ ಗ್ರಾಮದಲ್ಲಿ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಠಾಕೂರ್ ಸಮುದಾಯಕ್ಕೆ ಸೇರಿದ 20 ರಿಂದ 25 ಮಂದಿ ಮೆರವಣಿಗೆಯನ್ನು ತಡೆದಿದ್ದಾರೆ ಎಂದರು.

ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ICDS ಪ್ರತ್ಯೇಕ ನಿರ್ದೇಶನಾಲಯ ಮಾಡಲು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ

ಡಿಜೆ ಸಂಗೀತದೊಂದಿಗೆ ನಮ್ಮ ಕೇರಿಯಲ್ಲಿ ಮದುವೆ ಮೆರವಣಿಗೆ ಸಾಗದಂತೆ ಅವರು ಆಕ್ಷೇಪಿಸಿದ್ದಾರೆ. ಅವರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ವರನನ್ನು ಕುದುರೆ ಮೇಲಿನಿಂದ ಕೆಳಗಿಳಿಸಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವರಿಗೆ ಗಾಯವಾಗಿದ್ದು, ನನ್ನ ಪುತ್ರ ಸ್ವಲ್ಪದರಲ್ಲೇ ಪಾರಾಗಿದ್ದಾನೆ ಎಂದು ಹೇಳಿದ್ದಾರೆ.

ಈ ಕುರಿತು ಗ್ರಾಮೀಣ ಎಸ್ಪಿ ರೋಹಿತ್ ಮಿಶ್ರಾ ಅವರು ಪ್ರತಿಕ್ರಿಯಿಸಿದ್ದು, ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಹಾಕಿದ್ದಕ್ಕೆ ಸಂಬಂಧಿಸಿ ಜಗಳವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಘಟನೆ ಸಂಬಂಧಿಸಿ ಗಲಭೆ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: Karnataka legislative assembly Day 06 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *