ಪ್ರಜ್ವಲ್ ರೇವಣ್ಣನಿಂದ ಇತರೆ ರೋಗಿಗಳಿಗೆ ತೊಂದರೆ

ಬೆಂಗಳೂರು : ಎಸ್‌ಐಟಿಯಿಂದ ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್ ರೇವಣ್ಣನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮೊದಲು ಅಧಿಕಾರಿಗಳು ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್ ನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲುದ್ದ ಇತರೆ ರೋಗಿಗಳೂ ಚಿಕಿತ್ಸೆಗಾಗಿ ಪರದಾಡುವಂತಾಯಿತು.

ಪ್ರಜ್ವಲ್ ವೈದ್ಯಕೀಯ ಪರೀಕ್ಷೆ ವೇಳೆ, ಬೌರಿಂಗ್ ಆಸ್ಪತ್ರೆ ಬಳಿ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಪಿಯ ಒಂದು ತುಕಡಿ ನಿಯೋಜನೆ ಮಾಡಲಾಗಿತ್ತು. ತುರ್ತು ನಿಗಾ ಘಟಕದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರಿಂದಾಗಿ ಇತರೆ ರೋಗಿಗಳು ಪರದಾಡುವಂತಾಯಿತು.

ಎಮರ್ಜೆನ್ಸಿ ಅಂತಾ ಆಟೋದಲ್ಲಿ ಬಂದ ರೋಗಿಯನ್ನ ಗೇಟ್ ಬಳಿಯೇ ತಡೆದು ಸೆಕ್ಯೂರಿಟಿ ಗಾರ್ಡ್ಸ್ ದರ್ಪ ಮೆರೆದರು. ನಡೆದುಕೊಂಡು ಹೋಗಿ, ಇಲ್ಲಿಂದ ಮುಂದೆ ವಾಹನ ಬಿಡೋಲ್ಲ ಎಂದು ತಡೆದರು. ಹೊಟ್ಟೆ ನೋವು ಅಂತಾ ಪೀಣ್ಯದಿಂದ ಬಂದಿದ್ದ‌ ರೋಗಿಯನ್ನು ತಡೆದರು.

ಇದನ್ನು ಓದಿ : ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು : ಬಸವರಾಜ ಬೊಮ್ಮಾಯಿ

ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವೃದ್ಧರೊಬ್ಬರನ್ನು ತಡೆದು ಪೊಲೀಸರು ವಾಪಸ್ ಕಳಿಸಿದರು. ಪರೀಕ್ಷೆಗೆಂದು ಬ್ಯಾಂಡೇಜ್ ಸಮೇತ ರೋಗಿ ಆಸ್ಪತ್ರೆಗೆ ಬಂದಿದ್ದರು. ಈ ಬೆಳವಣಿಗೆ ಸಂಬಂಧ ‘ಪಬ್ಲಿಕ್ ಟಿವಿ’ ಸುದ್ದಿ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಆಸ್ಪತ್ರೆ ಮುಖ್ಯ ಗೇಟ್ ತೆರೆದು ರೋಗಿಗಳಿಗೆ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ರೋಗಿಗಳಿಗೆ ತೊಂದರೆ ಆಗದಂತೆ ಆಸ್ಪತ್ರೆಗೆ ಬಿಡುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಸೆಕ್ಯೂರಿಟಿಗಳು ಮುಚ್ಚಿದ್ದ ಗೇಟ್ ತೆರೆದು ಎಂದಿನಂತೆ ರೋಗಿ ಮತ್ತು ಕುಟುಂಬದವರಿಗೆ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಟ್ಟರು.

ಇದನ್ನು ನೋಡಿ : ಹಾಸನ ಚಲೋ | ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ – ಸಹಸ್ರಾರು ಜನರ ಹಕ್ಕೋತ್ತಾಯJanashakthi Media

Donate Janashakthi Media

Leave a Reply

Your email address will not be published. Required fields are marked *