ಲಿಂಗಸಗೂರು: ಸಿಐಟಿಯು ಸಂಘಟನೆಯ ಮುಖಂಡರೊಂದಿಗೆ ಲಿಂಗಸ್ಗೂರು ಸಹಾಯಕ ಆಯುಕ್ತರ(ಎಸಿ) ಅಧ್ಯಕ್ಷತೆಯಲ್ಲಿ ಮುದಗಲ್ ನ ಹಮಾಲಿ ಕಾರ್ಮಿಕರ ಕೂಲಿದರ ಸಮಸ್ಯೆ ಪರಿಹರಿಸುವ ಕುರಿತು ಎಸಿ ಕಚೇರಿಯಲ್ಲಿ ಸಭೆ ನಡೆಸಿದರು. ಸಂಘಟನೆಯ
ಕೂಲಿ ನಿರಾಕರಿಸಿದ ಟ್ರೇಡರ್ಸ್ ಮಾಲೀಕರನ್ನು ಸಭೆಗೆ ಹಾಜರಾಗಲು ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ವಾರದ ಮುಂಚೆ ನೊಟೀಸ್ ನೀಡಿದ್ದರೂ ಸಭೆಗೆ ಗೈರು ಆಗಿದ್ದರು. ಸಭೆಗೆ ಹೋಗಬೇಡಿ ಎಂದು ಮದಿನಾ ಟ್ರೇಡರ್ಸ್ ಮಾಲೀಕ ಟಿಪ್ಪು ಸಾಬ್ ಹೇಳಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಪಿ ಎಸ್ಐ, ಕಾರ್ಮಿಕ ನಿರೀಕ್ಷಕರು, ತಹಶೀಲ್ದಾರರು ಈ ಹಿಂದೆ ಸಂಧಾನ ಸಭೆ ಕರೆದಾಗಲೂ ಸಭೆಗೆ ಗೈರು ಆಗಿ ಆಡಳಿತಕ್ಕೆ ಸವಾಲಾಗಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಕ್ರಮ
ಇದನ್ನೂ ಓದಿ:ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ| ಬಯ್ಯಾಪೂರ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿದ ರೈತರು
ಒಬ್ಬ ವ್ಯಕ್ತಿ ಇಡೀ ಆಡಳಿತ ವ್ಯವಸ್ಥೆಯನ್ನು ಆಟ ಆಡಿಸುತ್ತಿದ್ದಾನೆ ಮತ್ತು ಸರಕಾರದ ನಿಯಮ ಉಲ್ಲಂಘನೆ ಟ್ರೇಡರ್ಸ್ ನ ಲೈಸೆನ್ಸ್ ತೆಗೆದುಕೊಳ್ಳದೆ, ತೆರಿಗೆ ಕಟ್ಟದೆ ಮಾಡಿ ವ್ಯಾಪಾರ ವಹಿವಾಟು ನಡೆಸುತ್ತಾ ಈ ಕಡೆ ಸರ್ಕಾರಕ್ಕೂ ಇನ್ನೊಂದೆಡೆ ಶ್ರಮವನ್ನೇ ನಂಬಿ ಜೀವನ ನಡೆಸುವ ಹಮಾಲಿ ಕಾರ್ಮಿಕರಿಗೂ ವಂಚನೆ ಮಾಡುತ್ತಿದ್ದಾರೆ. ಸರಿಯಾದ ಹಮಾಲಿ ದರ ನೀಡುವವರಿಗೂ ಕೂಲಿ ನೀಡದಂತೆ ಪ್ರೇರೇಪಿಸುವ ಟಿಪ್ಪು ಮತ್ತು ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ಮುಖಂಡರು ಆಗ್ರಹಿಸಿದರು.
ಮುದಗಲ್ ಪಟ್ಟಣದ ಹಮಾಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಹಮಾಲಿ ಕೂಲಿದರ ಹೆಚ್ಚಳಕ್ಕೆ ನಿರಾಕರಿಸಿದ ಮದೀನಾ ಟ್ರೇಡರ್ಸ್ ನ ಟಿಪ್ಪು ಸಾಬ್ ಸೇರಿದಂತೆ ಮುದಗಲ್ ನ ಇತರ ಅಂಗಡಿಗಳ ಲೈಸನ್ಸ್ ರದ್ದುಪಡಿಸಬೇಕು ಮತ್ತು ಅಂಗಡಿ ಮಾಲೀಕರೊಂದಿಗೆ ಶಾಮೀಲಾಗಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳದ ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಯನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಘಟನೆಯು ನೋಂದಾಯಿತ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಲಿಂಗಸಗೂರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಮುಂದೆ ಸುಮಾರು ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರ ಭಾಗವಾಗಿ ಸಭೆ ಏರ್ಪಡಿಸಲಾಗಿತ್ತು. ಕ್ರಮ
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಶಂಶಾಲಮ್, ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ನಿರ್ಣಯ ಮಾಡಿದರು.ಈ ಸಂದರ್ಭದಲ್ಲಿ ಹಮಾಲಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯ, ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಯದರ್ಶಿ ಮರಿಸ್ವಾಮಿ, ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ಮುಖಂಡರಾದ ಹನೀಫ್, ಫಕ್ರುದ್ದೀನ್, ಮಲ್ಲೇಶ್ ಕೋಠಾ, ನಿಂಗಪ್ಪ, ಬಾಬಾಜಾನಿ, ವಿಶ್ವ ಅಂಗಡಿ, ಅಂಜಪ್ಪ, ನಾಗರಾಜ್, ಕಾಶಿಪತಿ, ಬಾಲಾಜಿ ಹಟ್ಟಿ, ತೋಟೇಶ್ವರ್, ಆಂಜನೇಯ, ಸದ್ದಾಮ್ ಹುಸೇನ್, ಮಹಿಬು, ಮಹಮ್ಮದ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಡಿಯೋ ನೋಡಿ:ರೈತ, ಕಾರ್ಮಿಕ, ದಲಿತ, ಕೂಲಿಕಾರರ, ಮಹಿಳೆಯರ ಹಕ್ಕುಗಳಿಗಾಗಿ ಮಹಾಧರಣಿ Janashakthi Media