ಬೆಂಗಳೂರು: ಅಧಿಸೂಚನೆ ಹೊರತಾಗಿಯೂ ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಸದ ಸರಕಾರದ ಕ್ರಮವನ್ನು ವಿರೋಧಿಸಿ ಇಂದು, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ನೆನೆಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸುವಂತೆ ಹಾಗೂ ನ್ಯಾಯಲಯದ ಆದೇಶಕ್ಕೋಳಪಟ್ಟಂತಹ ಕಂಡಿಷನಲ್ ನೇಮಕಾತಿ ಆದೇಶ ನೀಡುವಂತೆ ಸಹಾಯಕ ಪ್ರಾಧ್ಯಾಪಕರ ಬಳಗದ ರಾಜ್ಯ ನಿಯೋಗ ಮನವಿ ಮಾಡಿದೆ.
ಇದನ್ನೂ ಓದಿ:ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಶಾಲಾ-ಕಾಲೇಜು ಅನುದಾನಿತ ನೌಕರರ ಆಗ್ರಹ
ಈ ಕುರಿತು ಜನಶಕ್ತಿ ಮೀಡಿಯ ಜೊತೆ ಮಾತನಾಡಿದ ಜೈಶಂಕರ್, ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು 2021ರ ಅಕ್ಟೋಬರ್ನಲ್ಲಿ ಹೊರಡಿಸಿತ್ತು. 2022 ರ ಮಾರ್ಚ್ನಲ್ಲಿ ಪರೀಕ್ಷೆ ನಡೆಸಿತ್ತು. ಈ ವೇಳೆ ಭೂಗೋಳಶಾಸ್ತ್ರ ವಿಷಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕಂಡು ಬಂದಿತ್ತು. ಈ ಕುರಿತು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅಂತಿಮ ಆಯ್ಕೆ ಪಟ್ಟಿ ಸಲ್ಲಿಸಲಾಗಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡಿತ್ತು. ಅದಾದ ನಂತರ ಯಾವುದೇ ಪ್ರಕ್ರಿಯೆಗಳು ಆರಂಭಗೊಂಡಿರುವುದಿಲ್ಲ. ಇದರಿಂದಾಗಿ ಪ್ರಮಾಣಿಕವಾಗಿ ಕಠೀಣ ಪರಿಕ್ಷೇ ಬರೆದು ಆಯ್ಕೆಯಾದ ಅಭ್ಯಥಿ೯ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕವಾಗಿ, ಆಥಿ೯ಕವಾಗಿ, ಮಾನಸಿಕವಾಗಿ ಜಜ೯ರಿತರಾಗಿದ್ದಾವೆ ಎಂದರು. ಈ ಕುರಿತು ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಸಚಿವರು ಸ್ಪಂದಿಸುವುದಾಗಿ ತಿಳಿಸಿದ್ದಾರೆ. ರಾಜ್ಯ ಪಾಲರಿಗೂ ಮನವಿ ಸಲ್ಲಿಸಿದ್ದೇವೆ ಎಂದರು.
ಸರಕಾರಿ ಕೂಡಲೆ ಸ್ಪಂದಿಸದೆ ಹೋದಲ್ಲಿ ಬೆಂಗಲೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಸಹಾಯಕ ಪ್ರಾಧ್ಯಾಪಕರ ಬಳಗ ಎಚ್ಚರಿಸಿದೆ. ನಿಯೋಗದಲ್ಲಿ ಶ್ವೇತ, ನಾಗಲಕ್ಷ್ಮೀ, ಕಿಶೋರ್, ನಾಗೇಂದ್ರ, ಪ್ರಿಯಾಂಕ, ಸಂತೋಶ್ ಸೇರಿದಂತೆ ಅನೇಕರು ಇದ್ದರು.