ಮಂಗಳೂರು: ಇತ್ತೀಚೆಗೆ ನಡೆದಿದ್ದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ನಿಖರವಾದ ಕಾರಣವನ್ನು ಬೇಧಿಸಿರುವ ಪೊಲೀಸರು ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಮೃತ ವಿಜಯಲಕ್ಷ್ಮಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ನೂರ್ ಜಹಾನ್ ಎಂಬ ಮಹಿಳೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳೂರಿನ ಮಾರ್ಗನ್ಸ್ ಗೇಟ್ ನಲ್ಲಿ ನಾಲ್ವರು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದವು. ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿದ್ದು, ವಿಜಯಲಕ್ಷ್ಮೀ ತಮ್ಮ ಇಬ್ಬರು ಮಕ್ಕಳ ಜತೆ ಜಹಾನ್ ಮನೆಯಲ್ಲಿ ಇದ್ದಳು. ಜಹಾನ್, ನಾಗೇಶ್ ಜತೆ ಸಾಕಷ್ಟು ಬಾರಿ ಗಲಾಟೆ ಮಾಡಿದ್ದಳು. ನಾಗೇಶ್, ನೂರ್ ಜಹಾನ್ ಮನೆಗೆ ಹೋಗಿ ತಮ್ಮ ಕುಟುಂಬಸ್ಥರ ಬಗ್ಗೆ ಮಾತನಾಡುತ್ತಿದ್ದರು. ನನ್ನ ಪತ್ನಿ, ಮಕ್ಕಳನ್ನು ಕಳುಹಿಸಿಕೊಡಿ ಎಂದು ಕೇಳಿಕೊಳ್ಳುತ್ತಿದ್ದರು. ನಾಗೇಶ್ ತನ್ನ ಮಕ್ಕಳು, ಪತ್ನಿ ನಾಪತ್ತೆ ಎಂದು ದೂರು ಸಹ ನೀಡಿದ್ದ. ಆದರೆ ಗಂಡ ನನಗೆ ಹಿಂಸೆ ನೀಡುತ್ತಾರೆ ಎಂದು ಪತ್ನಿ ಪ್ರತಿದೂರು ನೀಡಿದ್ದಳು. ನಂತರದಲ್ಲಿ ಮೂವರನ್ನು ಕೊಲೆ ಮಾಡಿ ನಾಗೇಶ್ ನೇಣು ಹಾಕಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ.
ವಿಜಯಲಕ್ಷ್ಮಿ ಅವರಿಗೆ ನೂರ್ ಜಹಾನ್ ಮತ್ತೊಂದು ಮದುವೆ ಮಾಡುವ ಭರವಸೆ ನೀಡಿದ್ದಳು. ನಾಗೇಶ್ಗೆ ಕುಡಿಯುವ ಚಟ ಇತ್ತು. ರಾತ್ರಿ 11.30 ಸುಮಾರಿಗೆ ಕೊಲೆ ಮಾಡಿದ್ದಾನೆ. ಎಎಸ್ಐಗೆ ನಾಗೇಶ್ ಅವರಿಗೆ ಸಂದೇಶವೊಂದನ್ನು ಕಳುಹಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.
ಡಿಸೆಂಬರ್ 7ರ ರಾತ್ರಿ ಮೊದಲು ಉಸಿರುಗಟ್ಟಿಸಿ ಪತ್ನಿ ವಿಜಯಲಕ್ಷ್ಮೀಯನ್ನು ನಾಗೇಶ್ ಕೊಲೆ ಮಾಡಿದ್ದಾರೆ. ನಂತರ ತನ್ನ ಮಗಳಾದ ಸಪ್ನಳನ್ನು ಮೂಗು ಬಾಯಿ ಮುಚ್ಚಿ ಸಾಯಿಸಿದ್ದಾನೆ. ಮಗ ಸಮರ್ಥ್ ನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಅಂದು ರಾತ್ರಿ ಪೂರ್ತಿ ಶವಗಳೊಂದಿಗೆ ನಿದ್ದೆ ಮಾಡಿದ್ದ ನಾಗೇಶ್ ಬೆಳಿಗ್ಗೆ 8 ಗಂಟೆಗೆ ಎಎಸ್‌ಐ ಅವರಿಗೆ ಸಂದೇಶವನ್ನು ಕಳುಹಿಸಿದ್ದನು.